ಕರ್ನಾಟಕ

karnataka

ETV Bharat / entertainment

ಹಸೆಮಣೆ ಏರಲಿರುವ ಸಿದ್ಧಾರ್ಥ್ - ಕಿಯಾರಾ: ಅದ್ಧೂರಿಯಾಗಿ ನಡೆದಿವೆ ಶಾಸ್ತ್ರಗಳು! - ಸಿದ್ಧಾರ್ಥ್ ಕಿಯಾರಾ ಲೇಟೆಸ್ಟ್ ನ್ಯೂಸ್

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಪ್ರಕ್ರಿಯೆಗಳು ಮುಂದುವರೆದಿವೆ. ವಿವಾಹ ಪೂರ್ವ ಶಾಸ್ತ್ರಗಳೆಲ್ಲವೂ ಅದ್ಧೂರಿಯಾಗಿ ನಡೆಯುತ್ತಿವೆ.

Sidharth Malhotra Kiara Advani
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ

By

Published : Feb 7, 2023, 3:14 PM IST

Updated : Feb 7, 2023, 4:26 PM IST

ಬಾಲಿವುಡ್​ ಲವ್​ ಬರ್ಡ್ಸ್​ಗಳಾದ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಇನ್ನೇನು ಹಸೆಮಣೆ ಏರಲಿದ್ದಾರೆ. ಸೋಮವಾರದಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆದಿದ್ದು, ಇಂದು ಬೆಳಗ್ಗೆ ಹಳದಿ ಶಾಸ್ತ್ರ ನಡೆದಿದೆ. ಜೋಡಿಯ ಮದುವೆಗೆ ವೇದಿಕೆ ಸಿದ್ಧಗೊಂಡಿದ್ದು, ಮದುವೆಯ ಅಧಿಕೃತ ಘೋಷಣೆ ಮತ್ತು ಫೋಟೋಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಶೇಷವಾಗಿ ತಯಾರಾದ ಮಂಟಪ:ಸಿದ್ಧಾರ್ಥ್ ಮತ್ತು ಕಿಯಾರಾ ವಿವಾಹಕ್ಕಾಗಿ ರಾಜಸ್ಥಾನ ರಾಜ್ಯದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್ ಅನ್ನು ವಧುವಿನಂತೆ ಶೃಂಗರಿಸಲಾಗಿದೆ. ಮದುವೆಗೆ ರಾಯಲ್ ಲುಕ್ ನೀಡಲು ಹೋಟೆಲ್‌ನಲ್ಲಿ ವಿಶೇಷ ಮಂಟಪವನ್ನು ದೇಶೀಯ ಮತ್ತು ವಿದೇಶಿ ಹೂವುಗಳಿಂದ ಅಲಂಕರಿಸಲಾಗಿದೆ.

ಅತಿಥಿಗಳ ಆಗಮನ:ನಟಿ ಕಿಯಾರಾ ಅಡ್ವಾನಿ ಅವರ ಶಾಲಾ ಸಹಪಾಠಿ ಇಶಾ ಅಂಬಾನಿ ಭಾನುವಾರ ಕಾರ್ಯಕ್ರಮಗಳಿಗೆ ಜೈಸಲ್ಮೇರ್‌ಗೆ ತಮ್ಮ ಖಾಸಗಿ ಜೆಟ್‌ನಲ್ಲಿ ಆಗಮಿಸಿದ್ದರು. ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಸೋಮವಾರ ತಡರಾತ್ರಿ ಮುಂಬೈಗೆ ಮರಳಿದರು. ಇಂದು ಮದುವೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇನ್ನೂ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ಚಲನಚಿತ್ರ ನಿರ್ಮಾಪಕರಾದ ಆರತಿ ಶೆಟ್ಟಿ, ಪೂಜಾ ಶೆಟ್ಟಿ ಮತ್ತು ಅಮೃತ್​​ಪಾಲ್ ಸಿಂಗ್ ಬಿಂದ್ರಾ, ಶಾರುಖ್ ಖಾನ್ ಅವರ ಸ್ನೇಹಿತೆ ಕಾಜಲ್ ಆನಂದ್, ನಟ ಕರಣ್ ವೋಹ್ರಾ ಮತ್ತು ಅವರ ಪತ್ನಿ ರಿಯಾ ಮತ್ತು ಚಲನಚಿತ್ರ ನಿರ್ದೇಶಕ ಮತ್ತು ಬರಹಗಾರ ಶಕುನ್ ಬಾತ್ರಾ ಕೂಡ ಸೇರಿದಂತೆ ಚಿತ್ರರಂಗದ ಹಲವರು ಈ ಅದ್ಧೂರಿ ವಿವಾಹ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮದುವೆ ಶಾಸ್ತ್ರಗಳು:ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಶಾಸ್ತ್ರ ಸೂರ್ಯಗಢ ಪ್ಯಾಲೇಸ್ ಹೋಟೆಲ್‌ನ ಅಂಗಳದಲ್ಲಿ (ತುಳಸಿ ಗಾರ್ಡನ್‌ನಲ್ಲಿ) ನಡೆಯಲಿದೆ. ಈಗಾಗಲೇ ಆಗಮಿಸಿರುವ ಅತಿಥಿಗಳು ಹೋಟೆಲ್‌ನ ಅಲಂಕಾರ, ಶಾಸ್ತ್ರಗಳು, ರುಚಿಕರವಾದ ಆಹಾರವನ್ನು ಆನಂದಿಸುತ್ತಿದ್ದಾರೆ. ಇಂದು ಬೆಳಗ್ಗೆ ಹಳದಿ ಶಾಸ್ತ್ರ ನಡೆದಿದೆ. ವಧು ವರರಿಗೆ ಕುಟುಂಬಸ್ಥರು, ಆತ್ಮೀಯರು ಹಳದಿ ಲೇಪಿಸಿ ಸಂಭ್ರಮಿಸಿದ್ದಾರೆ. ಬಂದಿ, ಬಾರಾತ್ (sehra bandi, baraat ) ಶಾಸ್ತ್ರಗಳು ಆರಂಭಗೊಂಡಿವೆ.

ಇದನ್ನೂ ಓದಿ:ಮದುವೆ ಸಂಭ್ರಮದಲ್ಲಿ ಬಾಲಿವುಡ್ ಜೋಡಿ: ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿದ್ಧಾರ್ಥ್ ಕಿಯಾರಾ ಮಸ್ತ್ ಡ್ಯಾನ್ಸ್

ಹೋಟೆಲ್​ ಸುತ್ತ ಬಿಗಿ ಭದ್ರತೆ: ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೇಸ್ ಹೋಟೆಲ್ ಮತ್ತು ಸುತ್ತಲಿನ ಆವರಣದಲ್ಲಿ ಭದ್ರತೆ ಬಹಳ ಬಿಗಿ ಆಗಿದೆ. ಹೋಟೆಲ್ ಸಿಬ್ಬಂದಿ, ಗಾರ್ಡ್‌ಗಳು ಮತ್ತು ಡ್ರೈವರ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಒಳಗೆ ಪ್ರವೇಶ ನೀಡಲಾಗುತ್ತದೆ. ಮದುವೆ ನಡೆಯುವ ಹೋಟೆಲ್​ನ ಹೊರಗಿನ ಸ್ಥಳದಿಂದ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಬಾರಾತ್‌ ಕಾರ್ಯಕ್ರಮಕ್ಕೆ ಬ್ಯಾಂಡ್ ಸಿದ್ಧಗೊಳ್ಳುತ್ತಿರುವ ವಿಡಿಯೋ, ಕುದುರೆಯನ್ನು ಹೋಟೆಲ್ ಒಳಗೆ ಕರೆದೊಯ್ಯುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ವೈರಲ್​ ಆಗಿದೆ.

ಆರತಕ್ಷತೆ ಸಮಾರಂಭ:ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ಶಾಸ್ತ್ರದ ನಂತರ ಸಂಜೆ ಭವ್ಯವಾದ ಆರತಕ್ಷತೆ ಸಮಾರಂಭವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಅತಿಥಿಗಳು ರಾಜಸ್ಥಾನಿ ತಿನಿಸುಗಳನ್ನು ಆನಂದಿಸಲಿದ್ದಾರೆ.

ಇದನ್ನೂ ಓದಿ:ಸಿದ್ಧಾರ್ಥ್ ಕಿಯಾರಾ ವಿವಾಹ: ವಧುವಿನ ಕಡೆಯವರಿಗಿಂತ ವರನ ಅತಿಥಿಗಳ ಸಂಖ್ಯೆಯೇ ದುಪ್ಪಟ್ಟು!

Last Updated : Feb 7, 2023, 4:26 PM IST

ABOUT THE AUTHOR

...view details