ಕರ್ನಾಟಕ

karnataka

ETV Bharat / entertainment

ಪತ್ನಿ ಕಿಯಾರಾ ಜೊತೆ ಸಿದ್ಧಾರ್ಥ್​ ಮಲ್ಹೋತ್ರಾ ಡಿನ್ನರ್ ಡೇಟ್: ಫ್ಯಾನ್ಸ್​ ಮೆಚ್ಚುಗೆ ಪಡೆದ ವಿಡಿಯೋ - etv bharat kannada

Sidharth Malhotra takes wife Kiara Advani on dinner date: ಮುಂಬೈನ ಪ್ರಸಿದ್ಧ ರೆಸ್ಟೋರೆಂಟ್​ನಿಂದ ಸ್ಟಾರ್​ ದಂಪತಿ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಹೊರಬರುತ್ತಿರುವ ವೇಳೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು.

Sidharth Malhotra takes wifey Kiara Advani on dinner date, pose for paps holding hands
ಪತ್ನಿಯನ್ನು ಡಿನ್ನರ್​ಗೆ ಕರೆದುಕೊಂಡು ಹೋಗಿದ್ದ ಸಿದ್ಧಾರ್ಥ್​ ಮಲ್ಹೋತ್ರಾ

By ETV Bharat Karnataka Team

Published : Aug 27, 2023, 12:07 PM IST

ಬಾಲಿವುಡ್​ನ ಕ್ಯೂಟ್​ ಕಪಲ್​ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ. ಇವರಿಬ್ಬರು ಪರಸ್ಪರ ಎಲ್ಲಾ ವಿಷಯದಲ್ಲೂ ಪ್ರೋತ್ಸಾಹ ನೀಡುತ್ತಾ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲಕಾಲ ಡೇಟಿಂಗ್​ ನಡೆಸಿ, 2023ರ ಆರಂಭದಲ್ಲಿ ಹಸೆಮಣೆ ಏರಿದ ಪ್ರೇಮಪಕ್ಷಿಗಳು ಆಗಾಗ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಾರೆ. ಇದೀಗ ಈ ಜೋಡಿಯ ಹೊಸ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಡಿನ್ನರ್​ಗೆ ತೆರಳಿದ್ದ ದಂಪತಿ: ಸಿದ್ಧಾಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಶನಿವಾರ ರಾತ್ರಿ ಡಿನ್ನರ್ ಡೇಟ್​ನಲ್ಲಿ ಕಾಣಿಸಿಕೊಂಡರು. ಮುಂಬೈನ ಪ್ರಸಿದ್ಧ ರೆಸ್ಟೋರೆಂಟ್​ನಿಂದ ಸ್ಟಾರ್​ ದಂಪತಿ ಹೊರಬರುತ್ತಿರುವಾಗ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು. ಕೈ ಕೈ ಹಿಡಿದು ಜೊತೆಯಾಗಿ ನಡೆದುಕೊಂಡು ಬಂದ ದಂಪತಿ ಪಾಪ್​ಗಳನ್ನು ಕಂಡು ಸ್ಮೈಲ್​ ಮಾಡುತ್ತಿರುವ ದೃಶ್ಯ ನೋಡುಗರನ್ನು ಸೆಳೆದಿದೆ. ಮುದ್ದಾದ​ ಜೋಡಿಯ ಕ್ಯೂಟ್​ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವೇಳೆ ಸಿದ್ಧಾರ್ಥ್​ ಎಂದಿನಂತೆ ಕ್ಯಾಶುವಲ್​ ದಿರಿಸಿನಲ್ಲಿ ಕಾಣಿಸಿಕೊಂಡರು. ನೀಲಿ ಬಣ್ಣದ ಟೀ-ಶರ್ಟ್​, ಬೂದು ಬಣ್ಣದ ಪ್ಯಾಂಟ್​ ಧರಿಸಿದ್ದರು. ಕಿಯಾರಾ ಅಡ್ವಾಣಿ ಸಂಪೂರ್ಣ ಬಿಳಿ ಬಣ್ಣದ ಮಿನಿ ಡ್ರೆಸ್​ನಲ್ಲಿ ಆಕರ್ಷಕವಾಗಿ ಕಂಡರು. ಕೂದಲನ್ನು ಫ್ರೀ ಬಿಟ್ಟು, ಕನಿಷ್ಟ ಮೇಕಪ್​ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ:Kiara Advani: ಕಣ್ಣಲ್ಲೇ ಕೊಲ್ತಾರೆ ಕಿಯಾರಾ - ಅಡ್ವಾಣಿ ಅಂದಕ್ಕೆ ಹುಬ್ಬೇರಿಸಿದ ಅಭಿಮಾನಿ

'ಸಿದ್​ಕಿಯಾ' ಜೋಡಿ: ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಹಸೆಮಣೆ ಏರುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣರಾದರು. ವಿವಾಹಕ್ಕೂ ಮುನ್ನ ಈ ಬಾಲಿವುಡ್​ ಲವ್​ ಬರ್ಡ್ಸ್ ಎಲ್ಲಿಯೂ ತಮ್ಮ ಪ್ರೀತಿಯ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಈ ಜೋಡಿ ಡೇಟಿಂಗ್​​ನಲ್ಲಿರಬಹುದು ಎಂಬ ಗುಸುಗುಸು ಹರಡಿತ್ತು. ಸಿನಿಮಾ ಈವೆಂಟ್​ಗಳು, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್​​ ವದಂತಿಗಳಿಗೆ ತುಪ್ಪ ಸುರಿದಿದ್ದರು.

ಜೋಡಿಯ ಸಿನಿಮಾಗಳು..: ಕಿಯಾರಾ ಅಡ್ವಾಣಿ ನಟಿಸುತ್ತಿರುವ ಮುಂಬರುವ ಬಹು ನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್‌'. ಆರ್​ಆರ್​ಆರ್​ ಸ್ಟಾರ್​ ರಾಮ್​ಚರಣ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಂಕರ್​ ಆಕ್ಷನ್​ ಕಟ್​ ಹೇಳಿದ್ದಾರೆ. ನಟಿಯ ಕೊನೆಯ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಮೆಚ್ಚುಗೆಯನ್ನು ಸ್ವೀಕರಿಸಿದೆ. ಬಹು ಬೇಡಿಕೆಯಿರುವ ನಟಿಯರ ಪೈಕಿ ಕಿಯಾರಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.

ಏತನ್ಮಧ್ಯೆ, ಸಿದ್ಧಾರ್ಥ್ ಮಲ್ಹೋತ್ರಾ ಅವರು ಯೋಧಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ದಿಶಾ ಪಟಾನಿ ಮತ್ತು ರಾಶಿ ಖನ್ನಾ ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಮೊದಲು, ನವೆಂಬರ್ 11, 2022 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ನಂತರ ತಯಾರಕರು ಬಿಡುಗಡೆ ದಿನಾಂಕವನ್ನು ಜುಲೈ 2023 ಕ್ಕೆ ಮತ್ತು ನಂತರ ಸೆಪ್ಟೆಂಬರ್ 15ಕ್ಕೆ ಮುಂದೂಡಿದರು.

ಇದನ್ನೂ ಓದಿ:ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಬಿಟೌನ್​ ಸ್ಟಾರ್ಸ್ - ಸಲ್ಲು, ಸಿದ್ ​ಕಿಯಾರಾ, ವಿಕ್ಕಿ ಫೋಟೋ ವೈರಲ್​!

ABOUT THE AUTHOR

...view details