ಮುಂಬೈ(ಮಹಾರಾಷ್ಟ್ರ):ಬಾಲಿವುಡ್ನಲ್ಲೀ ಸಾಲು ಸಾಲು ಮದುವೆಗಳು ನಡೆಯುತ್ತಿವೆ. ಈ ಪಟ್ಟಿಗೆ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಹೆಸರು ಕೂಡ ಸೇರಿಕೊಳ್ಳಲಿದೆ. ತಾರಾ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.
ತಮ್ಮ ಮದುವೆ ಬಗ್ಗೆ ಕಿಯಾರಾ ಅಡ್ವಾಣಿಯಾಗಲೀ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ಅವರಗಾಲೀ ಈವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ. ಒಟ್ಟೊಟ್ಟಿಗೆ ಸಭೆ-ಸಮಾರಂಭ, ಡಿನ್ನರ್, ಪಾರ್ಟಿಗಳಿಗೆ ತೆರಳುವ ಇವರು ತಾವು ಡೇಟಿಂಗ್ನಲ್ಲಿದ್ದೇವೆ ಅನ್ನೋದನ್ನು ಒಪ್ಪಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇದೇ ಫೆಬ್ರವರಿ 6 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇವರು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದ್ದು ಸಿದ್ಧತೆ ನಡೆಯುತ್ತಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರು ಭಾಗಿಯಾಗಲಿದ್ದು, ಫೆಬ್ರವರಿ 4 ರಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಲಿವೆ ಎಂಬ ಮಾಹಿತಿ ಇದೆ. ನಟರಾದ ಶಾಹಿದ್ ಕಪೂರ್, ಮೀರಾ ಕಪೂರ್, ಕರಣ್ ಜೋಹರ್ ಮತ್ತು ವರುಣ್ ಧವನ್ ಸೇರಿದಂತೆ ಖ್ಯಾತ ಸೆಲೆಬ್ರಿಟಿಗಳು ಮತ್ತು ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮದುವೆ ವಿಜೃಂಭಣೆಯಿಂದ ಜರುಗಲಿದೆ ಎನ್ನಲಾಗುತ್ತಿದೆ.
ಅತ್ಯಾಕರ್ಷಕ, ಐಷಾರಾಮಿ ಸೂರ್ಯಗಢ ಹೋಟೆಲ್ ನಗರದಿಂದ ಸುಮಾರು 20 ರಿಂದ 25 ಕಿಮೀ ದೂರದಲ್ಲಿರುವ ಸುಮ್ ರಸ್ತೆಯಲ್ಲಿದೆ. ಥಾರ್ ಮರುಭೂಮಿಯ ಹೃದಯಭಾಗದಲ್ಲಿರುವ ಫೋರ್ಟ್ ಹೋಟೆಲ್ ಅತ್ಯಂತ ಆಕರ್ಷಕವಾಗಿದೆ. ಡಿಸೆಂಬರ್ 2010 ರಲ್ಲಿ ಜೈಪುರದ ಉದ್ಯಮಿಯೊಬ್ಬರು ಈ ಹೋಟೆಲ್ ನಿರ್ಮಿಸಿದ್ದು ಭೂಮಿ ಮೇಲಿನ ಸ್ವರ್ಗದಂತೆ ಭಾಸವಾಗುತ್ತಿದೆ. ಸುಮಾರು 65 ಎಕರೆ ಪ್ರದೇಶದಲ್ಲಿ ಹರಡಿರುವ ಹೋಟೆಲ್, ಜೈಸಲ್ಮೇರ್‌ನ ಹಳದಿ ಕಲ್ಲುಗಳಿಂದ ಮಾಡಲ್ಪಟ್ಟಿರುವುದು ವಿಶೇಷ. ಡೆಸ್ಟಿನೇಶನ್ ವೆಡ್ಡಿಂಗ್‌ಗಾಗಿ ಇದು ಪ್ರಪಂಚದಾದ್ಯಂತ ಪ್ರಸಿದ್ಧ. ಇಲ್ಲಿ ಮದುವೆಗೆ ಅತ್ಯುತ್ತಮ ಕೊಠಡಿ, ಈಜುಕೊಳ ಮತ್ತು 65 ಎಕರೆ ಹೋಟೆಲ್ ಜೊತೆಗೆ ಎಲ್ಲಾ ಮದುವೆ ಕಾರ್ಯಕ್ರಮಗಳನ್ನು ನಿರ್ವಹಿಸಲು ಉತ್ತಮ ಸ್ಥಳಾವಕಾಶವಿದೆ. ವಿಶೇಷ ವಿವಾಹ ಸಮಾರಂಭಗಳಿಗಾಗಿ ಈ ಸ್ಥಳವನ್ನು ನಿರ್ಮಿಸಲಾಗಿದ್ದು ಮಂಟಪದ ಸುತ್ತ ನಾಲ್ಕು ವಿಶೇಷ ಕಂಬಗಳನ್ನು ಅಳವಡಿಸಲಾಗಿದೆ. ಸಾವಿರಕ್ಕೂ ಹೆಚ್ಚು ಅತಿಥಿಗಳು ಸೇರಬಹುದಾದ ವಿಶಾಲವಾದ ಸುಂದರ ಸ್ಥಳ ಇಲ್ಲಿದೆ.