ಕರ್ನಾಟಕ

karnataka

ETV Bharat / entertainment

ಬಹುನಿರೀಕ್ಷಿತ 'ಕಣ್ಣಪ್ಪ' ಸಿನಿಮಾದಲ್ಲಿ ಶಿವ ರಾಜ್​ಕುಮಾರ್: ಒಂದೇ ಚಿತ್ರದಲ್ಲಿ ಘಟಾನುಘಟಿಗಳು - Kannappa Movie

ಬಹುನಿರೀಕ್ಷಿತ 'ಕಣ್ಣಪ್ಪ' ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್​ ನಟಿಸಲಿದ್ದಾರೆ.

Shiva Rajkumar in Kannappa Movie
'ಕಣ್ಣಪ್ಪ' ಸಿನಿಮಾದಲ್ಲಿ ಶಿವ ರಾಜ್​ಕುಮಾರ್

By ETV Bharat Karnataka Team

Published : Oct 14, 2023, 1:54 PM IST

ತೆಲುಗು ಚಿತ್ರರಂಗದ ವಿಷ್ಣು ಮಂಚು ಅಭಿನಯದ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ 'ಕಣ್ಣಪ್ಪ ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍'. ಚಿತ್ರದ ಕುರಿತು ಈಗಾಗಲೇ ಪ್ರೇಕ್ಷಕ ವಲಯದಲ್ಲಿ ಸಾಕಷ್ಟು ಕುತೂಹಲದ ಜೊತೆಗೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಒಂದು ಪ್ರಮುಖ ಕಾರಣ ಚಿತ್ರದ ತಾರಾಗಣ.

ಬಿಗ್​ ಸ್ಟಾರ್​ಕಾಸ್ಟ್ - ಶಿವಣ್ಣ ಎಂಟ್ರಿ:ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‍ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್‍ ಲಾಲ್‍ ಈ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಇದೀಗ ಕನ್ನಡ ಚಿತ್ರರಂಗದ ‌ಕರುನಾಡ ಚಕ್ರವರ್ತಿ ಶಿವ ರಾಜ್​​​ಕುಮಾರ್ ಕೂಡ ಈ ಚಿತ್ರದ ಒಂದು ಭಾಗವಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶಿವ ರಾಜ್‍ಕುಮಾರ್ ಅವರಿಗೂ 'ಕಣ್ಣಪ್ಪ'ನಿಗೂ ಬಹಳ ಹಳೆಯ ನಂಟು. ಹಲವು ವರ್ಷಗಳ ಹಿಂದೆ ಶಿವ ರಾಜ್‍ಕುಮಾರ್ ಅವರು, ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ಮೊದಲು ದಿಣ್ಣನಾಗಿ, ಆ ನಂತರ ಶಿವನ ಅನುಗ್ರಹಕ್ಕೆ ಪಾತ್ರವಾಗುವ ಕಣ್ಣಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಪಾತ್ರವನ್ನು ತೆಲುಗಿನಲ್ಲಿ ವಿಷ್ಣು ಮಂಚು ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ಶಿವಣ್ಣನ ಪಾತ್ರವೇನು?ಕಣ್ಣಪ್ಪ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ಅಭಿನಯಿಸುತ್ತಿದ್ದಾರೆ‌. ಹಾಗಾದ್ರೆ ಚಿತ್ರದಲ್ಲಿ ಶಿವಣ್ಣನ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಸದ್ಯಕ್ಕೆ ರಹಸ್ಯವಾಗಿಟ್ಟಿದೆ. ಆದರೆ, ಶಿವ ರಾಜ್​ಕುಮಾರ್ ಅವರ ಪಾತ್ರ ಇಡೀ ಚಿತ್ರದ ಹೈಲೈಟ್‍ ಆಗಲಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.

ಈ ಹಿಂದೆ ಸ್ಟಾರ್ ಪ್ಲಸ್‍ ವಾಹಿನಿಗಾಗಿ ಮಹಾಭಾರತ ಸರಣಿಯನ್ನು ನಿರ್ದೇಶಿಸಿದ್ದ ಮುಕೇಶ್‍ ಕುಮಾರ್ ‍ಸಿಂಗ್‍, ಈ ಪೌರಾಣಿಕ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟ ಮತ್ತು ನಿರ್ಮಾಪಕ ಡಾ. ಮೋಹನ್‍ ಬಾಬು ನಿರ್ಮಿಸುತ್ತಿರುವ ಶಿವನ ಅಚಲ ಭಕ್ತನಾದ ಕಣ್ಣಪ್ಪನ ಕಾಲಾತೀತ ಕಥೆಯ ಚಿತ್ರೀಕರಣ ಈಗಾಗಲೇ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ.

ಇದನ್ನೂ ಓದಿ:ಟ್ರೆಂಡಿಂಗ್‍ ಆ್ಯಕ್ಟರ್, ಐಕಾನಿಕ್ ಡೈರೆಕ್ಟರ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ರಕ್ಷಿತ್ - ರಿಷಬ್

ಸದ್ಯದ ಮಾಹಿತಿ ಪ್ರಕಾರ, ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಲಿದ್ದಾರೆ. ಭಗವಾನ್​ ಶಿವನ ಪಾತ್ರದಲ್ಲಿ ನಟ ಪ್ರಭಾಸ್​​ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲ ವರದಿಗಳು ಸೂಚಿಸಿದ್ದವು. ಇತ್ತೀಚೆಗೆ ನಟ - ನಿರ್ಮಾಪಕ ವಿಷ್ಣು ಕೂಡ ಸೀಕ್ರೆಟ್ ಪೋಸ್ಟ್ ಮೂಲಕ ಖಚಿತಪಡಿಸಿದ್ದರು. ಅದಾದ ಬಳಿಕ ಪ್ರಭಾಸ್ ಜೊತೆ ನಯನತಾರಾ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ನಯನತಾರಾ ಅಲ್ಲದೇ ಕೃತಿ ಸನೋನ್​​ ಸಹೋದರಿ ನೂಪುರ್​ ಸನೋನ್ ಹೆಸರು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ:''ವಿಕಲತೆ ಮೆಟ್ಟಿ ನಿಂತು ಅದ್ಭುತ ಸಾಧನೆ ಮಾಡಿರುವ ನಿಮಗೆ ನಾವು ಚಿರಋಣಿ'': ಅಶ್ವಿನಿ ಪುನೀತ್ ರಾಜಕುಮಾರ್

ABOUT THE AUTHOR

...view details