ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಾಲಿವುಡ್ನ ಜನಪ್ರಿಯ ತಾರಾಜೋಡಿ. ಉತ್ತಮ ಸಿನಿಮಾಗಳ ಜೊತೆ ಜೊತೆಗೆ ವೈಯಕ್ತಿಕ ವಿಚಾರಗಳಿಂದಲೂ ಅಭಿಮಾನಿಗಳ ಮೆಚ್ಚಿನ ಜೋಡಿಯಾಗಿ ಉಳಿದುಕೊಂಡಿದ್ದಾರೆ. ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿರುವ ಈ ಜೋಡಿ ತಮ್ಮ ಪ್ರೀತಿಯನ್ನು ಯಾವುದೇ ಹಿಂಜರಿಕೆಯಿಲ್ಲದೇ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾರೆ. ಅದರಂತೆ ಇಂದು ಕಿಯಾರಾ ಅಡ್ವಾಣಿ ಶೇರ್ ಮಾಡಿರೋ ರೊಮ್ಯಾಂಟಿಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.
ಇಂದು ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜನ್ಮದಿನ. 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ನಟನಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪತ್ನಿ ಕಿಯಾರಾ ಅಡ್ವಾಣಿ ಕೂಡ ಸುಂದರ ವಿಡಿಯೋ ಶೇರ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಜೋಡಿಯ ಸಂತಸದ ಕ್ಷಣಗಳು, ಚುಂಬನದ ದೃಶ್ಯಗಳು, ಬರ್ತ್ ಡೇ ಸೆಲೆಬ್ರೇಶನ್ ಎಲ್ಲವನ್ನೂ ಶೇರ್ಷಾ ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.
ಇಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಶೇರ್ ಮಾಡಲಾಗಿರುವ ಸುಂದರ ವಿಡಿಯೋದಲ್ಲಿ, ಇಬ್ಬರೂ ಚುಂಬಿಸಿ, ಅಪ್ಪಿಕೊಂಡಿದ್ದಾರೆ. ಕ್ಯಾಮರಾಗೆ ಪೋಸ್ ನೀಡುತ್ತಿದ್ದ ಸಂದರ್ಭ ಇಬ್ಬರ ಮೊಗದಲ್ಲೂ ಸಂತಸ ಎದ್ದುಕಂಡಿದೆ. ಸಿನಿಮಾ ಥೀಮ್ನಲ್ಲಿ ಕೇಕ್ ರೆಡಿಯಾಗಿತ್ತು. ಫಿಲ್ಮ್ ರೀಲ್ ಅನ್ನು ಹೋಲುವ ವಿನ್ಯಾಸದಲ್ಲಿ ರೆಡಿ ಮಾಡಲಾಗಿದ್ದ ಕೇಕ್ನಲ್ಲಿ ಸಿದ್ಧಾರ್ಥ್ ಅವರ ಪ್ರತಿಮೆಯನ್ನು (ಕೇಕ್) ಸಹ ಇರಿಸಲಾಗಿತ್ತು. ಕಿಯಾರಾ ಸ್ಟೈಲಿಶ್ ಬ್ಲ್ಯಾಕ್ ಡ್ರೆಸ್ನಲ್ಲಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಸಿದ್ಧಾರ್ಥ್ ರೈನ್ಬೋ ಕಲರ್ನ ಟೀ ಶರ್ಟ್, ಪ್ಯಾಂಟ್ ಧರಿಸಿದ್ದರು. ವಿಡಿಯೋ ಹಂಚಿಕೊಂಡ ಪತ್ನಿ ಕಿಯಾರಾ ಅಡ್ವಾಣಿ, ರೆಡ್ ಹಾರ್ಟ್ ಎಮೋಜಿಯೊಂದಿಗೆ "ಹ್ಯಾಪಿ ಬರ್ತ್ಡೇ ಲವ್" ಎಂಬ ಕ್ಯಾಪ್ಷನ್ ಕೊಟ್ಟಿದ್ದರು.