ಕರ್ನಾಟಕ

karnataka

ETV Bharat / entertainment

ಯುವ ನಟ ಪ್ರವೀರ್​ ಶೆಟ್ಟಿ 'ಸೈರನ್' ಸಿನಿಮಾಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್, ಡಾಲಿ ಸಾಥ್ - Praveer Shetty Siren

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಅಭಿನಯದ ಸೈರನ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ.

Siren trailer release
ಸೈರನ್ ಟ್ರೇಲರ್ ಬಿಡುಗಡೆ

By

Published : May 16, 2023, 5:08 PM IST

'ಸೈರನ್' ಸ್ಯಾಂಡಲ್​​ವುಡ್​ನಲ್ಲಿ ಟೀಸರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ ಸಿನಿಮಾ. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಸಣ್ಣ ಟೀಸರ್​​ನಿಂದಲೇ ಸೌಂಡ್ ಮಾಡುತ್ತಿರುವ ಸೈರನ್ ಚಿತ್ರದ ಟ್ರೇಲರ್​​ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ನಟ ಡಾಲಿ ಧನಂಜಯ್ ಬಿಡುಗಡೆ ಮಾಡುವ ಮೂಲಕ ಈ ಚಿತ್ರತಂಡಕ್ಕೆ ಸಾಥ್ ನೀಡಿದರು. ಇವರಿಗೆ ನಿರ್ಮಾಪಕ ರಾಕ್‌ ಲೈನ್ ವೆಂಕಟೇಶ್ ಕೂಡ ಜೊತೆಯಾಗಿದ್ದರು. ಸದ್ಯ ಅನಾವರಣ ಆಗಿರುವ ಸೈರನ್ ಚಿತ್ರದ ಟ್ರೇಲರ್​ಗೆ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತವಾಗಿದೆ.

ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, 'ಪ್ರವೀರ್ ಶೆಟ್ಟಿ ಅವರನ್ನು ಮೊದಲು ನೋಡಿದಾಗ ಅವರು ಚಿಕ್ಕ ಹುಡುಗ. ಸದ್ಯ ಹೀರೋ ಆಗಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹೆಚ್ಚು ಅವಕಾಶ ಸಿಗಲಿ' ಎಂದು ಹಾರೈಸಿದರು.

ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್ ಮಾತನಾಡಿ, ಕನ್ನಡ ಎಂದು ಬಂದಾಗ ಹೋರಾಟ ನೆನಪಾಗುತ್ತದೆ. ನಾನು ಹಲವಾರು ವರ್ಷಗಳಿಂದ ಪ್ರವೀರ್​ ಶೆಟ್ಟಿ ಅವರನ್ನು ನೋಡುತ್ತಾ ಬಂದಿದ್ದೇವೆ. ಅವರ ಮನೆಯಿಂದ ಚಿತ್ರರಂಗಕ್ಕೆ ಒಂದು ಉಡುಗೊರೆಯಾಗಿ ಮಗನನ್ನು ಕೊಡುತ್ತಿದ್ದಾರೆ. ಟ್ರೇಲರ್ ನೋಡಿದಾಗ ಹೊಸ ಹುಡುಗ ಅನಿಸಲಿಲ್ಲ. ಅಷ್ಟು ಚೆನ್ನಾಗಿ ನಟಿಸಿದ್ದಾರೆ ಪ್ರವೀರ್. ಹೊಸದಾಗಿ ಬರುವವರು ಗುರಿ ಇಟ್ಟುಕೊಂಡು ಬರಬೇಕು, ಜೊತೆಗೆ ತಾಳ್ಮೆ ಇರಬೇಕು ಎಂದರು.

ಈ ಚಿತ್ರದ ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ, ನಾನು ಈ ದಿನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆ. ಶ್ರೀಮುರಳಿ ಅವರು ಟ್ರೇಲರ್‌ಗೆ ಧ್ವನಿ ಕೊಟ್ಟಿದ್ದು ಮತ್ತಷ್ಟು ಶಕ್ತಿ ಬಂದಂತಾಗಿದೆ. ನಿರ್ದೇಶಕರು ಶ್ರಮ ವಹಿಸಿ ಸಿನಿಮಾ ಮಾಡಿದ್ದಾರೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ಇದನ್ನೂ ಓದಿ:ಹೆಲ್ಮೆಟ್​​ ಇಲ್ಲದೇ ಸೆಲೆಬ್ರಿಟಿಗಳ ಬೈಕ್​​ ರೈಡ್: ಅಮಿತಾಭ್​​ ಬಳಿಕ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ಪೊಲೀಸ್​​ ಕ್ರಮ!

ಪ್ರವೀರ್ ಶೆಟ್ಟಿ ಜೊತೆ ತಮಿಳಿನ ಧೀನಾ, ಲಾಸ್ಯ, ಸ್ಪರ್ಶ ರೇಖಾ‌ ಸೇರಿದಂತೆ ಸಾಕಷ್ಟು ಕಲಾವಿದರು ಈ‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ರಾಜಾ ವೆಂಕಯ್ಯ ಈ ಸೈರನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾ. ಭಾರದ್ವಾಜ್ ಸಂಗೀತ ‌ನೀಡಿದ್ದು, ನಾಗೇಶ್ ಆಚಾರ್ಯ ಅವರ ಕ್ಯಾಮರಾ ವರ್ಕ್‌ ಇದೆ. ಡೆಕ್ಕನ್ ಕಿಂಗ್ ಬ್ಯಾನರ್‌ನಲ್ಲಿ ಬಿಜು ಶಿವಾನಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೇ. 26ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಸೈರನ್​ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌. ಚಿತ್ರ ಪ್ರವೀಣ್ ಶೆಟ್ಟಿ ಮಗ ಪ್ರವೀರ್ ಶೆಟ್ಟಿ ಅವರಿಗೆ ಒಳ್ಳೆ ಹೆಸರು ತಂದುಕೊಡುವ ಲಕ್ಷಣಗಳು ಕಾಣ್ತಾ ಇದೆ. ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದು ಇದೇ ಮೇ 26ರ ಬಳಿಕ ತಿಳಿದು ಬರಲಿದೆ.

ಇದನ್ನೂ ಓದಿ:ವಿವಾದಗಳ ನಡುವೆ ತೆರೆಕಂಡ 'ದಿ ಕೇರಳ ಸ್ಟೋರಿ' ಕಲೆಕ್ಷನ್ ಮತ್ತಷ್ಟು ಏರಿಕೆ..!​​

ABOUT THE AUTHOR

...view details