ಕರ್ನಾಟಕ

karnataka

ETV Bharat / entertainment

ಓಂ 2 ಬರುತ್ತೆ ಅಂದ್ರೆ ನಾನು ಎಷ್ಟು ವರ್ಷ ಬೇಕಾದರೂ ಕಾಯ್ತಿನಿ: ಶಿವರಾಜ್ ಕುಮಾರ್ - ಉಪೇಂದ್ರ

ಸ್ಯಾಂಡಲ್​ವುಡ್​ನಲ್ಲಿ ಮೊಟ್ಟ ಮೊದಲ ಅಂಡರ್​ ವರ್ಲ್ಡ್ ಅನ್ನು ಜನರಿಗೆ ತಿಳಿಸಿದ ಓಂ ಸಿನಿಮಾದ ಭಾಗ​ 2ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೆಡಿ ಎಂದಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

By ETV Bharat Karnataka Team

Published : Jan 8, 2024, 4:02 PM IST

Updated : Jan 8, 2024, 8:31 PM IST

ಓಂ 2 ಸಿನಿಮಾಗೆ ಎಷ್ಟು ವರ್ಷ ಬೇಕಾದರೂ ಕಾಯ್ತಿನಿ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಯುಳ್ಳ ಹಾಗು ಸಮಾಜದ ಬದಲಾವಣೆಗೆ ಕಾರಣವಾದ ಹಲವಾರು ಕ್ಲಾಸಿಕ್ ಸಿನಿಮಾಗಳಿವೆ. ಅಂದಿನ ಈ ಕ್ಲಾಸಿಕ್ ಸಿನಿಮಾಗಳು ಈಗೀನ ಯುವಕರಿಗೆ ಇಷ್ಟ ಆಗುತ್ತವೆ. ಆ ಸಾಲಿನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ಹಾಗು ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದ ಓಂ ಸಿನಿಮಾ ಸದಾ ಕಾಲ ಮುಂಚೂಣಿಯಲ್ಲಿರುತ್ತದೆ.

ಈಗಿನ ಕಾಲಕ್ಕೆ ತಕ್ಕನಾಗಿಯೇ ಮತ್ತಷ್ಟು ಒಳ್ಳೆ ಕಥೆಯುಳ್ಳ ಚಿತ್ರಗಳು ಬಂದರು, ಓಂ ಸಿನಿಮಾ ಮಾತ್ರ ಇವತ್ತಿಗೂ ಮಾಸ್ಟರ್ ಸಿನಿಮಾವಾಗಿದೆ. 1995 ರಲ್ಲಿ ತೆರೆ ಕಂಡಿದ್ದ ಕ್ಲಾಸಿಕ್ ಕಲ್ಟ್ ಸಿನಿಮಾ ಆಗಿರುವ ಓಂ ಚಿತ್ರದ ಪಾರ್ಟ್​ 2 ಬರಬೇಕು ಅನ್ನೋದು ಕೋಟ್ಯಂತರ ಅಭಿಮಾನಿಗಳ ಮಹದಾಸೆಯಾಗಿದೆ. ಶಿವಣ್ಣ ಈ ಚಿತ್ರದಲ್ಲಿ ಸತ್ಯ ಪಾತ್ರ ಮಾಡುವ ಮೂಲಕ ಅಂದಿನ ಯುವಕರ ದಿಲ್ ಕದ್ದಿದ್ದರು. ಅದೇ ಶಿವಣ್ಣ ಈಗಲೂ ಓಂ ಚಿತ್ರದ ಸತ್ಯ ಪಾತ್ರದ ಮೂಲಕ ಅತಿ ಹೆಚ್ಚು ಇಷ್ಟಾನೂ ಆಗುತ್ತಾರೆ.

ಸತ್ಯನ ಲವರ್​ ಮಧು ಆಗಿ ನಟಿ ಪ್ರೇಮ ಕೂಡ ಇಷ್ಟ ಆಗುತ್ತಾರೆ. ಮತ್ತೊಂದು ವಿಷಯ ಅಂದ್ರೆ ನಿರ್ದೇಶಕ ಉಪೇಂದ್ರ ಈ ಚಿತ್ರದ ಮೂಲಕ ಒಂದು ಮೈಲಿಗಲ್ಲು ಸಾಧಿಸಿದ್ದರು. ರಿಯಲ್ ರೌಡಿಗಳನ್ನು ಈ ಚಿತ್ರದಲ್ಲಿ ತೆರೆ ಮೇಲೆ ತಂದು ಭೂಗತ ಜಗತ್ತಿನ ಕಥೆಯನ್ನು ಹೇಳಿದ್ದರು. ಕನ್ನಡ ಚಿತ್ರರಂಗದಲ್ಲಿ ಮಾಸ್ಟರ್ ಪೀಸ್ ಚಿತ್ರವಾಗಿರೋ ಓಂ 2 ಬರಬೇಕು ಅನ್ನೋದು ಅಭಿಮಾನಿಗಳ ಬೇಡಿಕೆಯಾಗಿದೆ.

ಅದರಂತೆ ಉಪೇಂದ್ರ ನಿರ್ದೇಶನದ ಯು ಐ ಚಿತ್ರದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿವಣ್ಣ ಮಾತನಾಡಿ, ಓಂ 2 ಸಿನಿಮಾ ಬರುತ್ತದೆ ಎಂದರೆ ನಾನು ಇನ್ನೂ 10 ವರ್ಷ ಬೇಕಾದರೂ ಕಾಯುತ್ತೇನೆ. ಶಿವಣ್ಣನಿಗೆ ವಯಸ್ಸು ಆಗೋದಿಲ್ಲ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು. ಆದರೆ ನಿರ್ದೇಶಕ ಹಾಗು ನಟ ಉಪೇಂದ್ರ ಅವರು ಕಥೆ ರೆಡಿ ಮಾಡಿದರೆ ನಾನು ಓಂ 2 ಚಿತ್ರ ಮಾಡುತ್ತೇನೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಉಪೇಂದ್ರ ಅವರು ಓಂ 2 ಚಿತ್ರ ಮಾಡಲು ಮನಸ್ಸು ಮಾಡಬೇಕಿದೆ. ಏಕೆಂದರೆ ಓಂ ಚಿತ್ರದ ಬಹು ದೊಡ್ಡ ಸಕ್ಸಸ್ ನಿಂದಾಗಿ ಶಿವರಾಜ್ ಕುಮಾರ್ ಹಾಗು ಉಪೇಂದ್ರ ಆತ್ಮೀಯ ಗೆಳೆಯರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಉಪೇಂದ್ರ ಸಿನಿಮಾಕ್ಕೆ ಶಿವಣ್ಣ ಸಾಥ್ ನೀಡುತ್ತ ಬಂದಿದ್ದಾರೆ. ಇದರ ಜೊತೆಗೆ ಶಿವರಾಜ್ ಕುಮಾರ್ ಸಿನಿಮಾಗಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಉಪೇಂದ್ರ ಬಂದು ಸಿನಿಮಾಗೆ ಶುಭ ಕೋರಿದ್ದಾರೆ.

ಕಳೆದ ಎರಡು ದಶಕಗಳಿಂದ ಕುಚಿಕೋ ಗೆಳೆಯರು ಆಗಿರುವ ಶಿವರಾಜ್ ಕುಮಾರ್ ಹಾಗು ಉಪೇಂದ್ರ ಮತ್ತೆ ಒಟ್ಟಿಗೆ ಓಂ 2 ಸಿನಿಮಾ ಮಾಡಬೇಕು ಅನ್ನೋದು ಕೋಟ್ಯಾಂತರ ಅಭಿಮಾನಗಳ ಆಸೆ. ಈ ಕನಸನ್ನು ರಿಯಲ್ ಸ್ಟಾರ್ ಉಪೇಂದ್ರ ಈಡೇರಿಸುತ್ತಾರೆ ಅನ್ನೋದು ಕಾಲ ನಿರ್ಧರಿಸಲಿದೆ.

ಇದನ್ನೂ ಓದಿ :ಉಪೇಂದ್ರ ಅಭಿನಯದ 'ಯುಐ' ಚಿತ್ರದ ಟೀಸರ್ ಬಿಡುಗಡೆ

Last Updated : Jan 8, 2024, 8:31 PM IST

ABOUT THE AUTHOR

...view details