ಕರ್ನಾಟಕ

karnataka

ETV Bharat / entertainment

ಚಾರ್ಲಿ ಸಿನಿಮಾ ಸಕ್ಸಸ್ ಬಳಿಕ ಎಲ್ಲಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ?! - Rakshit Shetty movies

ಚಾರ್ಲಿ ಸಿನಿಮಾ ಸಕ್ಸಸ್ ಬಳಿಕ ನಟ ರಕ್ಷಿತ್ ಶೆಟ್ಟಿ ಮುಂದಿನ ಚಿತ್ರಕ್ಕೆ ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದು, ಮತ್ತಷ್ಟು ಯಶಸ್ವಿ ಚಿತ್ರಗಳನ್ನು ಕೊಡಲಿ ಎನ್ನುವುದು ಅಭಿಮಾನಿಗಳ ಆಶಯ.

Simple star Rakshit Shetty
ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ

By

Published : Mar 3, 2023, 4:00 PM IST

ಸ್ಯಾಂಡಲ್​ವುಡ್​ನ ಚಾರ್ಲಿ ಸಿನಿಮಾ ಸಕ್ಸಸ್ ಬಳಿಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? ಯಾವ ಸಿನಿಮಾ ಕೆಲಸ ಮಾಡುತ್ತಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದು ಬಹುತೇಕರಿಗೆ ಕಾಡುತ್ತಿರುವ ಪ್ರಶ್ನೆ. ಇತ್ತೀಚಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಅವರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ, ಮಾಧ್ಯಮದವರ ಮುಂದೆಯೂ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿಯೂ ಅಷ್ಟೊಂದು ಸಕ್ರಿಯರಾಗಿಲ್ಲ. ಹಾಗಾಗಿ ರಕ್ಷಿತ್ ಶೆಟ್ಟಿ ಮುಂದಿನ ನಡೆ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ‌ ಮೂಡಿದೆ.

ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ

ರಕ್ಷಿತ್ ಶೆಟ್ಟಿ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳಾಗಿವೆ. ಈ ಹತ್ತು ವರ್ಷದಲ್ಲಿ ಬಹಳವೇ ಬದಲಾವಣೆ ಆಗಿದೆ. ಜೀವನ ಶೈಲಿಯಿಂದ ಹಿಡಿದು‌ ಸಿನಿಮಾ ಬಗೆಗಿನ ಆಲೋಚನೆ ಮತ್ತು ಯೋಜನೆ ಎಲ್ಲವೂ ಬದಲಾಗಿದೆ. ಖುದ್ದು ರಕ್ಷಿತ್ ಶೆಟ್ಟಿ ಅವರೇ ಈ ಮಾತನ್ನು ಒಪ್ಪುತ್ತಾರೆ ಕೂಡಾ. ಹೌದು, ತುಘ್ಲಕ್, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ಕೇವಲ‌ ನಾಯಕನಾಗಿದ್ದ ರಕ್ಷಿತ್ ಶೆಟ್ಟಿ ಕಾಲ‌ಚಕ್ರ ಉರುಳಿದಂತೆ ಬರಹಗಾರ, ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಇನ್ನೂ ಈ ಹತ್ತು ವರ್ಷಗಳಲ್ಲಿ‌ ಪ್ಯಾನ್ ಇಂಡಿಯಾ ಸಿನಿಮಾ‌‌ ಮಾಡಬೇಕೆಂಬ ರಕ್ಷಿತ್ ಶೆಟ್ಟಿ ಅವರ ಕನಸು ಕೂಡಾ ನನಸಾಗಿದೆ. ಅವನೇ ಶ್ರೀಮನ್ನಾರಾಯಣ ಚಿತ್ರ ಸೋಲಿನ ಕಹಿ‌ ಪಾಠ ಕಲಿಸಿದೆ. ಜೊತೆಗೆ 777 ಚಾರ್ಲಿ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಯಶಸ್ಸನ್ನೂ ತೋರಿಸಿದೆ.

ಸಿಂಪಲ್ ಸ್ಟಾರ್ ರಕ್ಷಿತ್​ ಶೆಟ್ಟಿ

ಉಳಿದವರು ಕಂಡಂತೆ ಚಿತ್ರದ ಸಮಯದಲ್ಲಿ ರಕ್ಷಿತ್ ಶೆಟ್ಟಿ ‌ಪ್ಯಾನ್ ಇಂಡಿಯಾ ಕನಸು ಕಂಡಿದ್ದರು. ‌ಆದರೆ ಆ ಕ್ಷಣಕ್ಕೆ ಆ ಕನಸು ನನಸಾಗಿರಲಿಲ್ಲ ಅಷ್ಟೇ. ನಂತರ ಬಂದ ಚಾರ್ಲಿ ಸಿನಿಮಾ ರಕ್ಷಿತ್​ ಶೆಟ್ಟಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತು. ಇನ್ನೂ ರಕ್ಷಿತ್ ಶೆಟ್ಟಿ ಅವರನ್ನು ಅನೇಕರು ನಿರ್ದೇಶಕರಾಗಿಯೇ ಬಹಳ ಇಷ್ಟ ಪಡುತ್ತಾರೆ. ವಿಶೇಷ ಅಂದರೆ ರಕ್ಷಿತ್ ಶೆಟ್ಟಿ ಅವರಿಗೂ ಕೂಡಾ ತನ್ನಲ್ಲಿರುವ ನಟನಿಗಿಂತ ನಿರ್ದೇಶಕನೇ ಬಹಳ ಇಷ್ಟ ಅಂತೆ. ತನ್ನ ಆಲೋಚನೆಯನ್ನು ಬೆಳ್ಳಿ ತೆರೆಯ ಮೂಲಕ‌ ಜಗತ್ತಿಗೆ ಹೇಳುವುದು ಕೂಡಾ ಇಷ್ಟ. ಇದು ಒಟಿಟಿ ಯುಗ. ಈ ಯುಗದಲ್ಲಿ ಇನ್ನೂ ಹಲವಾರು ಕಥೆ ಹೇಳುವ ಬಯಕೆ‌ ರಕ್ಷಿತ್ ಶೆಟ್ಟಿ ಅವರಿಗೆ ಇದೆ. ಈ ಕಾರಣಕ್ಕೆ‌ ಮುಂದೊಂದು ದಿನ ಬಣ್ಣ ಹಚ್ಚಲಾರೆ ಎಂದು ತಿಳಿಸಿದ್ದಾರೆ. ಕೇವಲ ನಿರ್ದೇಶಕನಾಗಿ ಮುಂದುವರೆಯುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ:ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್​​ವೀರ್

ಅನೇಕರಿಗೆ ರಕ್ಷಿತ್ ಶೆಟ್ಟಿ ಕ್ಲಾಸ್ ನಾಯಕನೇ? ಅಥವಾ ಮಾಸ್ ನಾಯಕನೇ? ಎನ್ನುವ ಪ್ರಶ್ನೆ ಇದೆ. ಇದಕ್ಕೂ ಉತ್ತರ ಕೊಟ್ಟಿರುವ ರಕ್ಷಿತ್​ ಶೆಟ್ಟಿ ನಾನೊಬ್ಬ ಸಿನಿಮಾ ನಟ ಅಷ್ಟೇ ಎಂದು ತಿಳಿಸಿದ್ದಾರೆ. ಯಾವುದೇ ಪಾತ್ರವಾದರೂ ಎಲ್ಲರಿಗೂ ಇಷ್ಟವಾಗುವ ಅಂಶ ಇದೆಯಾ ಎಂದು ನೋಡಿ ಸಿನಿಮಾ ಮಾಡುತ್ತೇನೆ. ಹಾಗಾಗಿ ನಾನು ಕ್ಲಾಸ್‌ ಮತ್ತು ಮಾಸ್‌ ಎಂದುಕೊಳ್ಳಲು ಹೋಗುವುದಿಲ್ಲ ಎನ್ನುವದನ್ನೂ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

ಒಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಒಂದು ದಶಕ ತುಂಬಿದ ಸಂಭ್ರಮದಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಹತ್ತು ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ ತಮ್ಮ ಈ ‌ಮುಂದಿನ‌ ಪ್ರಯಾಣದಲ್ಲಿ ಹಲವು ಚಿತ್ರಗಳನ್ನು ಮಾಡಲು ತಮ್ಮದೇ ಹೋಂ ವರ್ಕ್ ಮಾಡ್ತಾ ಇದ್ದಾರೆ ಎನ್ನಲಾಗಿದೆ.

ABOUT THE AUTHOR

...view details