ಏ.1ರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್, ದಿವಂಗತ ಸಂಚಾರಿ ವಿಜಯ್ ನಟನೆಯ ತಲೆತಂಡ, ಡಾರ್ಲಿಂಗ್ ಕೃಷ್ಣ ಅಭಿನಯದ ಲೋಕಲ್ ಟ್ರೈನ್, ನಿರ್ದೇಶಕ ಗುರು ಪ್ರಸಾದ್ ಅಭಿನಯದ ಬಾಡಿ ಗಾಡ್, ಯಶ್ ಶೆಟ್ಟಿ ಅಭಿನಯದ ಇನ್‌ಸ್ಟೆಂಟ್ ಕರ್ಮ ಸೇರಿದಂತೆ 6 ಚಿತ್ರಗಳು ಪ್ರೇಕ್ಷಕರ ಮುಂದೆ ಬಂದಿವೆ.
ಯಶ್ ಶೆಟ್ಟಿ ಅಭಿನಯದ ಇನ್ ಸ್ಟೆಂಟ್ ಕರ್ಮ ಸಿನಿಮಾ ಬಿಡುಗಡೆ ಐ ಲವ್ ಯೂ ಸಿನಿಮಾ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹೋಂ ಮಿನಿಸ್ಟರ್ ಸಿನಿಮಾ ಇಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಫ್ಯಾಮಿಲಿ ಡ್ರಾಮ ಜೊತೆಗೆ ಸಸ್ಪೆನ್ಸ್ ಕಥೆ ಒಳಗೊಂಡಿರುವ ಈ ಚಿತ್ರದಲ್ಲಿ, ಉಪೇಂದ್ರ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಉಪ್ಪಿ ಜೊತೆ ವೇದಿಕಾ ಜೋಡಿಯಾಗಿದ್ದು, ಸುಜಯ್ ಶ್ರೀ ಹರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಮೂರು ವರ್ಷಗಳ ನಂತರ ಉಪೇಂದ್ರ, ಹೋಂ ಮಿನಿಸ್ಟರ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ.
ದಿವಂಗತ ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ದಿವಂಗತ ಸಂಚಾರಿ ವಿಜಯ್ ಅಭಿನಯದ ತಲೆದಂಡ ಸಿನಿಮಾ ಕೂಡ ಇಂದು ಬಿಡುಗಡೆ ಆಗಿದೆ. ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ಆದರೆ, ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ.
ಪ್ರವೀಣ್ ಕೃಪಾಕರ್ ನಿರ್ದೇಶನ ಚಿತ್ರಕ್ಕೆ ಇದ್ದು, ನಾಯಕಿ ಪಾತ್ರದಲ್ಲಿ ಚೈತ್ರಾ ಆಚಾರ್ ನಟಿಸಿದ್ದಾರೆ. ವಿಜಯ್ ತಾಯಿ ಪಾತ್ರದಲ್ಲಿ ಮಂಗಳಾ ನಟಿಸಿದ್ದು, ತಂದೆಯ ಪಾತ್ರದಲ್ಲಿ ರಮೇಶ್ ಪಂಡಿತ್, ಎಂ.ಎಲ್.ಎ ಆಗಿ ಮಂಡ್ಯ ರಮೇಶ್ ಬಣ್ಣ ಹಚ್ಚಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಭಿನಯದ ಲೋಕಲ್ ಟ್ರೈನ್ ಮಠ, ಎದ್ದೇಳು ಮಂಜುನಾಥ್ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಗುರು ಪ್ರಸಾದ್ ಅಭಿನಯದ ಬಾಡಿಗಾಡ್ ಎಂಬ ಸಿನಿಮಾ ಕೂಡ ಇಂದು ಬಿಡುಗಡೆ ಆಗಿದೆ. ಗಣಪ, ಕರಿಯ 2 ಚಿತ್ರಗಳನ್ನ ನಿರ್ದೇಶನ ಮಾಡಿದ್ದ ಪ್ರಭು ಶ್ರೀನಿವಾಸ್ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸತ್ತ ವ್ಯಕ್ತಿಯ ದೇಹದ ಹಿಂದೆ ಹೆಣೆಯಲಾಗಿರುವ ವಿಭಿನ್ನ ಕಥೆಯೇ ಬಾಡಿ ಗಾಡ್. ಇನ್ನು ಗುರು ಪ್ರಸಾದ್ ಜೊತೆ ಮನೋಜ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:ಅವರ ಸಿನಿಮಾ ಅವರೇ ನೋಡಲಿಲ್ಲ!! ನಿಧನದ ನಂತರ ಬಿಡುಗಡೆಯಾದ ನಟರ ಸಿನಿಮಾಗಳಿವು
ಡಾರ್ಲಿಂಗ್ ಕೃಷ್ಣ, ಮಿನಾಕ್ಷಿ ದೀಕ್ಷಿತ್, ಎಸ್ತರ್ ನರೋನಾ ಮುಖ್ಯ ಭೂಮಿಕೆಯಲ್ಲಿರೋ ಲೋಕಲ್ ಟ್ರೈನ್ ಸಿನಿಮಾ ಕೂಡ ಇವತ್ತು ತೆರೆಗೆ ಬಂದಿದೆ. ಈ ಸಿನಿಮಾವನ್ನ ವೈ.ಎನ್ ರುದ್ರಮುನಿ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಯಶ್ ಶೆಟ್ಟಿ ಅಭಿನಯದ ಇನ್ ಸ್ಟೆಂಟ್ ಕರ್ಮ ಹಾಗೂ ಬಹುಭಾಷೆ ನಟ ಸುಮನ್ ನಟನೆಯ ಬಂಜಾರ ಭಾಷೆಯ ಸೇವಾದಾಸ್ ಸಿನಿಮಾ ಕೂಡ ಪ್ರೇಕ್ಷಕರಿಗೆ ದರ್ಶನ ಕೊಟ್ಟಿವೆ. ಚಿತ್ರಮಂದಿರಗಳ ಕೊರತೆ ಇದ್ದರೂ ಈ ವಾರ ಆರು ಸಿನಿಮಾಗಳು ಬಿಡುಗಡೆ ಆಗಿವೆ.