ಕರ್ನಾಟಕ

karnataka

ETV Bharat / entertainment

ಹುಬ್ಬಳ್ಳಿಯಲ್ಲಿ ನಾಳೆ ವೇದ ಟ್ರೈಲರ್ ಬಿಡುಗಡೆ.. ಅಭಿನಯ ಚಕ್ರವರ್ತಿಗೆ ಆಹ್ವಾನ - Veda latest news

ಕಿಚ್ಚ ಸುದೀಪ್ ಅವರನ್ನು ವೇದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಿವ ರಾಜ್​ಕುಮಾರ್ ದಂಪತಿ ಆಹ್ವಾನಿಸಿದ್ದಾರೆ.

Shiv rajkumar invite Sudeep to Veda trailer release event
ವೇದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸುದೀಪ್​ಗೆ ಆಹ್ವಾನ

By

Published : Dec 13, 2022, 2:10 PM IST

ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಅಭಿನಯದ ಈ ವರ್ಷದ ಹೈ ವೋಲ್ಟೇಜ್ ಚಿತ್ರ ವೇದ. ಭಜರಂಗಿ 2 ಸಿನಿಮಾ ನಂತರ ಪ್ರೇಕ್ಷಕರ ಮುಂದೆ ಬರುತ್ತಿರುವ, ವಿಭಿನ್ನ ಕಥೆಯುಳ್ಳ ವೇದ ಸಿನಿಮಾದ ಕ್ರೇಜ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜೋರಾಗಿದೆ. ಅಭಿನಯಕ್ಕೆ ಹೆಸರುವಾಸಿಯಾದ ಶಿವಣ್ಣನ ಸಿನಿಮಾ ಮೇಲೆ ಪ್ರೇಕ್ಷಕರ ನಿರೀಕ್ಷೆ ಕೊಂಚ ಹೆಚ್ಚೇ. ಅದರಂತೆ ಈ ವೇದ ಸಿನಿಮಾ ಮೇಲೂ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಾಳೆ ಬಿಡುಗಡೆ ಆಗಲಿದೆ ವೇದ ಟ್ರೈಲರ್

ಅಭಿನಯ ಚಕ್ರವರ್ತಿಗೆ ಆಹ್ವಾನ:ಈಗಾಗಲೇ ಗಿಲ್ಲಕ್ಕೋ ಶಿವ ಗಿಲ್ಲಕ್ಕೊ ಹಾಡು ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕುತೂಹಲ ಹೆಚ್ಚಿಸಿದೆ‌. ಈ ಮಧ್ಯೆ ಗೆಳೆಯ, ಅಭಿನಯ ಚಕ್ರವರ್ತಿಯನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವೇದ ಟ್ರೈಲರ್ ಬಿಡುಗಡೆ: ಹೌದು, ಪೋಸ್ಟರ್ ಹಾಗೂ ಹಾಡುಗಳಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಲ್ಲಿ ಟಾಕ್ ಆಗುತ್ತಿರುವ ವೇದಾ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರನ್ನು ಶಿವ ರಾಜ್​ಕುಮಾರ್ ಹಾಗು ಪತ್ನಿ ಗೀತಾ ಆಹ್ವಾನಿಸಿದ್ದಾರೆ‌ ಎನ್ನಲಾಗಿದೆ. ಜೆ.ಪಿ ನಗರದ ಕಿಚ್ಚನ ನಿವಾಸಕ್ಕೆ ಭೇಟಿ ನೀಡಿದ ದೊಡ್ಮನೆ ದಂಪತಿ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರೀತಿಯ ಆಹ್ವಾನ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಾಳೆ ಅದ್ಧೂರಿಯಾಗಿ ವೇದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಹುಬ್ಬಳ್ಳಿಯಲ್ಲಿ ವೇದ ಟ್ರೈಲರ್ ಬಿಡುಗಡೆ

ಹುಬ್ಬಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ:ಈಗಾಗಲೇ ಮಂಡ್ಯ, ಚಾಮರಾಜನಗರ, ರಾಯಚೂರು, ಮಂಗಳೂರಿನಲ್ಲಿ ವೇದ ಸಿನಿಮಾದ ಇವೆಂಟ್​ಗಳನ್ನು ಮಾಡಲಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಕರುನಾಡ ಚಕ್ರವರ್ತಿ ಹಾಗೂ ಅಭಿನಯ ಚಕ್ರವರ್ತಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಗ್ಯಾಂಡ್​​ ವೇದಿಯಲ್ಲಿ ವೇದ ಟ್ರೈಲರ್​ ಲಾಂಚ್ ಕಾರ್ಯಕ್ರಮ ನಡೆಯಲಿದೆ.

ಅಂದಹಾಗೇ, 'ವೇದ' ಶಿವ ರಾಜ್​ಕುಮಾರ್ ಹಾಗು ನಿರ್ದೇಶಕ ಹರ್ಷ ಜೋಡಿಯ 4ನೇ ಚಿತ್ರ ಅನ್ನೋದು ವಿಶೇಷ. ಈ ಚಿತ್ರದಲ್ಲಿ ಶಿವ ರಾಜ್​ಕುಮಾರ್ ಎರಡು ಶೇಡ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯನ್ನೊಳಗೊಂಡಿದೆ. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಹಾಗು ಅನುಪಮ, ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಶಿವಣ್ಣ ಭೇಟಿ.. ಪಣಂಬೂರು ಕಡಲ ಕಿನಾರೆಯಲ್ಲಿಂದು 'ವೇದ' ಪ್ರಮೋಶನ್

ವೇದ ಚಿತ್ರವನ್ನು ಝೀ ಸ್ಟುಡಿಯೋಸ್​ ಜೊತೆಗೂಡಿ ಗೀತ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಈ ಚಿತ್ರದ ಮೂಲಕ ಗೀತಾ ಶಿವ ರಾಜ್​​ಕುಮಾರ್ ನಿರ್ಮಾಪಕಿಯಾಗಲಿದ್ದಾರೆ. ಈಗಾಗಲೇ ಬಿಡುಗಡೆ ಆಗಲಿರುವ ವೇದ ಪೋಸ್ಟರ್​ನಲ್ಲಿ ಡೋಂಟ್ ಫಿಯರ್, ಡೋಂಟ್ ಫರ್ಗಿವ್ ಎಂಬ ಟ್ಯಾಗ್ ಲೈನ್ ಇದೆ. ಸದ್ಯ ರಿಲೀಸ್​ ಆಗಿರುವ ಹಾಡು ಅಭಿಮಾನಿಗಳಲ್ಲಿ ಬೆಟ್ಟದಷ್ಟು‌ ನಿರೀಕ್ಷೆ ಮೂಡಿಸಿದೆ. ವೇದ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೂ ಮುನ್ನ ಅಂದರೆ ಡಿಸೆಂಬರ್ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಹೆಸರಿಡದ ಚಿತ್ರಕ್ಕೆ ಗ್ರೀನ್​​ ಸಿಗ್ನಲ್​ ಕೊಟ್ಟ ಕ್ರೇಜಿಸ್ಟಾರ್ ಪುತ್ರ ವಿಕ್ರಮ್ ರವಿಚಂದ್ರನ್

ABOUT THE AUTHOR

...view details