ಕರ್ನಾಟಕ

karnataka

ETV Bharat / entertainment

ಶಿವ 143 ಸಿನಿಮಾ ಬಿಡುಗಡೆ.. ಧೀರನ್ ರಾಮ್ ಕುಮಾರ್ ಬಗ್ಗೆ ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ? - Shiva rajKumar video

ಶಿವ 143 ಸಿನಿಮಾ ಇಂದು ತೆರೆ ಮೇಲೆ ಅಬ್ಬರಿಸಲಿದೆ. ಧೀರನ್ ರಾಮ್‌ ಕುಮಾರ್ ಸಿನಿಮಾಕ್ಕೆ ನಟ ಶಿವರಾಜ್ ಕುಮಾರ್ ಸಾಥ್​ ನೀಡಿದ್ದು, ಅಳಿಯನ ಕುರಿತು ಶಿವಣ್ಣ ಏನಂದ್ರು ಇಲ್ಲಿದೆ ನೋಡಿ.

shiva rajkumar
ಶಿವರಾಜ್ ಕುಮಾರ್

By

Published : Aug 26, 2022, 7:12 AM IST

ಡಾ. ರಾಜ್ ಕುಮಾರ್ ಕುಟುಂಬದ ಪೂರ್ಣಿಮಾ ಹಾಗೂ ರಾಮ್ ಕುಮಾರ್ ದಂಪತಿ ಪುತ್ರ ‌ಧೀರನ್ ರಾಮ್​ಕುಮಾರ್ ಅವರು ಶಿವ 143 ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಗೊತ್ತಿರುವ ವಿಷಯ. ಸಿನಿಮಾ ಬಿಡುಗಡೆಗೂ ಮುಂಚೆ ಧೀರನ್ ಹಲವು ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳ ಪ್ರೀತಿ ವಿಶ್ವಾಸ ಗಳಿಸಿದ್ದಾರೆ‌.

ಶಿವರಾಜ್ ಕುಮಾರ್ ವಿಡಿಯೋ

ಹಾಡುಗಳು ಮತ್ತು ಟ್ರೈಲರ್​ನಿಂದಲೇ ಸದ್ದು ಮಾಡುತ್ತಿರೋ ಶಿವ 143 ಸಿನಿಮಾ‌ ಇಂದು ತೆರೆ ಕಾಣಲಿದೆ. ಅಷ್ಟೇ ಅಲ್ಲದೆ, ಧೀರನ್ ರಾಮ್‌ ಕುಮಾರ್ ಸಿನಿಮಾಕ್ಕೆ ನಟ ಶಿವರಾಜ್ ಕುಮಾರ್ ಸಹ ಸಾಥ್​ ನೀಡಿದ್ದಾರೆ.

ಇದನ್ನೂ ಓದಿ:ಧೀರೆನ್ ರಾಮ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಶಿವ 143' ಆ.26 ರಂದು ತೆರೆಗೆ

ಶಿವ 143 ಚಿತ್ರದ ಕುರಿತು ವಿಡಿಯೋ ಮಾಡಿ ಅಭಿಪ್ರಾಯ ಹಂಚಿಕೊಂಡಿರುವ ಶಿವಣ್ಣ, 'ಧೀರನ್ ರಾಮ್ ಕುಮಾರ್ ಅಭಿನಯದ ಶಿವ 123 ಸಿನಿಮಾ ಬಿಡುಗಡೆ ಆಗುತ್ತಿದೆ. ಧೀರನ್ ಚಿತ್ರರಂಗಕ್ಕೆ ಒಬ್ಬ ಆಕ್ಷನ್ ಹೀರೋ ಆಗ್ತಾನೆ' ಅಂತಾ ಭವಿಷ್ಯ ನುಡಿದಿದ್ದಾರೆ‌.

ಇದನ್ನೂ ಓದಿ:ಶಿವ 143 ಸಿನಿಮಾ ಪ್ರಚಾರ..ಮಾವ ಪುನೀತ್ ಮೆಚ್ಚಿನ ಅಂಜನಾದ್ರಿ ದೇಗುಲಕ್ಕೆ ಅಳಿಯ ಭೇಟಿ

ಧೀರನ್ ರಾಮ್ ಕುಮಾರ್​ಗೆ ಜೋಡಿಯಾಗಿ ಮಾನ್ವಿತ ಕಾಮತ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚರಣ್ ರಾಜ್, ಸಾಧುಕೋಕಿಲ ಹಾಗೂ ಚಿಕ್ಕಣ್ಣ ಸೇರಿದಂತೆ ದೊಡ್ಡ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. 'ದಿಲ್ ವಾಲಾ' ಹಾಗೂ 'ರ‍್ಯಾಂಬೊ 2' ಸಿನಿಮಾಗಳನ್ನ ನಿರ್ದೇಶನ ಮಾಡಿರೋ ನಿರ್ದೇಶಕ ಅನಿಲ್ ಕುಮಾರ್ ಶಿವ 143 ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಶಿವ ಛಾಯಾಗ್ರಹಣವಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಜಯಣ್ಣ, ಭೋಗೇಂದ್ರ ಹಾಗೂ ಡಾ. ಸೂರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಚೊಚ್ಚಲ ಸಿನಿಮಾದಲ್ಲೇ ಮಾನ್ವಿತಾ ಜತೆ ಲಿಪ್‌ಲಾಕ್ ಮಾಡಿದ ಧೀರೇನ್ ರಾಮ್‌ಕುಮಾರ್

ABOUT THE AUTHOR

...view details