ಕನ್ನಡ ಚಿತ್ರರಂಗದಲ್ಲಿ ಬಯೋಪಿಕ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಬೆಂಗಳೂರಿನ ಒಂದು ಕಾಲದ ಅಂಡರ್‌ವಲ್ಡ್ ಡಾನ್ ಜಯರಾಜ್ ಅವರ ಬದುಕನ್ನು ತೆರೆಮೇಲೆ ತರುವ ಕೆಲಸ ಶುರುವಾಗಿದೆ.
ಈ ಸಿನಿಮಾಗೆ 'ಹೆಡ್‌ಬುಷ್' ಎಂದು ಟೈಟಲ್ ಇಡಲಾಗಿದೆ. ಆರಂಭದಿಂದಲೇ ಸಿನಿಮಾ ಸ್ಯಾಂಡಲ್ವುಡ್ ಅಲ್ಲದೇ ಬೇರೆ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ.
ಕೆಲವು ದಿನಗಳ ಹಿಂದೆ ಚಿತ್ರಕ್ಕೆ ಲೂಸ್ ಮಾದ ಯೋಗಿ ಪ್ರವೇಶಿಸಿದ್ದರು. ಇದೀಗ ವಸಿಷ್ಠ ಸಿಂಹ ಹಾಗು ನಟಿ ಶ್ರುತಿ ಹರಿಹರನ್ ಚಿತ್ರದ ಅಡ್ಡಕ್ಕೆ ಬಂದಿದ್ದಾರೆ. ಇದೊಂದು ನೈಜ ಘಟನೆ ಆಧರಿಸಿದ ಸಿನಿಮಾ. ಅಗ್ನಿ ಶ್ರೀಧರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಶೂನ್ಯ ಎಂಬ ಯುವ ನಿರ್ದೇಶಕ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಹೆಡ್‌ಬುಷ್ ಸಿನಿಮಾದಲ್ಲಿ ಹಲವು ನೈಜ ಪಾತ್ರಗಳು ಬರಲಿವೆ. ಅಂತೆಯೇ, ಜಯರಾಜ್ ಪಾತ್ರವನ್ನು ಡಾಲಿ ಧನಂಜಯ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ದೇಹದ ತೂಕ ಹೆಚ್ಚಿಸಿಕೊಂಡಿದ್ದಾರೆ. ನಾಯಕಿಯಾಗಿ ಬಹುಭಾಷಾ ನಟಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ.