ಜೈಪುರ:ಇಂದು ನಡೆಯಬೇಕಿದ್ದ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕಲ್ಯಾಣೋತ್ಸವ ನಾಳೆಗೆ ಮುಂದೂಡಲಾಗಿದೆ. ಈ ಮೊದಲು ಫೆ.6 ಕ್ಕೆ ಮದುವೆ ನಿಶ್ಚಯ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ನಾಳೆಗೆ ಮರುನಿಗದಿಯಾಗಿದೆ. ರಾಜಸ್ಥಾನದ ಜೈಸಲ್ಮೇರ್ನ ಸೂರ್ಯಗಢ ಪ್ಯಾಲೇಸ್ ಹೋಟೆಲ್ನಲ್ಲಿ ಸಿದ್ದಾರ್ಥ್- ಕಿಯಾರಾ ವಿವಾಹ ನಡೆಯಲಿದೆ.
65 ಎಕರೆ ವಿಸ್ತೀರ್ಣದಲ್ಲಿರುವ ಹೋಟೆಲ್ನಲ್ಲಿ ಬಿಗಿ ಭದ್ರತೆಯಲ್ಲಿ ವಿವಾಹೋತ್ಸವ ನಡೆಯಲಿದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ವಿವಾಹದಲ್ಲಿ ಬಾಲಿವುಡ್ ನಟ, ನಟಿಯರು, ಕುಟುಂಬಸ್ಥರು, ಇಶಾ ಅಂಬಾನಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಮೊಬೈಲ್ ಬಳಕೆಗೆ ನಿಷೇಧ:ವಿವಾಹ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಮದುವೆಯ ಫೋಟೋಗಳು ಸೋರಿಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಮದುವೆಗೆ ಆಮಂತ್ರಿತರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಅಲ್ಲದೇ, ಮೂರು ಏಜೆನ್ಸಿಗಳಿಗೆ ಭದ್ರತೆಗೆ ಸೂಚಿಸಲಾಗಿದೆ.
ಹೊಳೆಯುತ್ತಿರುವ ಸೂರ್ಯಗಢ ಪ್ಯಾಲೇಸ್:ಸೂರ್ಯಗಢ ಪ್ಯಾಲೇಸ್ ಭಾರತದ ಪ್ರಮುಖ ವಿವಾಹ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ಸೌಂದರ್ಯ ಮತ್ತು ಪ್ರಶಾಂತ ವಾತಾವರಣದಿಂದಾಗಿ ಜೋಡಿಗಳು ಸೂರ್ಯಗಢವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 10 ಕಿಮೀ ಆಸುಪಾಸಿನಲ್ಲಿ ಯಾವುದೇ ಜನವಸತಿ ಇಲ್ಲ. 65 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಪ್ಯಾಲೇಸ್ ರಾತ್ರಿ ವೇಳೆ ಝಗಮಗಿಸುತ್ತಿದೆ. ಇಲಲ್ಇ ಎರಡು ದೊಡ್ಡ ಹವೇಲಿಗಳನ್ನು ನಿರ್ಮಿಸಲಾಗಿದೆ.
ಗೋಡೆಗಳ ಮೇಲೆ ಅತ್ಯುತ್ತಮವಾದ ಸಾಂಪ್ರದಾಯಿಕ ಕೆತ್ತನೆಗಳಿವೆ. ಇಡೀ ಹೋಟೆಲ್‌ಗೆ ರಜಪೂತರ ಸಂಪ್ರದಾಯವನ್ನು ತುಂಬಲಾಗಿದೆ. ಪ್ಯಾಲೇಸ್ ಸುತ್ತಲೂ ಬಯಲು ಸ್ಥಳ, ಉದ್ಯಾನಗಳು ಇನ್ನಷ್ಟು ಕಳೆ ನೀಡುತ್ತವೆ. ಜಾನಪದ ಕಲಾವಿದರ ಹಾಡು ಮದುವೆಗೆ ಕಳೆ ನೀಡುತ್ತಿದೆ. ಪ್ಯಾಲೇಸ್ನಲ್ಲಿ 84 ಕೊಠಡಿಗಳು, 92 ಮಲಗುವ ಕೋಣೆಗಳು, ಎರಡು ದೊಡ್ಡ ಉದ್ಯಾನಗಳು, ಸರೋವರ, ಜಿಮ್, ಬಾರ್, ಒಳಾಂಗಣ ಈಜುಕೊಳ, ಐದು ದೊಡ್ಡ ವಿಲ್ಲಾಗಳು, ಎರಡು ದೊಡ್ಡ ರೆಸ್ಟೋರೆಂಟ್‌ಗಳು, ಕುದುರೆ ಸವಾರಿ, ಸಣ್ಣ ಮೃಗಾಲಯ ಇಲ್ಲಿದೆ.
ಸಿದ್ಧಾರ್ಥ್ ಅವರ ನಟನೆಯ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ನಿರ್ದೇಶಕ ಕರಣ್ ಜೋಹರ್, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಅವರು ಈಗಾಗಲೇ ಜೈಸಲ್ಮೇರ್ ತಲುಪಿದ್ದಾರೆ. ಕರಣ್ ಜೋಹರ್ ಜೊತೆಗಿನ 'ಡೋಲಾ ರೇ ಡೋಲಾ'ಗೆ ಶಾಹಿದ್ ನೃತ್ಯ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಪ್ಯಾಲೇಸ್ಗೆ ಬಂದ ಜೋಡಿ:ಸಿದ್ಧಾರ್ಥ್ ಮತ್ತು ಕಿಯಾರಾ ಪ್ರತ್ಯೇಕವಾಗಿ ಮದುವೆಯ ತಾಣ ಸೂರ್ಯಗಢ ಪ್ಯಾಲೇಸ್ ತಲುಪಿದ್ದಾರೆ. ಕಿಯಾರಾ ಅವರು ತಾಯಿ ಜೆನೆವಿವ್ ಜಾಫ್ರಿ, ತಂದೆ ಜೈ ಜಗದೀಪ್ ಅಡ್ವಾಣಿ, ಅಜ್ಜಿ ಮತ್ತು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಇಂದು ಬೆಳಗ್ಗೆ ಇಲ್ಲಿಗೆ ಆಗಮಿಸಿದರು. ಮುಕೇಶ್ ಅಂಬಾನಿಯವರ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿ, ಮುಂಬೈನಿಂದ ಜೈಸಲ್ಮೇರ್‌ಗೆ ಬಂದಿಳಿದರು. ಇನ್ನು ನಟ ಸಿದ್ದಾರ್ಥ್ ಮಲ್ಹೋತ್ರಾ ಕುಟುಂಬ ಸಮೇತವಾಗಿ ದೆಹಲಿಯಿಂದ ನಿನ್ನೆ ರಾತ್ರಿಯೇ ಬಂದಿಳಿದಿದ್ದಾರೆ.
ಓದಿ:ಸಿದ್ಧಾರ್ಥ್ - ಕಿಯಾರಾ ಮದುವೆ: ನಟಿಯ ಬ್ರೈಡಲ್ ಫೋಟೋ ವೈರಲ್..