ಕನ್ನಡ ಚಿತ್ರರಂಗದಲ್ಲಿ ಒಂದೇ ಸಿನಿಮಾದ ಟೈಟಲ್ಗಳು ಮತ್ತೊಂದು ಚಿತ್ರಕ್ಕೆ ಇಟ್ಕೊಂಡು ಪೇಚಿಗೆ ಸಿಕ್ಕಿಕೊಳ್ಳುವುದು ಕಾಮನ್. ಇತ್ತ ವಾಣಿಜ್ಯ ಮಂಡಳಿ ಕೂಡ ಒಂದೇ ಟೈಟಲ್ ಅನ್ನು ಎರಡೆರಡು ತಂಡಕ್ಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಉದಾಹರಣೆಗಳೂ ಇವೆ. ಇದೀಗ ಲೂಸ್ ಮಾದ ಯೋಗಿ ಅಭಿನಯದ ಚಿತ್ರಕ್ಕೆ ಸಮಸ್ಯೆ ಎದುರಾಗಿದೆ.
ಹೌದು... ಲೂಸ್ ಮಾದ ಯೋಗಿ ನಟಿಸುತ್ತಿರುವ 50 ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಡಾಲಿ ಧನಂಜಯ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು. ಈ ಚಿತ್ರಕ್ಕೆ 'ರೋಸಿ' ಅಂತ ಟೈಟಲ್ ಇಡಲಾಗಿದೆ. ಆದರೆ, ಇದೀಗ ಶೀರ್ಷಿಕೆ ವಿವಾದಕ್ಕೆ ಸಿಲುಕಿದೆ. ನಾತಿಚರಾಮಿ, ಪಡ್ಡೆಹುಲಿ, 100 ಹಾಗೂ ಗಾಳಿಪಟ 2 ಚಿತ್ರಗಳ ನಿರ್ಮಾಪಕ ಎಂ ರಮೇಶ್ ಅವರು ಫಿಲ್ಮ್ ಚೇಂಬರ್ ನಲ್ಲಿ 'ರೋಸಿ 45' ಎಂಬ ಹೆಸರಿನ ಮೇಲೆ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು.
ಆದರೆ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮೊದಲ ಬಾರಿಗೆ ಅರ್ಜುನ್ ಜನ್ಯ ಅವರು ನಿರ್ದೇಶಿಸುತ್ತಿರುವ ಚಿತ್ರಕ್ಕೆ 'ರೋಸಿ 45' ಅಂತಲೇ ನಾಮಕರಣ ಮಾಡಲಾಗಿತ್ತು. ಈ ಚಿತ್ರವನ್ನು ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ಈಗ ಲೂಸ್ ಮಾದ ನಟಿಸುತ್ತಿರುವ 50 ನೇ ಸಿನಿಮಾದ ಟೈಟಲ್ ರೋಸಿ 45 ಅಂತಲೇ ಆಗಿದೆ.
ಹೀಗಾಗಿ ರಮೇಶ್ ರೆಡ್ಡಿ ಅವರು ಈ ವಿಷಯವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದರು. ಆದರೆ, ಈ ಸಮಸ್ಯೆಯನ್ನು ನಟ ಶಿವ ರಾಜ್ಕುಮಾರ್ ಬಗೆ ಹರಿಸುವ ಮೂಲಕ ಲೂಸ್ ಮಾದ ಯೋಗಿಗೆ ಸಪೋರ್ಟ್ ಮಾಡಿದ್ದಾರೆ. ಹೌದು, ಈ ಸಿನಿಮಾ ಟೈಟಲ್ ವಿಚಾರವಾಗಿ ನಟ ಲೂಸ್ ಮಾದ ಯೋಗಿ ಹಾಗೂ ನಿರ್ದೇಶಕ ಶೂನ್ಯ, ಶಿವರಾಜ್‌ಕುಮಾರ್ ಅವರ ಬಳಿ ಹೋಗಿ ಈ ಸಿನಿಮಾದ ಟೈಟಲ್ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಅದಕ್ಕೆ ಈ ಟೈಟಲ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೇಳಿದ್ದಾರೆ.