ಕರ್ನಾಟಕ

karnataka

ETV Bharat / entertainment

ಸಿದ್ಧಾರ್ಥ್​ ಮಲ್ಹೋತ್ರಾ - ದಿಶಾ ಪಟಾನಿ 'ಯೋಧ' ಸಿನಿಮಾ ಮುಂದೂಡಿಕೆ: ಥಿಯೇಟರ್​ನಲ್ಲಿ ಒಮ್ಮೆಲೇ 6 ಸಿನಿಮಾಗಳು ಎಂಟ್ರಿ.. - ಥಿಯೇಟರ್​ನಲ್ಲಿ 6 ಸಿನಿಮಾಗಳು

ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಅಭಿನಯದ 'ಯೋಧ' ಸಿನಿಮಾ ಇದೇ ವರ್ಷ ಡಿಸೆಂಬರ್ 15 ರಂದು ಬಿಡುಗಡೆಯಾಗಲಿದೆ.

Yodha
ಸಿದ್ಧಾರ್ಥ್​ ಮಲ್ಹೋತ್ರಾ

By

Published : Jul 3, 2023, 8:07 PM IST

ಬಾಲಿವುಡ್​ ನಟರಾದ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ದಿಶಾ ಪಟಾನಿ ಅಭಿನಯದ 'ಯೋಧ' ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದ ನಿರ್ಮಾಪಕರು ಮತ್ತೊಮ್ಮೆ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಮುಂದೂಡಲು ನಿರ್ಧರಿಸಿದ್ದಾರೆ. 'ಯೋಧ' ಇದೇ ವರ್ಷ ಡಿಸೆಂಬರ್ 15 ರಂದು ಬಿಡುಗಡೆಯಾಗಲಿದೆ. ಇದು ನಾಲ್ಕನೇ ಬಾರಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

ಆದರೆ 'ಯೋಧ' ಸಿನಿಮಾಗೆ ಈ ಮುಂದೂಡಿಕೆ ಕಲೆಕ್ಷನ್​ ವಿಚಾರವಾಗಿ ತೊಡಕಾಗಲಿದೆ. ಏಕೆಂದರೆ, ಅನೇಕ ದೊಡ್ಡ ಬಜೆಟ್ ಚಿತ್ರಗಳು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿವೆ. ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆಯ ಬಗ್ಗೆ ಪೋಸ್ಟ್​ ಹಂಚಿಕೊಂಡಿರುವ ಧರ್ಮ ಪ್ರೊಡಕ್ಷನ್ಸ್, "ಮತ್ತೆ ಮೇಲೇರಲು ಸಿದ್ಧವಾಗಿದೆ. ಯೋಧ- ಸಿದ್ಧಾರ್ಥ್ ಮಲ್ಹೋತ್ರಾ ಅವರ ಸಾಹಸ ಚಿತ್ರವನ್ನು ಚೊಚ್ಚಲ ಜೋಡಿ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಡಿಸೆಂಬರ್​ 15, 2023 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ" ಎಂದು ಕ್ಯಾಪ್ಶನ್​ ನೀಡಿದ್ದಾರೆ.

ಥಿಯೇಟರ್​ನಲ್ಲಿ ಒಮ್ಮೆಲೇ 6 ಸಿನಿಮಾಗಳು.. ವಿಕ್ಕಿ ಕೌಶಲ್​, ಫಾತಿಮಾ ಸಾನಾ ಶೇಖ್​, ಸನ್ಯಾ ಮಲ್ಹೋತ್ರಾ ಮತ್ತು ಮನೋಜ್​ ಬಾಜ್‌ಪೇಯಿ ಅಭಿನಯದ, ಮೇಘನಾ ಗುಲ್ಜಾರ್ ನಿರ್ದೇಶನದ 'ಸ್ಯಾಮ್ ಬಹದ್ದೂರ್' ಸಿನಿಮಾವು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅಭಿನಯದ 'ಆನ್ ಇಂಪಾಸಿಬಲ್ ಲವ್ ಸ್ಟೋರಿ' ಡಿಸೆಂಬರ್ 7 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:Jyotika and Surya: ಕೋಪನ್‌ಹೇಗನ್‌ನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ನಟ ಸೂರ್ಯ ದಂಪತಿ

ಬಾಲಿವುಡ್​ ಸ್ಟಾರ್​ ನಟ ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಅಭಿನಯದ ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ. ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರ ಜನಪ್ರಿಯ ಹಾಸ್ಯ ಫ್ರ್ಯಾಂಚೈಸ್ ಫುಕ್ರೆಯ ಮೂರನೇ ಭಾಗವು ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬರಲಿದೆ. ಇದಲ್ಲದೇ, ಸಂದೀಪ್ ರೆಡ್ಡಿ ವಾಂಗ್​ ಅವರ ಅನಿಮಲ್ ಚಿತ್ರವನ್ನು ಸಹ ಡಿಸೆಂಬರ್ 1 ಕ್ಕೆ ಮುಂದೂಡಲಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಪುಷ್ಪ ಖ್ಯಾತಿಯ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ನಾಲ್ಕನೇ ಬಾರಿ ಮುಂದೂಡಿಕೆ: ಇನ್ನೂ ಯೋಧ ಸಿನಿಮಾವನ್ನು ಮೊದಲು, ನವೆಂಬರ್ 11, 2022 ರಂದು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ನಂತರ ತಯಾರಕರು ಬಿಡುಗಡೆ ದಿನಾಂಕವನ್ನು ಜುಲೈ 2023 ಕ್ಕೆ ಮತ್ತು ನಂತರ ಸೆಪ್ಟೆಂಬರ್ 15ಕ್ಕೆ ಮುಂದೂಡಿದರು. ಸದ್ಯ ಚಿತ್ರವನ್ನು ಡಿಸೆಂಬರ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

'ಯೋಧ' ಸಿನಿಮಾ ಕುರಿತು ಮಾತನಾಡಿರುವ ಸಿದ್ಧಾರ್ಥ್, "ಕಲಾವಿದನಾಗಿ ನೀವು ನಿಮ್ಮಲ್ಲಿರುವ ಅತ್ಯುತ್ತಮವಾದ ಸ್ಕ್ರಿಪ್ಟ್‌ಗಳ ಮೇಲೆ ಕೆಲಸ ಮಾಡಬೇಕು. ಇದು ನಿಜವಾಗಿಯೂ ನನ್ನ ಹೊಸ ಆವೃತ್ತಿಯನ್ನು ಅನಾವರಣಗೊಳಿಸಿದೆ. ಅದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರೇಕ್ಷಕರಿಂದ ನಾನು ಪಡೆದ ಪ್ರೀತಿ ಮತ್ತು ಅಭಿಮಾನ ನನ್ನನ್ನು ಮಂತ್ರಮುಗ್ಧಗೊಳಿಸಿದೆ. ಯೋಧ ಸಿನಿಮಾದ ಪ್ರತಿಕ್ರಿಯೆಗೆ ನಾನು ಕಾಯಲು ಸಾಧ್ಯವಿಲ್ಲ." ಎಂದಿದ್ದಾರೆ.

ಇದನ್ನೂ ಓದಿ:'Salaar teaser: ಹೊಸ ಪೋಸ್ಟರ್​ ಮೂಲಕ ಟೀಸರ್​ ದಿನಾಂಕ ಘೋಷಿಸಿದ 'ಸಲಾರ್'​ ತಂಡ; ಸೇವ್​ ಮಾಡಿಕೊಳ್ಳಿ ಈ ದಿನವನ್ನ!

ABOUT THE AUTHOR

...view details