ಸೈಮಾ (SIIMA). ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ದುಬೈನಲ್ಲಿ ಇಂದು ಮತ್ತು ನಾಳೆ ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವಿ ಅವಾರ್ಡ್ಸ್ ನಡೆಯಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಕಲಾವಿದರು, ತಂತ್ರಜ್ಞರು ಒಂದೇ ವೇದಿಕೆಯಲ್ಲಿ ಮಿಂಚು ಹರಿಸಲಿದ್ದಾರೆ. ಎರಡು ದಿನಗಳ ಕಾಲ ವರ್ಣರಂಜಿತ ಕಾರ್ಯಕ್ರಮ ಏರ್ಪಾಡಾಗಿದೆ. ನಟ, ನಟಿ, ನಿರ್ದೇಶಕರು ಒಳಗೊಂಡಂತೆ ಸಿನಿಮಾ ಕ್ಷೇತ್ರದ ಗಣ್ಯಾತಿ ಗಣ್ಯರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಈ ಕಾರ್ಯಕ್ರಮ ನಡೆದಿದೆ. ಈ ಬಾರಿಯ (11ನೇ) ಸಿನಿ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ಆಯೋಜನೆಗೊಂಡಿದೆ. ನಟ, ನಿರ್ಮಾಪಕ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಸೂಪರ್ ಹಿಟ್ 'ಸೀತಾ ರಾಮಂ' ಸ್ಟಾರ್ ಮೃಣಾಲ್ ಠಾಕುರ್ ಬಹುನಿರೀಕ್ಷಿತ ಕಾರ್ಯಕ್ರಮ ಹೋಸ್ಟ್ ಮಾಡಲಿದ್ದಾರೆ. ದುಬೈ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಯಾಗಿದೆ. ಕನ್ನಡ ಸೇರಿದಂತೆ ಒಟ್ಟು ನಾಲ್ಕು ಭಾಷೆಗಳಲ್ಲಿ, ನಾನಾ ವಿಭಾಗಗಳಲ್ಲಿ ಸಿನಿಮಾಗಳು ನಾಮನಿರ್ದೇಶನಗೊಂಡಿವೆ.
ಕನ್ನಡ ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:
- ರಿಷಬ್ ಶೆಟ್ಟಿ - ಕಾಂತಾರ
- ಅನೂಪ್ ಭಂಡಾರಿ - ವಿಕ್ರಾಂತ್ ರೋಣ
- ಡಾರ್ಲಿಂಗ್ ಕೃಷ್ಣ - ಲವ್ ಮಾಕ್ಟೇಲ್ 2
- ಕಿರಣ್ರಾಜ್ ಕೆ - 777 ಚಾರ್ಲಿ
- ಪ್ರಶಾಂತ್ ನೀಲ್ - ಕೆಜಿಎಫ್ 2
ಮಲಯಾಳಂ ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:
- ಅಮಲ್ ನೀರಡ್ - ಭೀಷ್ಮ ಪರ್ವನ್
- ಖಲೀದ್ ರೆಹಮಾನ್ - ತಲ್ಲುಮಾಲಾ
- ಮಹೇಶ್ ನಾರಾಯಣನ್ - ಅರಿಯಿಪ್ಪು
- ತರುಣ್ ಮೂರ್ತಿ - ಸೌದಿ ವೆಲ್ಲಕ್ಕ
- ವಿನೀತ್ ಶ್ರೀನಿವಾಸನ್ - ಹೃದಯಂ
ತಮಿಳು ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:
- ಗೌತಮ್ ರಾಮಚಂದ್ರನ್ - ಗಾರ್ಗಿ
- ಲೋಕೇಶ್ ಕನಗರಾಜ್ - ವಿಕ್ರಂ
- ಎಂ ಮಣಿಕಂದನ್ - ಕದೈಸಿ ವಿವಸಾಯಿ
- ಮಣಿರತ್ನಂ - ಪೊನ್ನಿಯಿನ್ ಸೆಲ್ವನ್
- ಮಿತ್ರನ್ ಆರ್ ಜವಾಹರ್ - ತಿರುಚಿತ್ರಂಬಲಂ
ತೆಲುಗು ಚಿತ್ರರಂಗ- ಅತ್ಯುತ್ತಮ ನಿರ್ದೇಶಕ ವಿಭಾಗದ ನಾಮನಿರ್ದೇಶನಗಳು:
- ಚಂದೂ ಮೊಂಡೆಟಿ - ಕಾರ್ತಿಕೇಯ 2
- ಸೀತಾ ರಾಮಂ- ಹನು ರಾಘವಪುಡಿ
- ಎಸ್.ಎಸ್.ಎಸ್.ರಾಜಮೌಳಿ - ಆರ್ಆರ್ಆರ್
- ಶಶಿ ಕಿರಣ್ ಟಿಕ್ಕಾ - ಮೇಜರ್
- ವಿಮಲ್ ಕೃಷ್ಣ - ಡಿಜೆ ಟಿಲ್ಲು
ಕನ್ನಡ ಚಿತ್ರರಂಗ- ಅತ್ಯುತ್ತಮ ನಟಿ ವಿಭಾಗದ ನಾಮನಿರ್ದೇಶನಗಳು:
- ಆಶಿಕಾ ರಂಗನಾಥ್ - ರೆಮೊ
- ಚೈತ್ರಾ ಆಚಾರ್ - ಗಿಲ್ಕಿ
- ರಚಿತಾ ರಾಮ್ - ಮಾನ್ಸೂನ್ ರಾಗ
- ಸಪ್ತಮಿ ಗೌಡ - ಕಾಂತಾರ
- ಶರ್ಮಿಳಾ - ಗಾಳಿಪಟ 2
- ಶ್ರೀನಿಧಿ ಶೆಟ್ಟಿ - ಕೆಜಿಎಫ್ 2