ಜೈಪುರ (ರಾಜಸ್ಥಾನ):ನಟ ಸಿದ್ಧಾರ್ಥ್ ಹಾಗೂ ನಟಿ ಕಿಯಾರಾ ವಿವಾಹ ಕಾರ್ಯಕ್ರಮದ ಹಿನ್ನೆಲೆ ಎಲ್ಲಾ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ. ಹೌದು, ಸಿದ್ಧಾರ್ಥ್ ಮಲ್ಹೋತ್ರಾ ವಿವಾಹದಲ್ಲಿ ಪಾಲ್ಗೊಳ್ಳಲು ಕಿಯಾರಾ ಅಡ್ವಾಣಿ ಕುಟುಂಬದಿಂದ ಇದುವರೆಗೆ ಸುಮಾರು 17 ಅತಿಥಿಗಳು ಆಗಮಿಸಿದ್ದಾರೆ. ಸಿದ್ದಾರ್ಥ್ ಅವರು, ತಮ್ಮ ತಂದೆ ಸುನಿಲ್ ಮಲ್ಹೋತ್ರಾ, ತಾಯಿ ರಿಮಾ ಮಲ್ಹೋತ್ರಾ, ಸಹೋದರ ಹರ್ಷದ್ ಮಲ್ಹೋತ್ರಾ ಹಾಗೂ ಇತರರೊಂದಿಗೆ ಫೆಬ್ರವರಿ 4ರಂದು ರಾತ್ರಿ 8ಕ್ಕೆ ಸುಮಾರಿಗೆ ಬಂದಿದ್ದರು.
ಫೆಬ್ರವರಿ 6 ರಂದು, ಅವರ ಚಿಕ್ಕಪ್ಪ ಜೈದೀಪ್ ಭಲ್ಲಾ, ಚಿಕ್ಕಮ್ಮ ಎರಾಸೆಲಿ, ಅಜ್ಜಿ ಹರಚರಣ್ ಭಲ್ಲಾ, ಸೊಸೆ ಅವನಿ, ಚಿಕ್ಕಮ್ಮ ಅಂಬಿಕಾ ಹೊರಾ, ಚಿಕ್ಕಪ್ಪ ಅಶೋಕ್ ಹೊರಾ, ಸೋದರ ಸಂಬಂಧಿಗಳಾದ ರೋಹನ್ ಮಲ್ಹೋತ್ರಾ, ಮೊಮಿನಾ ನೂರ್, ಇಶಿತಾ ಭಾರದ್ವಾಜ್, ವೈಭವ್ ಭಾರದ್ವಾಜ್, ಅರ್ಜುನ್ ಹೊರಾ, ಅರ್ಜುನ್ ಅವರ ಪತ್ನಿ ಜೋಯಾ ಹೊರಾ ಮಲ್ಹೋತ್ರಾ ಮದುವೆ ಕಾರ್ಯಕ್ರಮಕ್ಕೆ ಬಂದರು. ನಾನು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ಸಂತೋಷವಾಗಿದ್ದೇನೆ ಎಂದು ಸಿದ್ಧಾರ್ಥ್ ಅವರ ಅಜ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮದುವೆಗೆ ಬರಲಿದ್ದಾರೆ ಹಲವು ಗಣ್ಯರು:ದೆಹಲಿ ಹುಡುಗ ಸಿದ್ಧಾರ್ಥ್ ಅವರ ಅತಿಥಿ ಪಟ್ಟಿಯು ಕಿಯಾರಾ ಅವರಿಗಿಂತ ದೊಡ್ಡದಾಗಿದೆ. ಅದರಲ್ಲಿ ಅವರ ತಾಯಿಯ ಗೆಳೆಯರೂ ಸೇರಿದ್ದಾರೆ. ಈ ಅತಿಥಿಗಳು ದೆಹಲಿ ಮತ್ತು ಪಂಜಾಬ್‌ನಿಂದ ಬಂದಿದ್ದಾರೆ. ದಂಪತಿಯ ಸಾಮಾನ್ಯ ಸ್ನೇಹಿತ ಕರಣ್ ಜೋಹರ್ ಎರಡೂ ಕಡೆಯಿಂದ ಪಟ್ಟಿಯಲ್ಲಿದ್ದರು. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ಸಿನಿಮಾ ನಿರ್ಮಾಪಕರಾದ ಆರತಿ ಶೆಟ್ಟಿ, ಪೂಜಾ ಶೆಟ್ಟಿ ಸೇರಿದಂತೆ ಹಲವರು ಮದುವೆಗೆ ಆಗಮಿಸಲಿದ್ದಾರೆ.
ಕಿಯಾರಾ ಕುಟುಂಬದಿಂದ ಇದುವರೆಗೆ 10 ಮಂದಿ ಬಂದಿದ್ದಾರೆ. ಇವರಲ್ಲಿ ಆಕೆಯ ತಂದೆ ಜಗದೀಪ್ ಅಡ್ವಾಣಿ, ತಾಯಿ ಜಿನೆವೀವ್ ಅಡ್ವಾಣಿ, ಇಶಾನ್ ಅಡ್ವಾಣಿ ಮತ್ತು ಅಜ್ಜಿ ಸೇರಿದ್ದಾರೆ. ಭಾನುವಾರ ಸಂಜೆ ಆಕೆಯ ಸಹೋದರ ಮಿಶಾಲ್ ಅಡ್ವಾಣಿ ಬಂದಿದ್ದರು. ಇದಲ್ಲದೇ ಅತ್ತ ಸುಮಿತಾ ಅಡ್ವಾಣಿ, ಚಿಕ್ಕಪ್ಪ ಹರೀಶ್ ಅಡ್ವಾಣಿ, ಅಜ್ಜಿ ವಲೇರಿ ಅಡ್ವಾಣಿ, ಚಿಕ್ಕಮ್ಮ ಶಾಹೀನ್ ಅಗರ್ವಾಲ್, ಸಂಬಂಧಿಕರಾದ ಇಶಿತಾ ಅಡ್ವಾಣಿ, ಕರ್ಮ ವಿವಾನ್ ಫೆಬ್ರವರಿ 5 ರಂದು ಆಗಮಿಸಿದ್ದರು.