ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ ಚಿತ್ರ ನಿನ್ನೆಗೆ 6 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿದೆ. ಈ ಸಂತೋಷವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದೆ.
ನಟ ರಕ್ಷಿತ್ ಶೆಟ್ಟಿ, ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯ ಕಿರಿಕ್ ಪಾರ್ಟಿ ಸಿನಿಮಾ 2016ರ ಡಿಸೆಂಬರ್ 30ಕ್ಕೆ ತೆರೆಕಂಡು ಸೂಪರ್ ಹಿಟ್ ಆಯಿತು. ಸಾನ್ಯ ಮತ್ತು ಕರ್ಣನ ಲವ್ ಸ್ಟೋರಿ ಸಿನಿಪ್ರಿಯರ ಮನ ಗೆದ್ದಿತ್ತು. ಪ್ರೇಮ ಕಥೆಯನ್ನು ನಿರ್ದೇಶಕ ರಿಷಬ್ ಶೆಟ್ಟಿ ತೆರೆ ಮೇಲೆ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದರು. ಇವರು ಅಭಿನಯ ಮಾತ್ರವಲ್ಲದೇ ನಿರ್ದೇಶನದಲ್ಲೂ ಸಖತ್ ಹೆಸರು ಮಾಡಿದ್ದಾರೆ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿರುವ ಕಾಂತಾರ ಚಿತ್ರ ಇದಕ್ಕೆ ತಾಜಾ ಉದಾಹರಣೆ.
ರಿಷಬ್ ಶೆಟ್ಟಿ ಪೋಸ್ಟ್: 'ಕಿರಿಕ್ ಪಾರ್ಟಿ' ನೆಡೆದು ಆರು ವರ್ಷಗಳ ನಂತರವೂ ಪಾರ್ಟಿಗೆ ಕಳೆ ತಂದ ನಿಮ್ಮ ಸದ್ದು, ಗದ್ದಲ, ಸಿಳ್ಳೆಗಳು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ. ಮತ್ತೆ ಹಿಂತಿರುಗಿ ನೋಡುವಂತೆ ಮಾಡುತ್ತವೆ. ಈ ಸಂಭ್ರಮದ ಭಾಗವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ:ಕಮರ್ಷಿಯಲ್ ಸಿನಿಮಾ ಮಾಡಬೇಕಿತ್ತು ಅಂತಾ ಖುಷಿ ರವಿ ಹೇಳಿದ್ಯಾಕೆ?
ರಶ್ಮಿಕಾ ಮಂದಣ್ಣ ಏನಂದ್ರು?ಕಿರಿಕ್ ಪಾರ್ಟಿಗೆ ಆರು ವರ್ಷ. ಎಲ್ಲವೂ ಆರಂಭವಾದ ದಿನ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಜತೆಗೆ ಕಿರಿಕ್ ಪಾರ್ಟಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ತೀವ್ರ ಟೀಕೆಗೂ ನಟಿ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಸೌತ್ ಸಿನಿಮಾ ಬಗ್ಗೆ ಮಾತನಾಡಿದ್ದು, ಸಿನಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮಧ್ಯೆ ಕಿರಿಕ್ ಪಾರ್ಟಿ ಸಿನಿಮಾ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಂಗಭೂಮಿ ಕಲಾವಿದನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದ ಮೂಲಕ ಏಳು ಜನರಿಗೆ ಹೊಸ ಜೀವನ ಕೊಟ್ಟ ನಟ
ಸಕ್ಸಸ್ ಕಂಡ ಶೆಟ್ಟಿ ಬಳಗ:ರಿಕ್ಕಿ ಸಿನಿಮಾ ಮೂಲಕ ರಿಷಬ್, ರಕ್ಷಿತ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಆ ಚಿತ್ರದಲ್ಲೂ ರಕ್ಷಿತ್ ಶೆಟ್ಟಿ ನಟಿಸಿದ್ದರೆ, ರಿಷಬ್ ಶೆಟ್ಟಿ ನಟಿಸಿದ್ದರು. ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಹರಿಪ್ರಿಯಾ ಅಭಿನಯಿಸಿದ್ದರು. ಶೆಟ್ಟಿ ಬಳಗದ ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದಲ್ಲಿದ್ದರು. ಈ ಚಿತ್ರದ ಹಾಡುಗಳು ಗಮನ ಸೆಳೆದಿದ್ದರೂ ಹೇಳುವಷ್ಟೇನು ಸಕ್ಸಸ್ ಕಂಡಿರಲಿಲ್ಲ. ಆದಾದ ಬಳಿಕ ಬಂದ ಕಿರಿಕ್ ಪಾರ್ಟಿ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರವನ್ನೂ ಕೂಡ ರಿಷಬ್ ನಿರ್ದೇಶಿಸಿದ್ದು, ರಕ್ಷಿತ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ದಾಖಲೆ ಮಟ್ಟದ ಕಲೆಕ್ಷನ್ (50 ಕೋಟಿ) ಮಾಡಿತು ಈ ಸಿನಿಮಾ. ಪರಭಾಷೆಗೂ ಡಬ್ ಆಯಿತು ಕನ್ನಡದ ಕಿರಿಕ್ ಪಾರ್ಟಿ.
ಇದನ್ನೂ ಓದಿ:ಪವಿತ್ರ ಬಂಧನಕ್ಕೆ ತೆಲುಗು ನಟ ನರೇಶ್ ಸಜ್ಜು.. ವಿಡಿಯೋ ಮೂಲಕ ಶುಭಸುದ್ದಿ ಹಂಚಿಕೊಂಡ ಜೋಡಿ