ಕರ್ನಾಟಕ

karnataka

ETV Bharat / entertainment

'ಕಾಪ್ ಯೂನಿವರ್ಸ್' ವೆಬ್​​ ಸಿರೀಸ್​​ನಲ್ಲಿ ಬಾಲಿವುಡ್ ತಾರೆ  ಶಿಲ್ಪಾ ಶೆಟ್ಟಿ - ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ತಮ್ಮ ಅಭಿಮಾನಿಗಳನ್ನು ಸೆಳೆಯಲು ಹೊಸ ಅವತಾರದಲ್ಲಿ ಮರಳಿದ್ದಾರೆ. ನಟಿ ತನ್ನ ಮುಂಬರುವ ಆಕ್ಷನ್ ವೆಬ್​​ ಸರಣಿಯ ಮೊದಲ ನೋಟವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

Shilpa Shetty Kundra joins Rohit Shetty's cop universe
'ಕಾಪ್ ಯೂನಿವರ್ಸ್' ವೆಬ್​​ ಸಿರೀಸ್​​ನಲ್ಲಿ ಬಾಲಿವುಡ್ ತಾರೆ  ಶಿಲ್ಪಾ ಶೆಟ್ಟಿ

By

Published : Apr 26, 2022, 7:53 AM IST

ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ರೋಹಿತ್ ಶೆಟ್ಟಿ ಅವರ ಚೊಚ್ಚಲ ವೆಬ್​​ ಸರಣಿ 'ಕಾಪ್ ಯೂನಿವರ್ಸ್'ನಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ, ಆ್ಯಕ್ಷನ್ ಸರಣಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರು ದೆಹಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

'ಕಾಪ್ ಯೂನಿವರ್ಸ್' ವೆಬ್​​ ಸಿರೀಸ್​​ನಲ್ಲಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ

ಭಾರತೀಯ ಪೊಲೀಸ್ ಪಡೆ, ದೇಶಾದ್ಯಂತದ ಪೊಲೀಸ್ ಅಧಿಕಾರಿಗಳ ನಿಸ್ವಾರ್ಥ ಸೇವೆ, ಬದ್ಧತೆ ಮತ್ತು ದೇಶಭಕ್ತಿ, ಪ್ರತಿಯೊಬ್ಬರನ್ನು ಸುರಕ್ಷಿತವಾಗಿರಿಸಲು ಅವರು ನಿರ್ವಹಿಸುವ ಕರ್ತವ್ಯವನ್ನು ಈ ವೆಬ್​ ಸರಣಿ ಒಳಗೊಂಡಿದೆ. ರೋಹಿತ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬಂದೂಕು ಹಿಡಿದಿರುವ ಚಿತ್ರದ ಜೊತೆಗೆ ಶಿಲ್ಪಾ ಶೆಟ್ಟಿ ಅವರಿಗೆ ತಮ್ಮ ತಂಡಕ್ಕೆ ಸ್ವಾಗತ ಕೋರಿದ್ದಾರೆ.

ಶಿಲ್ಪಾ ಶೆಟ್ಟಿ ಕಾಪ್ ಯೂನಿವರ್ಸ್​ನಲ್ಲಿ ತಮ್ಮ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ವರ್ಷ ಒಟಿಟಿ ಪ್ಲಾಟ್‌ಫಾರ್ಮ್ ಈ ವೆಬ್​​ ಸರಣಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಮತ್ತೊಂದು ಹೊಸ ಚಿತ್ರದಲ್ಲಿ ಜೊತೆಯಾಗುತ್ತಿರುವ ದೀಪ್​​​ವೀರ್​​​​

ABOUT THE AUTHOR

...view details