ಕರ್ನಾಟಕ

karnataka

ETV Bharat / entertainment

ರಿಷಬ್​ ಶೆಟ್ಟಿಯ 'ಶಿವಮ್ಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ - Young Jury Award to shivamma

ನಟ ರಿಷಬ್​ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್‌ ಎಫ್​3 ಕಾಂಟಿನೆಂಟ್ಸ್​ನ 44ನೇ ಆವೃತ್ತಿಯಲ್ಲಿ 'ಯಂಗ್‌ ಜ್ಯೂರಿ ಆವಾರ್ಡ್‌' ಅನ್ನು ಪಡೆದುಕೊಂಡಿದೆ.

shivamma movie won international award
ಶಿವಮ್ಮ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

By

Published : Nov 29, 2022, 1:07 PM IST

ಕಾಂತಾರ ಮೂಲಕ ಕಳೆದ ಸುಮಾರು 60 ದಿನಗಳಿಂದ ಸುದ್ದಿಯಲ್ಲಿರುವ ನಟ ರಿಷಬ್​ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ 'ನ್ಯೂ ಕರೆಂಟ್ಸ್' ಪ್ರಶಸ್ತಿ ಪಡೆದು ಖ್ಯಾತಿ ಗಳಿಸಿತ್ತು. ಇದೀಗ ಇದೇ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿಯಾಗಿದೆ.

ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್‌ ಎಫ್​3 ಕಾಂಟಿನೆಂಟ್ಸ್​ನ 44 ನೇ ಆವೃತ್ತಿಯಲ್ಲಿ 'ಯಂಗ್‌ ಜ್ಯೂರಿ ಆವಾರ್ಡ್‌' ಅನ್ನು ಶಿವಮ್ಮ ಚಿತ್ರ ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ನಿರ್ಮಾಪಕ ರಿಷಬ್‌ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ.

ಈ ಸಿನಿಮಾವನ್ನು ಜೈಶಂಕರ್‌ ಆರ್ಯರ್‌ ನಿರ್ದೇಶಿಸಿದ್ದು, ಶರಣಮ್ಮ ಚೆಟ್ಟಿ ಹಾಗೂ ಚೆನ್ನಮ್ಮ ಅಬ್ಬೆಗೆರೆ ಅಭಿನಯಿಸಿದ್ದಾರೆ. ಮಧ್ಯಮ ವಯಸ್ಸಿನ ಬಡ ಹೆಣ್ಣು ಮಗಳೊಬ್ಬಳು ಪಾನೀಯದ ಕಂಪನಿಗೆ ಮಾರಾಟ ಪ್ರತಿನಿಧಿಯಾಗಿ ಹೋದಾಗ ಅನುಭವಿಸುವ ಅನುಭವಗಳ ಕಥೆ ಈ ಸಿನಿಮಾದಲ್ಲಿದೆ.

ಇದನ್ನು ಓದಿ:ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಜನ್ಮದಿನ.. ಮೋಹಕತಾರೆಗೆ ಶುಭಾಶಯಗಳ ಮಹಾಪೂರ

ABOUT THE AUTHOR

...view details