ಕರ್ನಾಟಕ

karnataka

ETV Bharat / entertainment

ರಜನಿಕಾಂತ್​ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ ಶಿವರಾಜ್​ಕುಮಾರ್​ - shivarajkumar in Tamil film

ರಜನಿಕಾಂತ್ ಹೊಸ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ನಟಿಸಲಿದ್ದಾರೆ ಎಂಬ ಸಂಗತಿಯನ್ನು ಶಿವಣ್ಣನ ಆಪ್ತವಲಯ ತಿಳಿಸಿದೆ.

shivarajkumar and rajanikant will act together for Tamil movie
ಶಿವ ರಾಜ್​ಕುಮಾರ್​ - ರಜನಿಕಾಂತ್

By

Published : Jun 9, 2022, 4:51 PM IST

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಪರಭಾಷೆಯ ಸ್ಟಾರ್ ನಟರು ಕನ್ನಡ ಸಿನಿಮಾದಲ್ಲಿ ನಟಿಸೋದು ಮತ್ತು ಕನ್ನಡ ಸ್ಟಾರ್ ಹೀರೋಗಳು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಪದ್ಧತಿ ಶುರುವಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟಾಲಿವುಡ್ ಬಳಿಕ ಈಗ ಕಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ತಮಿಳು ಸೂಪರ್ ಸ್ಟಾರ್ ನಟರ ಸಿನಿಮಾದಲ್ಲಿ ಸೆಂಚುರಿಸ್ಟಾರ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಗಾಂಧಿನಗರದಲ್ಲಿ ಕೇಳಿ ಬಂದಿದ್ದು, ಈ ಮಾತೀಗ ನಿಜವಾಗಿದೆ.

ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರು ರಜನಿಕಾಂತ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಹೊಣೆ ಹೊತ್ತಿದೆ. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಅಭಿನಯಿಸಲು ಶಿವರಾಜ್ ಕುಮಾರ್ ಅವರನ್ನು ಅಪ್ರೋಚ್ ಮಾಡಲಾಗಿತ್ತು. ಈ ಸಂಬಂಧ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಶಿವರಾಜ್ ಕುಮಾರ್ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಕಥೆ ಹೇಳಿದ್ದು, ಶಿವರಾಜ್ ಕುಮಾರ್ ಕೂಡ ತಲೈವಾ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ ಎಂದು ಶಿವರಾಜ್ ಕುಮಾರ್ ಆಪ್ತವಲಯ ತಿಳಿಸಿದೆ.

ಈ ವಿಚಾರ ಹೊರಬರುತ್ತಲೇ ಶಿವರಾಜ್ ಕುಮಾರ್ ಪಾತ್ರ ಹೇಗಿರಲಿದೆ ಎನ್ನುವ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಶಿವರಾಜ್ ಕುಮಾರ್ ರಜನಿಕಾಂತ್ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಚಿತ್ರತಂಡ ಖಚಿತಪಡಿಸಬೇಕಷ್ಟೇ.

ಇದನ್ನೂ ಓದಿ:ನಯನತಾರಾ ಕೈಹಿಡಿದ ವಿಘ್ನೇಶ್​​ ಶಿವನ್; ಏಳು ವರ್ಷದ ಪ್ರೀತಿಗೆ ಮದುವೆಯ ಮುದ್ರೆ

ರಜನಿಕಾಂತ್ ಅಭಿನಯದ ಹೆಸರಿಡದ ಈ ಚಿತ್ರದ ಶೂಟಿಂಗ್ ತಯಾರಿ ಹಾಗು ಪಾತ್ರವರ್ಗ ಕೂಡ ಫೈನಲ್ ಆಗಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ವರ್ಷ ಬಹುತೇಕ ಚಿತ್ರೀಕರಣವನ್ನು ಮುಗಿಸಿ ಮುಂದಿನ ವರ್ಷದ ಆರಂಭದಲ್ಲೇ ಸಿನಿಮಾ ರಿಲೀಸ್ ಮಾಡುವ ಯೋಜನೆ ಚಿತ್ರ ತಂಡಕ್ಕಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details