ಕನ್ನಡ ಕಿರುತೆರೆ ಜನಪ್ರಿಯ ಶೋ 'ವೀಕೆಂಡ್ ವಿತ್ ರಮೇಶ್' ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಸೀಸನ್ 5ರಲ್ಲಿ ಈಗಾಗಲೇ 7 ಸಾಧಕರು ಬಂದು ಹೋಗಿದ್ದು, ಈ ವಾರ ಕೂಡ ಇಬ್ಬರು ಸಾಧಕರು ಬರಲಿದ್ದಾರೆ.
ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮೂಲಕ ಆರಂಭಗೊಂಡ 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ನೃತ್ಯ ನಿರ್ದೇಶಕ ಪ್ರಭುದೇವ, ಜಯದೇವ ಸಂಸ್ಥೆಯ ಡಾ. ಸಿ.ಎನ್ ಮಂಜುನಾಥ್, ಹಿರಿಯ ಕಲಾವಿದ ದತ್ತಣ್ಣ, ನಟ ಡಾಲಿ ಧನಂಜಯ್, ನಟ ಅವಿನಾಶ್, ನಟ ಮಂಡ್ಯ ರಮೇಶ್ ತಮ್ಮ ಜೀವನದ ಸಾಧನೆ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಈ ವೀಕೆಂಡ್ನಲ್ಲಿ 8 ಮತ್ತು 9ನೇ ಅತಿಥಿಯಾಗಿ ಸಿನಿಮಾ ಲೋಕದ ಸಿಹಿಕಹಿ ಚಂದ್ರು ಮತ್ತು ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಭಾಗಿಯಾಗಲಿದ್ದಾರೆ.
ವೀಕೆಂಡ್ ವಿತ್ ರಮೇಶ್ ಪ್ರೋಮೋ:ಈ ಜನಪ್ರಿಯ ಕಾರ್ಯಕ್ರಮದ ಪ್ರೋಮೋ ರಿಲೀಸ್ ಅಗಿದೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಜೀ ವಾಹಿನಿ ''ಸಿಹಿಕಹಿಯಂತೆ ಮನರಂಜನೆ ಕೊಟ್ಟ ಚಂದ್ರು, ಲಕ್ಷಾಂತರ ಜನಕ್ಕೆ ಸ್ಫೂರ್ತಿ ತುಂಬಿದ ಡಾ. ಗುರುರಾಜ ಕರಜಗಿ ಅವರು ಈ ವೀಕೆಂಡ್‌ನ ಅತಿಥಿಗಳು, ವೀಕೆಂಡ್ ವಿತ್ ರಮೇಶ್ - 5'' ಎಂದು ಬರೆದುಕೊಂಡಿದೆ. ಇದಕ್ಕೂ ಮುನ್ನ ಬ್ಲರ್ ಚಿತ್ರವೊಂದನ್ನು ಹಂಚಿಕೊಂಡು ಯಾರೆಂದು ಗೆಸ್ ಮಾಡಿ ಅಂತಾ ಪ್ರೇಕ್ಷಕರಲ್ಲಿ ಕೇಳಿಕೊಳ್ಳಲಾಗಿತ್ತು. ಅದರಲ್ಲಿ ಬಹುತೇಕ ಮಂದಿ ಸಿಹಿಕಹಿ ಚಂದ್ರು ಮತ್ತು ಡಾ. ಗುರುರಾಜ ಕರಜಗಿ ಹೆಸರನ್ನೇ ತಿಳಿಸಿದ್ದರು.