ಕನ್ನಡ ಚಿತ್ರರಂಗದ ಜೊತೆಗೆ ಟಾಲಿವುಡ್ ಸಿನಿಮಾದಲ್ಲೂ ನಟಿಸಿ ಸೈ ಎನ್ನಿಸಿಕೊಂಡಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು ಬೈರಾಗಿ ಸಿನಿಮಾದ ಬಿಡುಗಡೆಗೆ ಕಾಯ್ತಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ದಕ್ಷಿಣ ಭಾರತದ ವರ್ಸಟೈಲ್ ನಟ ಕಮಲ್ ಹಾಸನ್ ಜೊತೆ ಅಭಿನಯಿಸೋಕೆ ಬಹಳ ಆಸೆಯಂತೆ. "ನಾನು ಮೊದಲು ನಮ್ಮ ಅಪ್ಪನ ಅಭಿಮಾನಿ. ನಮ್ಮ ತಂದೆ ನಂತರ ನಾನು ಇಷ್ಟ ಪಡುವ ಇಬ್ಬರು ಸೂಪರ್ ಸ್ಟಾರ್‌ಗಳೆಂದರೆ, ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹಾಗು ಕಮಲ್ ಹಾಸನ್" ಎಂದು ಹೇಳಿದ್ದಾರೆ. "ನಾನು ಅಮಿತಾಭ್ ಬಚ್ಚನ್ ಸಾರ್ ಜೊತೆ ಜಾಹಿರಾತಿನಲ್ಲಿ ಅಭಿನಯಿಸಿದ್ದೀನಿ. ಆದರೆ ಕಮಲ್ ಹಾಸನ್ ಜೊತೆ ಅಭಿನಯಿಸಬೇಕು ಅನ್ನೋದು ನನ್ನ ಚಿಕ್ಕವಯಸ್ಸಿನ ಕನಸು" ಎಂದರು.