ಇಡೀ ಭಾರತೀಯ ಚಿತ್ರರಂಗದಲ್ಲಿ ಫಿಟ್ನೆಸ್, ಸೌಂದರ್ಯ ಮತ್ತು ಸ್ಟೈಲಿಶ್ ಲುಕ್ಗೆ ಹೆಸರುವಾಸಿಯಾದ ನಟಿ ಶಿಲ್ಪಾ ಶೆಟ್ಟಿ. ವಯಸ್ಸು 47 ದಾಟಿದ್ದರೂ ಅವರ ಚೆಲುವು ಮಾತ್ರ ಇನ್ನೂ ಹಾಗೆಯೇ ಇದೆ. ಫಿಟ್ನೆಸ್ ಕಾಪಾಡಲೆಂದೇ ಈ ಸುಂದ್ರಿ ದಿನನಿತ್ಯ ವರ್ಕೌಟ್ ಮತ್ತು ವ್ಯಾಯಾಮ ಮಾಡುತ್ತಾರೆ. ಇದೀಗ ಶಿಲ್ಪಾ ಶೆಟ್ಟಿ ಫಿಟ್ನೆಸ್ ಸೆಷನ್‌ಗಳ ಗ್ಲಿಂಪ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಆರೋಗ್ಯಕರವಾಗಿ ಬದುಕಲು ಸ್ಫೂರ್ತಿ ನೀಡಿದ್ದಾರೆ.
ತಮ್ಮ ವರ್ಕೌಟ್ ವಿಡಿಯೋ ಶೇರ್ ಮಾಡಲು ನಟಿ ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡರು. "ನಾನು ಯಶಸ್ವಿಯಾಗಲಿಲ್ಲ, ಕೆಲವೊಮ್ಮೆ ಆಗದಿದ್ದರೂ ಪರವಾಗಿಲ್ಲ. ನಿಮ್ಮ ಅತ್ಯುತ್ತಮ ಶಾಟ್ ಅನ್ನು ನೀಡುವವರೆಗೆ ಪ್ರಯತ್ನಿಸಿ. ಇಲ್ಲಿ ಪ್ಲಸ್ ಪಾಯಿಂಟ್‌ಗಳು; ನಾನು ಇನ್ನೂ ಕೆಲವು ಗಂಭೀರ ಕ್ಯಾಲೊರಿಗಳನ್ನು ಬರ್ನ್ ಮಾಡಿದ್ದೇನೆ. ಮೆದುಳು ಮತ್ತು ದೇಹ ಎರಡಕ್ಕೂ ಆಯಾಸವಾಗಿದೆ. ಆದರೆ, ನಾನು ಬಹಳಷ್ಟು ವಿನೋದವನ್ನು ಹೊಂದಿದ್ದೆ." ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ.
ಮುಂದುವರೆದು ಬರೆದಿರುವ ಅವರು, "ನೀವು ಯಶಸ್ವಿಯಾಗಲು ಬಯಸಿದರೆ ಪರಿಪೂರ್ಣ ಸಮಯವು ಅತ್ಯಗತ್ಯವಾಗಿರುತ್ತದೆ. ಆ ಪರಿಪೂರ್ಣ ಸಮಯದಲ್ಲಿ ನಮ್ಮ ಎಲ್ಲಾ ಸ್ನಾಯುಗಳ ಸಿಂಕ್ರೊನೈಸೇಶನ್ ಪ್ರಮುಖವಾಗಿದೆ. ಅಲ್ಲದೇ, ಇದು ಕೈ-ಕಣ್ಣಿನ ಸಮನ್ವಯ ಮತ್ತು ಪ್ರತಿವರ್ತನೆಗಳಿಗೆ ಉತ್ತಮವಾಗಿದೆ. ಇದು ಬೆನ್ನಿನ ಸ್ನಾಯುಗಳಿಗೆ ಉತ್ತಮವಾಗಿದೆ. ನೀವು ಇದನ್ನು ಮಾಡುವಲ್ಲಿ ಯಶಸ್ವಿಯಾದರೆ ನನ್ನನ್ನು ಟ್ಯಾಗ್ ಮಾಡಿ. ಅದನ್ನು ನಾನು ಸ್ಟೋರಿ ಹಾಕಿಕೊಳ್ಳುವೆ" ಎಂದಿದ್ದಾರೆ.
ಇದನ್ನೂ ಓದಿ:ಅಂಬುಜ ಮೂವಿ: ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದ 'ಅಂಬುಜ'.. ಜುಲೈ 21ಕ್ಕೆ ರಿಲೀಸ್