ಕರ್ನಾಟಕ

karnataka

ETV Bharat / entertainment

'ಮ್ಯಾನ್ಷನ್ ಹೌಸ್ ಮುತ್ತು' ಮೂಲಕ ನಾಯಕ ನಟನಾಗಲಿದ್ದಾರೆ ಗಾಯಕ ನವೀನ್ ಸಜ್ಜು - singer naveen sajju

'ಮ್ಯಾನ್ಷನ್ ಹೌಸ್ ಮುತ್ತು' ಸಿನಿಮಾದಲ್ಲಿ ಗಾಯಕ ನವೀನ್ ಸಜ್ಜು ನಟಿಸಿದ್ದು, ನವೆಂಬರ್​ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

singer naveen sajju acted in Mansion House muttu film
'ಮ್ಯಾನ್ಷನ್ ಹೌಸ್ ಮುತ್ತು' ಮೂಲಕ ನಾಯಕ ನಟನಾಗಲಿದ್ದಾರೆ ಗಾಯಕ ನವೀನ್ ಸಜ್ಜು

By

Published : Aug 3, 2022, 7:04 PM IST

ಸ್ಯಾಂಡಲ್​ವುಡ್​ನಲ್ಲಿ ಗಾಯಕರು ನಟರಾಗುವ ಟ್ರೆಂಡ್ ಹೊಸತೇನಲ್ಲ. ಈಗಾಗಲೇ ಸಾಧು ಕೋಕಿಲ, ರಾಜೇಶ್ ರಾಮನಾಥ್, ರಾಜೇಶ್ ಕೃಷ್ಟನ್ ನಾಯಕ ನಟರುಗಳಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕ ಕಂ ಸಂಗೀತ ನಿರ್ದೇಶಕ ನವೀನ್ ಸಜ್ಜು 'ಮ್ಯಾನ್ಷನ್ ಹೌಸ್ ಮುತ್ತು' ಎಂಬ ಸಿನಿಮಾ ಮೂಲಕ ಹೀರೋ ಆಗಿ ಮಿಂಚಲಿದ್ದಾರೆ.

ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸಿನಿಮಾದ ಡಬ್ಬಿಂಗ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ನವೀನ್ ಸಜ್ಜು ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದು, ನವೆಂಬರ್​ನಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕಾಮಿಡಿ ಥ್ರಿಲ್ಲರ್ ಮ್ಯಾನ್ಷನ್ ಹೌಸ್ ಮುತ್ತು ಸಿನಿಮಾದಲ್ಲಿ ಒಂದಷ್ಟು ಸಂದೇಶ ಸಾರುವ ಅಂಶಗಳಿದ್ದು, ಪ್ರಕೃತಿ ಪ್ರೇಮಿ ಮುತ್ತು ಅವರ ಸುತ್ತ ಇಡೀ ಕಥೆ ಸಾಗುತ್ತದೆ. ನವೀನ್ ಸಜ್ಜು ತೆರೆ ಮೇಲೆ ಹಾಗೂ ತೆರೆ ಹಿಂದೆಯೂ ಕೆಲಸ ಮಾಡಿದ್ದಾರೆ. ಗಿರೀಶ್ ಶಿವಣ್ಣ, ಸಮೀಕ್ಷಾ ರಾಮ್, ಸತೀಶ್ ಚಂದ್ರ, ವಿಜೇತ್ ಸುಮಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ '2nd ಲೈಫ್' ಚಿತ್ರ ನಿರ್ಮಾಣ ಮಾಡಬೇಕಿತ್ತು: ಆದರ್ಶ್ ಗುಂಡುರಾಜ್

ನವೀನ್ ಸಜ್ಜು ಈ ಸಿನಿಮಾದಲ್ಲಿ ಅಭಿನಯದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಸಹ ನಿಭಾಯಿಸಿದ್ದಾರೆ. ನವೀನ್ ಕುಮಾರ್ ಚೆಲ್ಲ ಛಾಯಾಗ್ರಾಹಣ ಸಿನಿಮಾಕ್ಕಿದೆ. ಮಡಿಕೇರಿ ಸುತ್ತಮುತ್ತ ಬರೋಬ್ಬರಿ 40 ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಕೇಸರಿ ಫಿಲ್ಮ್ ಕ್ಯಾಪ್ಟರ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ನವೆಂಬರ್​ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ABOUT THE AUTHOR

...view details