ವೇದ, ಘೋಸ್ಟ್, ಕರಟಕ ದಮನಕ ಹೀಗೆ ನಾಲ್ಕೈದು ಸಿನಿಮಾಗಳಲ್ಲಿ ನಟ ಶಿವ ರಾಜ್ಕುಮಾರ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪೋಸ್ಟರ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತದಲ್ಲಿ ಕುತೂಹಲ ಹುಟ್ಟಿಸಿರೋ ಘೋಸ್ಟ್ ಚಿತ್ರ ಸೌತ್ನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಿದೆ. ಘೋಸ್ಟ್ ಫಸ್ಟ್ ಲುಕ್ನಲ್ಲಿ ಹ್ಯಾಟ್ರಿಕ್ ಹೀರೋ ಎಕೆ 47 ಗನ್ ಹಿಡಿದು ಕಾಣಿಸಿಕೊಂಡಿದ್ದರು. ಇದೀಗ ಘೋಸ್ಟ್ ಚಿತ್ರದ ಕಲರ್ ಫುಲ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.
ಸದ್ಯ ಅನಾವರಣಗೊಂಡಿರುವ ಘೋಸ್ಟ್ ಮೇಕಿಂಗ್ ವಿಡಿಯೋದಲ್ಲಿ, ಜೈಲಿನ ಅದ್ಧೂರಿ ಸೆಟ್ ಹಾಕಿ ಶಿವರಾಜ್ ಕುಮಾರ್ ಘೋಸ್ಟ್ ಅವತಾರವನ್ನು ಚಿತ್ರೀಕರಣ ಮಾಡಲಾಗಿದೆ. ಕೇವಲ 15 ಸೆಕೆಂಡ್ ಇರುವ ಈ ಮೇಕಿಂಗ್ ವಿಡಿಯೋ ಇಡೀ ಸೌತ್ನಲ್ಲಿ ಹವಾ ಕ್ರಿಯೇಟ್ ಮಾಡುತ್ತಿದೆ. ಈ ಮೇಕಿಂಗ್ ನೋಡಿದ್ರೆ ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ ಎನಿಸುತ್ತಿದೆ. ಇನ್ನು ತೆಲುಗು ನಟ ಜಯರಾಮ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ.