ಕರ್ನಾಟಕ

karnataka

ETV Bharat / entertainment

ಹೊಸ ವರ್ಷಕ್ಕೆ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ? - ಸಿದ್ಧಾರ್ಥ್ ಕಿಯಾರಾ ಮದುವೆ ದಿನಾಂಕ

​ 2023ರ ಫೆಬ್ರವರಿ 6 ರಂದು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.

Sidharth Malhotra Kiara Advani
ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ

By

Published : Dec 31, 2022, 12:32 PM IST

ಬಾಲಿವುಡ್‌ನ 'ಶೇರ್ ಷಾ' ಖ್ಯಾತಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ವಿವಾಹದ ಬಗ್ಗೆ ಕಳೆದ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಕರಣ್ ಜೋಹರ್ ಅವರ ಕಾರ್ಯಕ್ರಮ ಕಾಫಿ ವಿತ್ ಕರಣ್ ಸೀಸನ್ 7 ನಲ್ಲಿಯೂ ಈ ಜೋಡಿ ತಮ್ಮ ಪ್ರೇಮ ಸಂಬಂಧದ ಹಲವಾರು ಸುಳಿವುಗಳನ್ನು ಕೊಟ್ಟಿದ್ದರು. ಅಂದಿನಿಂದ ಬಿ - ಟೌನ್‌ನಲ್ಲಿ ಇವರಿಬ್ಬರ ಮದುವೆ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ, ಈವರೆಗೂ ಈ ಜೋಡಿಯಿಂದ ಅಧಿಕೃತ ಘೋಷಣೆ ಆಗಿಲ್ಲ. ಇದೀಗ ಇವರಿಬ್ಬರ ಮದುವೆಯ ದಿನಾಂಕ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸುದ್ದಿ ಮಾಡುತ್ತಿದೆ.

ವರದಿಗಳ ಪ್ರಕಾರ, ಈ ಪ್ರೇಮ ಪಕ್ಷಿಗಳು ಮದುವೆಯ ಸ್ಥಳಕ್ಕಾಗಿ ಚಂಡೀಗಢದ ಒಬೆರಾಯ್ ಸುಖ್​​​ವಿಲಾಸ್ ರೆಸಾರ್ಟ್‌ಗೆ ಭೇಟಿ ನೀಡಿದ್ದಾರೆ. ಸಿದ್ಧಾರ್ಥ್ ಈ ಹಿಂದೆ ಗೋವಾದಲ್ಲಿ ಮದುವೆಯಾಗಲು ಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಪಂಜಾಬಿ ಪದ್ಧತಿಯನ್ನು ನೋಡಿ ನಟ ಮನಸ್ಸು ಬದಲಾಯಿಸಿದ್ದಾರೆ. ಬಾಲಿವುಡ್​​ನ ಈ ಕಪಲ್​ 2023ರ ಫೆಬ್ರವರಿ 6 ರಂದು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಬಿಡುಗಡೆಯಾದ 'ಶೇರ್ ಶಾ' (2021) ಚಿತ್ರದ ನಂತರ ಸಿದ್ಧಾರ್ಥ್ ಮತ್ತು ಕಿಯಾರಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಎಂದು ಸಾಬೀತಾಯಿತು. ಇದಾದ ನಂತರ ಸಿದ್ಧಾರ್ಥ್ ಮತ್ತು ಕಿಯಾರಾ ಟಾಕ್ ಆಫ್ ಟೌನ್ ಆದರು.

ಈ ವರ್ಷ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ಜನಪ್ರಿಯ ಟಾಕ್ ಶೋ ಕಾಫಿ ವಿಥ್ ಕರಣ್ 7ನೇ ಸೀಸನ್​ನಲ್ಲಿಯೂ ಈ ವಿಚಾರ ಬಂದಿತು. ಇಲ್ಲಿ, ಕರಣ್ ಅವರಿಬ್ಬರಿಗೂ ತಮ್ಮ ಪ್ರಶ್ನೆಗಳ ಮೂಲಕ ಯಾವಾಗ ಮದುವೆಯಾಗುತ್ತಾರೆ ಎಂದು ತಿಳಿಯಲು ಪ್ರಯತ್ನಿಸಿದರು. ಏಕೆಂದರೆ ಸಿದ್ಧಾರ್ಥ್ ಮತ್ತು ಕಿಯಾರಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕರಣ್ ಈಗಾಗಲೇ ಅರಿತುಕೊಂಡಿದ್ದರು. ಇವರಬ್ಬರೂ ಪ್ರೀತಿಯಲ್ಲಿರುವ ವಿಚಾರವನ್ನು ಪರೋಕ್ಷವಾಗಿ ತಿಳಿಸಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿಯೂ ಕಿಯಾರಾ ಅಡ್ವಾನಿ ಅವರಲ್ಲಿ ಕರಣ್ ಈ ಬಗ್ಗೆ ತಮಾಷೆ ಮಾಡಿದ್ದರು.

ಇದನ್ನೂ ಓದಿ:ಶಿವರಾಜ್ ಕುಮಾರ್ ಸರ್ ಸರಳ ವ್ಯಕ್ತಿತ್ವಕ್ಕೆ ನಾನು ಅಭಿಮಾನಿ ಗಾನವಿ ಲಕ್ಷ್ಮಣ್​

ಇದಲ್ಲದೇ ಬಿಗ್​ಬಾಸ್​ ವೇದಿಕೆಯಲ್ಲಿಯೂ ಸೂಪರ್​ ಸ್ಟಾರ್​​ ಸಲ್ಮಾನ್​ ಖಾನ್​ ಸಹ ಸಿದ್ಧಾರ್ಥ್ ಮಲ್ಹೋತ್ರಾ ಅವರಲ್ಲಿ ಕಿಯಾರಾ ಅಡ್ವಾಣಿ ಹೆಸರನ್ನು ತಪ್ಪಾಗಿ ಉಚ್ಛರಿಸೋ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದರು. ಹೀಗೆ ಹಲವು ಬಾರಿ ಬಿ ಟೌನ್​ ಸೆಲೆಬ್ರಿಟಿಗಳಿಂದಲೇ ಇವರಿಬ್ಬರ ಹೆರರು ಒಟ್ಟಾಗಿ ಕೇಳಿ ಬಂದಿದೆ. ಈಗ ಅಭಿಮಾನಿಗಳು ಕೂಡ ಈ ಜೋಡಿ ಯಾವಾಗ ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದಾರೆ.

ಇದನ್ನೂ ಓದಿ:ರಿಷಭ್​​ ಪಂತ್ ಕಾರು ಅಪಘಾತ: ನಟಿ ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು?

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಟನೆಯ 'ಶೇರ್​ ಷಾ' ಸಿನಿಮಾ ಪ್ರಪಂಚದಾದ್ಯಂತ 120 ದೇಶಗಳು ಹಾಗೂ 41,000 ನಗರಗಳ ಜನರ ಮನಗೆದ್ದಿದ್ದು, ಅಮೆಜಾನ್​ ಪ್ರೈಮ್​​ನಲ್ಲಿ 'ಅತೀ ಹೆಚ್ಚು ವೀಕ್ಷಿಸಿದ ಸಿನಿಮಾ' ಎಂಬ ಬಿರುದು ಪಡೆದು ದಾಖಲೆ ನಿರ್ಮಿಸಿದೆ. ವಿಷ್ಣು ವರಧನ್ ನಿರ್ದೇಶಿಸಿದ ಈ ಸಿನಿಮಾ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನಾಧಾರಿತ ಚಿತ್ರ. ಕೋವಿಡ್​ನಿಂದಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್​ ಆಗಿದ್ದ ಈ ಸಿನಿಮಾ IMDb ನಲ್ಲಿ 8.9 ರೇಟಿಂಗ್‌ ಗಳಿಸಿದೆ.

ABOUT THE AUTHOR

...view details