ಕರ್ನಾಟಕ

karnataka

ETV Bharat / entertainment

Shivarajkumar Birthday: ಅಪ್ಪಾಜಿಯಿಂದ ಶಿವಣ್ಣ ಕಲಿತ ವಿದ್ಯೆ ಏನು ಗೊತ್ತೇ? - ಕರುನಾಡ ಚಕ್ರವರ್ತಿ

ಹ್ಯಾಟ್ರಿಕ್‌ ಹೀರೋ ಶಿವರಾಜ್​ ಕುಮಾರ್ ಅವರಿಗಿಂದು 62ನೇ ಹುಟ್ಟುಹಬ್ಬದ ಸಂಭ್ರಮ.

shivarajkumar birthday shivanna celebrate his 62nd birthday with fans
shivarajkumar birthday shivanna celebrate his 62nd birthday with fans

By

Published : Jul 12, 2023, 9:29 AM IST

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಹೀಗೆ ಅಭಿಮಾನಿಗಳಿಂದ ಹಲವು ಬಿರುದಾವಳಿ ಪಡೆದಿರುವ ಕನ್ನಡದ ಜನಪ್ರಿಯ ನಟ ಶಿವರಾಜ್‌ಕುಮಾರ್. ಚಿತ್ರರಂಗದಲ್ಲಿ ಮೂರೂವರೆ ದಶಕಗಳನ್ನು ಪೂರೈಸಿರುವ ಇವರು 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಸೆಂಚುರಿ ಸ್ಟಾರ್​ ಎಂದು ಗುರುತಿಸಿಕೊಂಡಿದ್ದಾರೆ. ಹಿರಿಯ ನಟನಿಗೆ ಇಂದು 62ನೇ ಹುಟ್ಟುಹಬ್ಬದ ಸಂಭ್ರಮ!.

ರಣರಂಗ ಸಿನಿಮಾದ ಓ ಮೇಘವೇ.. ಹಾಡು ಹಾಡಿಸಿದ್ದ ಹಂಸಲೇಖ

ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಹಾಗು ಸಹೋದರ ಪುನೀತ್ ರಾಜ್‍ಕುಮಾರ್ ಆಗಲಿಕೆಯಿಂದ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ಅಭಿಮಾನಿಗಳ ಒತ್ತಾಯದ ಹಿನ್ನೆಲೆಯಲ್ಲಿ ಬರ್ತ್ ಡೇ ಆಚರಣೆಗೆ ಮುಂದಾಗಿದ್ದಾರೆ.

ಅಂಡಮಾನ್​ ಸಿನಿಮಾದಲ್ಲಿ ಮಗಳ ಜೊತೆ ಹ್ಯಾಟ್ರಿಕ್ ಹೀರೋ

ತಂದೆ ವರನಟ ಡಾ.ರಾಜ್ ಕುಮಾರ್ ಅವರ ಆದರ್ಶಗಳನ್ನು ಪಾಲಿಸುವ ಶಿವಣ್ಣ, ನಟರಷ್ಟೇ ಅಲ್ಲ, ಗಾಯಕರೂ ಹೌದು. ಇವರು​​ ಸಿಂಗರ್ ಆಗಿದ್ದೇ ಒಂದು ಕುತೂಹಲದ ಸಂಗತಿ. ಚಿತ್ರರಂಗದಲ್ಲಿ ನಟರು ಗಾಯಕರಾಗುವ ಸಂಸ್ಕೃತಿ ಬಾಲಿವುಡ್ ನಟ ಕಿಶೋರ್ ಕುಮಾರ್ ಮತ್ತು ಡಾ.ರಾಜ್ ಕುಮಾರ್ ಕಾಲದಿಂದಲೂ ಇದೆ‌. ನಟರು ಗಾಯಕರಾಗಬೇಕೆಂದರೆ ಶೃತಿ, ಧ್ವನಿ ಚೆನ್ನಾಗಿರಬೇಕು. ಆದರೆ ಬರುಬರುತ್ತಾ ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ಯಾವಾಗ ಡಾ.ರಾಜ್ ಕುಮಾರ್ ಅಭಿನಯದ ಜೊತೆಗೆ ಹಾಡು ಹಾಡೋಕೆ ಶುರು ಮಾಡಿದ್ರೋ, ನಟ- ನಟಿಯರು ಕೂಡಾ ಹಾಡುವ ಟ್ರೆಂಡ್ ಶುರು ಮಾಡಿದರು. ಅದೇ ರೀತಿ, ತಂದೆಯ ಸ್ಫೂರ್ತಿಯಿಂದಲೇ ಶಿವರಾಜ್ ಕುಮಾರ್​​​ಗೆ ಹಾಡುವ ಆಸಕ್ತಿ ಹುಟ್ಟಿತ್ತು.

ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ರಾಘವೇಂದ್ರ ರಾಜ್​​ಕುಮಾರ್​ ಜೊತೆ ಹಾಡಿದ್ದ ಶಿವಣ್ಣ

ಆನಂದ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ 'ಮಿಸ್ಟರ್ ಪುಟ್ಟಸ್ವಾಮಿ' ಮೊದಲು ಅಭಿನಯಕ್ಕೆ ಹೆಚ್ಚು ಹೊತ್ತು ಕೊಡ್ತಾ ಬಂದ್ರು. 1988ರಲ್ಲಿ ನಮ್ಮದೇ ಅಭಿನಯದ ರಣರಂಗ ಸಿನಿಮಾದಲ್ಲಿ ಓ ಮೇಘವೇ ನಿಧಾನವಾಗಿ ನೀ ಬಾ.. ಎಂಬ ಡ್ಯುಯೆಟ್ ಹಾಡು ಹಾಡಿದ್ದರು. ಇದಕ್ಕೆ ಕಾರಣ ಸಂಗೀತ ನಿರ್ದೇಶಕ ಹಂಸಲೇಖ ಅನ್ನೋದನ್ನು ಶಿವರಾಜ್ ಕುಮಾರ್ ಹೇಳಿದ್ದರು.

ಮೊದಲ ಆನಂದ್​ ಸಿನಿಮಾದ ಲುಕ್​​

ರಣರಂಗ ಸಿನಿಮಾದಿಂದ ಗಾಯಕರಾದ ಶಿವಣ್ಣ, ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಮತ್ತೆ ಹಾಡಿದರು. 1990ರಲ್ಲಿ ಬಂದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್​​ನಲ್ಲಿ ಕಾಣಿಸಿಕೊಂಡಿದ್ದು, ಅಣ್ಣನಿಗೆ ಜೊತೆಯಾಗಿ ರಾಘವೇಂದ್ರ ರಾಜ್‌ಕುಮಾರ್ ಬೊಂಬಾಟೋ ಬೊಂಬಾಟು ನಿನ್ನ ಆಟ ಬೊಂಬಾಟೋ ಎಂಬ ಹಾಡಿಗೆ ಧ್ವನಿಗೂಡಿಸಿದ್ದರು. 90ರ ದಶಕದಲ್ಲಿ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿ ಅವರದ್ದು ಹಿಟ್ ಜೋಡಿ ಎಂದು ಕರೆಯಿಸಿಕೊಂಡಿತ್ತು. ಇವರಿಬ್ಬರ ಕಾಂಬಿನೇಶನ್​​ನಲ್ಲಿ ಬಂದ ತಾನನ ತಂದಾನಾ ಕುಣಿಸಿದ ಯವ್ವನಾ ಎಂಬ ಡ್ಯೂಯೆಟ್ ಹಾಡು ಸೂಪರ್ ಹಿಟ್ ಆಗಿತ್ತು. ಉದಯ್ ಕುಮಾರ್ ಸಾಹಿತ್ಯಕ್ಕೆ ಉಪೇಂದ್ರ ಕುಮಾರ್ ಸಂಗೀತವಿತ್ತು. ಈ ವೇಳೆ ಬ್ಯಾಕ್ ಡೂ ಬ್ಯಾಕ್​ ಸಿನಿಮಾದಲ್ಲಿ ನಟಿಸುತ್ತಿದ್ದ ಶಿವರಾಜ್​ಕುಮಾರ್ ​​ನಟನೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದರು.

1990ರ ಸ್ಯಾಂಡಲ್​ವುಡ್​ನ ಹಿಟ್​ ಜೋಡಿ ಶಿವರಾಜ್​ ಕುಮಾರ್​ ಮತ್ತು ಸುಧಾರಾಣಿ

1996ರಲ್ಲಿ ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ಮೂಡಿ ಬಂದ ಜನುಮದ ಜೋಡಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಎತ್ತಿನ ಗಾಡಿಯಲ್ಲಿ ನಟಿ ಶಿಲ್ಪಾ ಜೊತೆಗೆ ಮಣಿ ಮಣಿ ಎಂದು ಹಾಡುವುದರ ಮೂಲಕ ಹೊಸ ಟ್ರೆಂಡ್ ಶುರು ಆಗಿತ್ತು. ಚಿತ್ರಕ್ಕೆ ಮನೋಹರ್ ಸಂಗೀತ ನಿರ್ದೇಶನವಿತ್ತು. 1988ರಲ್ಲಿ ಕಿರಿಯ ಮಗಳು ನಿವೇದಿತಾ ಜೊತೆಗೆ ನಟಿಸಿದ ಅಂಡಮಾನ್​ ಸಿನಿಮಾದಲ್ಲಿ ಅಂಡಮಾನ್​ ಅಂಡಮಾನ್​ ಎಂಬ ಹಾಡು ಹಾಡಿದ್ದರು. ಶಿವಣ್ಣನ ಹಾಡಿಗೆ ಗಾಯಕಿ ಚಿತ್ರಾ ಸಾಥ್ ನೀಡಿದ್ದರು. ಈ ಹಾಡು ಆವತ್ತಿನ ದಿನಗಳ ಅಪ್ಪ ಮಗಳ ಫೇವರೆಟ್ ಆಗಿತ್ತು.

ನಟನೆ ಜೊತೆಗೆ ಹಾಡು ಹಾಡುವ ಬೆರಳೆಣಿಕೆ ಕಾಲವಿದರಲ್ಲಿ ಶಿವಣ್ಣ ಕೂಡಾ ಒಬ್ಬರು

2000ರಲ್ಲಿ ಶಿವಣ್ಣ ಮತ್ತು ಎಸ್.​ನಾರಾಯಣ್ ಒಟ್ಟಿಗೆ ಅಭಿನಯಿಸಿರುವ ಗಲಾಟೆ ಅಳಿಯಂದ್ರು ಸಿನಿಮಾದಲ್ಲೂ ಹಾಡಿದ್ದರು. 2010ರಲ್ಲಿ ಜೋಗಿ ಸಿನಿಮಾದಲ್ಲಿ ಸ್ನೇಹಿತನ ಪಾರ್ಟ್​ ಮಾಡಿದ್ದ ರಾಘುರಾಮ್ ನಿರ್ದೇಶನದ ಚೆಲುವೆಯೇ ನಿನ್ನ ನೋಡಲು ಚಿತ್ರದಲ್ಲಿ ಹಾಡಿಗೆ ದನಿಯಾಗಿದ್ದರು. ಹೀಗೆ ಗಂಡನ ಮನೆ, ತಾಯಿಯ ಮಡಿಲು, ಲಕ್ಷ್ಮೀ, ಜೋಗಿ, ಕಿಲ್ಲಿಂಗ್ ವೀರಪ್ಪನ್, ಶ್ರೀಕಂಠ, ವೇದ ಹೀಗೆ ತಮ್ಮ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಹಾಡುಗಳನ್ನು ಹಾಡಿದ್ದಾರೆ. ಅಷ್ಟೇ ಅಲ್ಲ ತಾರಕಾಸುರ, ಕನ್ನಡಿಗ, ಮಜ್ಜಿಗೆ ಹುಳಿ ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾಗಳಿಗೂ ಸೆಂಚುರಿ ಸ್ಟಾರ್ ಧ್ವನಿ ನೀಡಿದ್ದಾರೆ. ನಟನೆ ಜೊತೆಗೆ ಹಾಡು ಹಾಡುವ ಬೆರಳೆಣಿಕೆಯ ಕಲಾವಿದರಲ್ಲಿ ಶಿವಣ್ಣ ಕೂಡಾ ಒಬ್ಬರು.

ಇದನ್ನೂ ಓದಿ:50 ದಿನ ಪೂರೈಸಿದ 'ಡೇರ್​ ಡೆವಿಲ್​ ಮುಸ್ತಫಾ': ಚಿತ್ರ ತಂಡದಿಂದ ಬಿರಿಯಾನಿ, ಪುಳಿಯೋಗರೆ ಪಾರ್ಟಿ

For All Latest Updates

ABOUT THE AUTHOR

...view details