ಕರ್ನಾಟಕ

karnataka

ETV Bharat / entertainment

'ಎಣ್ಣೆ ಹೊಡೆಯೋ ಟೈಮಲ್ಲಿ ..': ಗಾಯಕಿ ಮಂಗ್ಲಿ ಹಾಡಿಗೆ ಮೆಚ್ಚುಗೆ - praveer shetty

ಸೈರನ್ ಸಿನಿಮಾದ 'ಎಣ್ಣೆ ಹೊಡೆಯೋ ಟೈಮಲ್ಲಿ ...' ಹಾಡು ಬಿಡುಗಡೆ ಆಗಿದೆ.

Siren movie song released
ಸೈರನ್ ಸಿನಿಮಾ ಸಾಂಗ್​ ರಿಲೀಸ್

By

Published : Jan 25, 2023, 6:55 PM IST

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಗ ಪ್ರವೀರ್ ಶೆಟ್ಟಿ ಸ್ಯಾಂಡಲ್​​ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಪ್ರವೀರ್ ಶೆಟ್ಟಿ ನಟನೆಯ 'ಸೈರನ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಸಖತ್​ ಸದ್ದು ಮಾಡುತ್ತಿದೆ.

'ಎಣ್ಣೆ ಹೊಡೆಯೋ ಟೈಮಲ್ಲಿ ...':ಯುವ ಪ್ರತಿಭೆ ಚಿನ್ಮಯ ಅವರ ಸಾಹಿತ್ಯಕ್ಕೆ 'ಮೈ ಆಟೋಗ್ರಾಫ್' ಖ್ಯಾತಿಯ ಭಾರದ್ವಾಜ್​ ಸಂಗೀತ ಸಂಯೋಜಿಸಿರುವ 'ಎಣ್ಣೆ ಹೊಡೆಯೋ ಟೈಮಲ್ಲಿ ...' ಹಾಡನ್ನು ಗಾಯಕಿ ಮಂಗ್ಲಿ ಹಾಡಿದ್ದಾರೆ. ಲಹರಿ ಯೂಟ್ಯೂಬ್‌ನಲ್ಲಿ ಈ ಗೀತೆ ರಿಲೀಸ್ ಆಗಿದ್ದು, ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ.

ಸೈರನ್ ಚಿತ್ರತಂಡ

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಹರಿ ವೇಲು, ಇದು ಪ್ರವೀರ್ ಶೆಟ್ಟಿ ಅವರ ಮೊದಲ ಸಿನಿಮಾ ಆಗಿದ್ದು, ಸಾಕಷ್ಟು ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದಾರೆ. ಹಾಡು ಚೆನ್ನಾಗಿ ಮೂಡಿ ಬಂದಿದೆ. ಜಾನಪದ ಸೊಗಡಿನ ಮೂಲದಿಂದ ಬಂದ ಗಾಯಕರು ಹಾಡಿರುವ ಗೀತೆಗಳು ಚೆನ್ನಾಗಿರುತ್ತವೆ. ಹಾಗೆಯೇ ಗಾಯಕಿ ಮಂಗ್ಲಿ ಕೂಡ ಜಾನಪದ ಮೂಲದಿಂದ ಬಂದವರು. ಇನ್ನೂ ತಾಂತ್ರಿಕವಾಗಿ ಸಿನಿಮಾ ಸ್ಟ್ರಾಂಗ್ ಆಗಿ ಬಂದಿದೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ್ದ ನಿರ್ಮಾಪಕ ಸಂಘದ ಅಧ್ಯಕ್ಷರಾದ ಉಮೇಶ್ ಬನಕಾರ ಈ ಚಿತ್ರರಂಡಕ್ಕೆ ಶುಭ ಹಾರೈಸಿದರು.

ರಾಜಾ ವೆಂಕಯ್ಯ ನಿರ್ದೇಶನದ ಕನ್ನಡ ಸಿನಿಮಾ: ಈ ಚಿತ್ರವನ್ನು ಮೂಲತಃ ತಮಿಳುನಾಡಿನವರಾದ ರಾಜಾ ವೆಂಕಯ್ಯ ನಿರ್ದೇಶಿಸಿದ್ದಾರೆ. ಕಳೆದ 30 ವರ್ಷಗಳಿಂದ ನಿರ್ದೇಶಕ ಮುರುಗ ದಾಸ್ ಸೇರಿದಂತೆ ಹಲವರ ಬಳಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ರಾಜಾ ವೆಂಕಯ್ಯ ಕನ್ನಡ ಕಲಿತು ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿರುವುದು ವಿಶೇಷ. ಇದು ಅವರ ನಿರ್ದೇಶನದ ಮೊದಲ ಕನ್ನಡ ಸಿನಿಮಾ ಎಂದರು.

ಸೈರನ್ ಸಿನಿಮಾ ನಟ ನಟಿ

ಈ ಸಿನಿಮಾವನ್ನು ನಾವು ಕನ್ನಡ ಮತ್ತು ತಮಿಳಿನಲ್ಲಿ ಚಿತ್ರೀಕರಣ ಮಾಡಿದ್ದು, ತೆಲಗು ಮತ್ತು ಮಲಯಾಳಂಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದೇವೆ. ನನ್ನ ಮೊದಲ ಚಿತ್ರಕ್ಕೆ 'ಡೆಕ್ಕನ್ ಕಿಂಗ್' ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಿಸಿರುವ ಬಿಜ್ಜು ಶಿವಾನಂದ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಮೂಲತಃ ನಾನು ಸಂಕಲನಕಾರನಾಗಿ ಸಾಕಷ್ಟು ಸಿನಿಮಾಗೆ ಕೆಲಸ ಮಾಡಿದ್ದೇನೆ. ಇದೊಂದು ಇನ್ವೆಸ್ಟಿಕೇಶನ್ ಮರ್ಡರ್ ಮಿಸ್ಟರಿ ಕಥೆ ಹೊಂದಿದೆ. ಇಲ್ಲಿ ನಾಯಕ ಪ್ರವೀರ್ ಯಂಗ್ ಆ್ಯಂಡ್ ಯನರ್ಜಿ ಇರುವ ಇನ್ವೆಸ್ಟಿಕೇಶನ್ ಆಫೀಸರ್ ಪಾತ್ರ ಮಾಡಿದ್ದಾರೆ ಎಂದು ನಿರ್ದೇಶಕ ರಾಜಾ ವೆಂಕಯ್ಯ ಹೇಳಿದರು.

ಪೊಲೀಸ್ ಪಾತ್ರದಲ್ಲಿ ನಟ ನಟಿ:ನಂತರ ಮಾತನಾಡಿದ ಚಿತ್ರದ ನಾಯಕ ಪ್ರವೀರ್ ಶೆಟ್ಟಿ, 'ನಾನು ಇದರಲ್ಲಿ ಪೊಲೀಸ್ ಪಾತ್ರ ಮಾಡಿದ್ದೇನೆ. ಇದು ನನ್ನ ಮೊದಲ ಸಿನಿಮಾ. ಮುಂಬೈನಲ್ಲಿರುವ ಅನುಪಮ್ ಖೇರ್ ಅವರ ಟ್ರೈನಿಂಗ್​ ಸ್ಕೂಲ್​ನಲ್ಲಿ ತರಬೇತಿ ಪಡೆದಿದ್ದು, ಈ ಚಿತ್ರಕ್ಕೆ ಈ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದೇನೆ' ಎಂದರು. ಮಲಯಾಳಂ ಮೂಲದ ನಾಯಕಿ ಲಾಸ್ಯ ಮಾತನಾಡಿ, 'ಇದು ನನ್ನ ಅಭಿನಯದ ಮೊದಲ ಸಿನಿಮಾ. ಚಿತ್ರತಂಡ ಒಳ್ಳೆ ಅವಕಾಶ ಕೊಟ್ಟಿದ್ದು, ಇದರಲ್ಲಿ ನಾನೂ ಕೂಡ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದೇನೆ' ಎಂದರು.

ಇದನ್ನೂ ಓದಿ:ಪ್ರವೀರ್ ಶೆಟ್ಟಿ ಅಭಿನಯದ ಸೈರನ್ ಸಿನಿಮಾಗೆ ಧ್ವನಿ ನೀಡಿದ ಗಾಯಕಿ ಮಂಗ್ಲಿ

ಹೋಟೆಲ್ ಉದ್ಯಮ ನಡೆಸುತ್ತಿರುವ ಚಿತ್ರದ ನಿರ್ಮಾಪಕ ಬಿಜ್ಜು ಶಿವಾನಂದ್ ಮಾತನಾಡಿ, 'ಈ ಚಿತ್ರವನ್ನು ನಾವು ಗೆಳೆಯರು ಸೇರಿ ಕಷ್ಟಪಟ್ಟು ಮಾಡಿದ್ದೇವೆ. ಈ ಸಿನಿಮಾಗಾಗಿ ಎರಡು ವರ್ಷ ಶ್ರಮ ಹಾಕಲಾಗಿದೆ' ಎಂದರು. ಇದೇ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಗನ ಚಿತ್ರಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ನಾಗೇಶ್ ಆಚಾರ್ ಛಾಯಾಗ್ರಹಣ, ಕಲೈ ಮಾಸ್ಟರ್ ನೃತ್ಯವಿದೆ. ಚಿತ್ರವನ್ನು ಲಿಖಿತ್ ಫಿಲ್ಮ್ಸ್​ನ ರಮೇಶ್ ಬಾಬು ವಿತರಣೆ ಮಾಡಲಿದ್ದಾರೆ. ಸೈರನ್ ಚಿತ್ರದ ಕೆಲಸಗಳು ಈಗಾಗಲೇ ಮುಗಿದಿದ್ದು, ಫೆಬ್ರವರಿ ಮೂರನೇ ವಾರದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್​ನಲ್ಲಿ ಚಿತ್ರತಂಡ ಇದೆ.

ABOUT THE AUTHOR

...view details