ಕರ್ನಾಟಕ

karnataka

ETV Bharat / entertainment

'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ - shiva rajkumar tweet about Anupam Kher

ಬಾಲಿವುಡ್​ ನಟ ಅನುಪಮ್​ ಖೇರ್​ ಬಗ್ಗೆ ಶಿವಣ್ಣ ಟ್ವೀಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

shiva rajkumar tweet about Anupam Kher
ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

By

Published : Mar 30, 2023, 3:03 PM IST

Updated : Mar 30, 2023, 3:33 PM IST

ವೇದ ಸಕ್ಸಸ್ ಬಳಿಕ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಘೋಸ್ಟ್' ಈ ಸಾಲಿನಲ್ಲಿ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಚಿತ್ರ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಈ ಸಿನಿಮಾ ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ.

ಹಿರಿಯ ನಟರ ದೊಡ್ಡ ತಾರಾಬಳಗ ಇರುವ ಈ ಚಿತ್ರದಲ್ಲಿ ಬಾಲಿವುಡ್​ ನಟ ಅನುಪಮ್​ ಖೇರ್​ ಕೂಡ ಸೇರ್ಪಡೆಯಾಗಿದ್ದಾರೆ. ಘೋಸ್ಟ್ ಚಿತ್ರೀಕರಣಕ್ಕಾಗಿಯೇ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಸದ್ದು ಮಾಡಿದ್ದರು ಇದೀಗ ಶಿವ ರಾಜ್​ಕುಮಾರ್​ ಅವರು ಬಾಲಿವುಡ್ ನಟನ ಬಗ್ಗೆ ಗುಣಗಾನ ಮಾಡಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಇಬ್ಬರೂ ಚಿತ್ರರಂಗದ ದಿಗ್ಗಜರು ನಡೆದು ಬಂದ ವಿಡಿಯೋ ಮತ್ತು ಫೋಟೋ ಹಂಚಿಕೊಂಡಿದ್ದಾರೆ. ಹಿಂದಿ ಮತ್ತು ಕನ್ನಡ ಚಿತ್ರರಂಗದ ಸ್ಟಾರ್ ನಟರು ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಶಿವ ರಾಜ್​ಕುಮಾರ್ ಟ್ವೀಟ್: ''ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು ಅನುಪಮ್​ ಖೇರ್ ಸರ್​. ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು ಘೋಸ್ಟ್ ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ'' ಎಂದು ಶಿವ ರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ.

ಶ್ರೀನಿವಾಸ್​ (ಶ್ರೀನಿ) ಮೊದಲ ಬಾರಿ ನಟ ಶಿವ ರಾಜ್​ಕುಮಾರ್ ಅವರ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅದ್ಧೂರಿ ಮೇಕಿಂಗ್​ ಜೊತೆ ಬಾಲಿವುಡ್​ ನಟರ ಎಂಟ್ರಿಯಾಗಿದೆ. ಸಾಕಷ್ಟು ವಿಚಾರವಾಗಿ ಸ್ಯಾಂಡಲ್​​ವುಡ್​ನಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿದೆ. ಹಿರಿಯ ಕಲಾವಿದರು ನಟಿಸುತ್ತಿದ್ದು, ಅನುಪಮ್ ಖೇರ್ ಹೊಸ ಸೇರ್ಪಡೆ.

ಇದನ್ನೂ ಓದಿ:ಶಿವಣ್ಣನ 'ಘೋಸ್ಟ್'​ ಅಡ್ಡಕ್ಕೆ ಬಾಲಿವುಡ್​ ನಟ ಅನುಪಮ್​ ಖೇರ್​ ಎಂಟ್ರಿ

ಘೋಸ್ಟ್​ ಫಸ್ಟ್​ ಲುಕ್​ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಮೊದಲ ನೋಟದಲ್ಲೇ ಹ್ಯಾಟ್ರಿಕ್​ ಹೀರೋ ಎಕೆ 47 ಗನ್​ ಹಿಡಿದು ಕಾಣಿಸಿಕೊಂಡಿದ್ದರು. ಬಳಿಕ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿತ್ತು. ಇದೀಗ ಘೋಸ್ಟ್​ ಅಡ್ಡಕ್ಕೆ ಬಾಲಿವುಡ್​ ನಟ ಎಂಟ್ರಿಕೊಟ್ಟಿರುವ ಬಗ್ಗೆ ಸ್ವತಃ ಶಿವಣ್ಣ ಅವರೇ ಗುಣಗಾನ ಮಾಡಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಹಿರಿಯ ನಟರು ಯುವಕರನ್ನೂ ನಾಚಿಸುವಂತೆ ಸಖತ್​ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್​ ವಿರುದ್ಧದ FIR ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ಘೋಸ್ಟ್ ಸಿನಿಮಾದಲ್ಲಿ ಚಿತ್ರದಲ್ಲಿ ಶಿವಣ್ಣ, ಅನುಪಮ್​ ಖೇರ್ ಅಲ್ಲದೇ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಹಲವು ಕಲಾವಿದರಿದ್ದಾರೆ. ನಿರ್ದೇಶಕ ಶ್ರೀನಿವಾಸ್​ ಅವರೇ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರಿಂದ ಸಿದ್ಧವಾಗಿದೆ. ಇನ್ನು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಘೋಸ್ಟ್ ನಿರ್ಮಾಣವಾಗುತ್ತಿದ್ದು, ಸಂದೇಶ್ ನಾಗರಾಜ್ ಅರ್ಪಿಸಲಿದ್ದಾರೆ.

Last Updated : Mar 30, 2023, 3:33 PM IST

ABOUT THE AUTHOR

...view details