ಕನ್ನಡ ಚಿತ್ರರಂಗದಲ್ಲಿ ನಾತಿಚಾರಮಿ, 100 ಹಾಗೂ ಗಾಳಿಪಟ 2 ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿರುವ ಫ್ಯಾಷನಿಟಿಕ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ. ಇತ್ತೀಚೆಗಷ್ಟೇ ಗಾಳಿಪಟ 2 ಎಂಬ ಬ್ಲಾಕ್ಬಸ್ಟರ್ ಚಿತ್ರವನ್ನು ತಮ್ಮ ಸೂರಜ್ ಪ್ರೊಡಕ್ಷನ್ ಅಡಿ ನಿರ್ಮಿಸಿದ್ದ ರಮೇಶ್ ರೆಡ್ಡಿ, ಇದೀಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದಲ್ಲಿ, ಶಿವರಾಜ್ ಕುಮಾರ್ ಅಭಿನಯದಲ್ಲಿ ಅವರು '45' ಎಂಬ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಈಗ ಉಪೇಂದ್ರ ಸೇರ್ಪಡೆಯಾಗಿದ್ದು, ಅವರು ಕೂಡ ಇನ್ನೊಬ್ಬ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಜೊತೆಯಾಗಿ ಕೆಲಸ ಮಾಡುತ್ತಿರುವುದು ಇದು 4ನೇ ಬಾರಿ. ಈ ಹಿಂದೆ ಉಪೇಂದ್ರ 'ಓಂ' ಚಿತ್ರ ನಿರ್ದೇಶಿಸಿದ್ದರು. ಆ ನಂತರ ಇಬ್ಬರೂ 'ಪ್ರೀತ್ಸೇ' ಮತ್ತು 'ಲವ-ಕುಶ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ದೊಡ್ಡ ಗ್ಯಾಪ್ನ ನಂತರ ಅವರಿಬ್ಬರೂ '45' ಚಿತ್ರದಲ್ಲಿ ಮತ್ತೆ ಒಟ್ಟಾಗಿ ನಟಿಸಲಿದ್ದಾರೆ.