ಭಾರತೀಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವ ಸೈಮಾ ಅವಾರ್ಡ್ಸ್ ಅದ್ಧೂರಿಯಾಗಿ ಜರುಗಿದೆ. ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವಿ ಅವಾರ್ಡ್ಸ್ (SIIMA)- 2023 ಭಾನುವಾರ ರಾತ್ರಿ ಸಮಾಪನಗೊಂಡಿತು. ಸೆಪ್ಟೆಂಬರ್ 15 ರಂದು ಕನ್ನಡ ಮತ್ತು ತೆಲುಗು ಸಿನಿಮಾ ಸಾಧಕರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೆ, ಸೆಪ್ಟೆಂಬರ್ 15 ರಂದು ತಮಿಳು, ಮಲಯಾಳಂ ಚಿತ್ರರಂಗದವರು ಸೈಮಾ ಗೌರವಕ್ಕೆ ಪಾತ್ರರಾದರು. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಿತು.
ತೆಲುಗು ಚಿತ್ರರಂಗ-ವಿಜೇತರ ಪಟ್ಟಿ(ಕಲಾವಿದರು-ಸಿನಿಮಾ ಹೆಸರು-ಪ್ರಶಸ್ತಿ):
- ಪ್ರದೀಪ್ ರಂಗನಾಥನ್ - ಲವ್ ಟುಡೆ - ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ.
- ಅದಿತಿ - ವಿರುಮಾನ್ - ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ.
- ತ್ರಿಷಾ - ಪೊನ್ನಿಯಿನ್ ಸೆಲ್ವನ್ 1 - ಅತ್ಯುತ್ತಮ ನಟಿ ಪ್ರಶಸ್ತಿ (ಪಾಪ್ಯುಲರ್ ಚಾಯ್ಸ್).
- ಕಮಲ್ ಹಾಸನ್ - ವಿಕ್ರಮ್-ಅತ್ಯುತ್ತಮ ನಟ ಪ್ರಶಸ್ತಿ (ಪಾಪ್ಯುಲರ್ ಚಾಯ್ಸ್).
- ಕೀರ್ತಿ ಸುರೇಶ್ - ಸಾನಿ ಕಾಯಿಧಮ್ - ಅತ್ಯುತ್ತಮ ನಟಿ ಪ್ರಶಸ್ತಿ (ಕ್ರಿಟಿಕ್ಸ್).
- ಮಾಧವನ್ - ರಾಕೆಟ್ರಿ - ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
- ಮಾಧವನ್ - ರಾಕೆಟ್ರಿ - ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ.
- ಅನಿರುಧ್ ರವಿಚಂದರ್ - ವಿಕ್ರಮ್ - ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ.
- ಯೋಗಿ ಬಾಬು - ಲವ್ ಟುಡೆ - ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ.
- ಎಸ್ಜೆ ಸೂರ್ಯ - ಡಾನ್ - ನೆಗೆಟಿವ್ ರೋಲ್ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ.
- ಕಾಲಿ ವೆಂಕಟ್ - ಗಾರ್ಗಿ - ಅತ್ಯುತ್ತಮ ಪೋಷಕ ಪಾತ್ರ ಪ್ರಶಸ್ತಿ.
- ವಸಂತಿ - ವಿಕ್ರಮ್ - ಅತ್ಯುತ್ತಮ ಪೋಷಕ ಪಾತ್ರ ಪ್ರಶಸ್ತಿ.
- ತೋಟ ತಾರನಿ - ಪೊನ್ನಿಯಿನ್ ಸೆಲ್ವನ್ 1 - ಅತ್ಯುತ್ತಮ ಪ್ರೊಡಕ್ಷನ್ ಡಿಸೈನರ್ ಪ್ರಶಸ್ತಿ.
- ಇಳಂಗೋ ಕೃಷ್ಣನ್ - ಪೊನ್ನಿ ನಾಧಿ - ಅತ್ಯುತ್ತಮ ಸಾಹಿತ್ಯ ಬರಹಗಾರ ಪ್ರಶಸ್ತಿ.
- ರವಿ ವರ್ಮನ್ - ಪೊನ್ನಿಯಿನ್ ಸೆಲ್ವನ್ 1 - ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ.
- ಲೋಕೇಶ್ ಕನಕರಾಜ್ - ವಿಕ್ರಮ್ - ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ.
- ಮಣಿರತ್ನಂ - ಅಚೀವ್ಮೆಂಟ್ ಅವಾರ್ಡ್.
- ಮಲ್ ಹಾಸನ್ - ಪಾತಾಲ ಪಾತಾಲ - ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ.
- ಜೋನಿತ - ಅರೇಬಿಕ್ ಕುತು - ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ.
- ಪೊನ್ನಿಯಿನ್ ಸೆಲ್ವನ್ 1 - ಅತ್ಯುತ್ತಮ ಚಿತ್ರ ಪ್ರಶಸ್ತಿ.