ಶೆರ್ಲಿನ್ ಚೋಪ್ರಾ...ಬಾಲಿವುಡ್ ಬೋಲ್ಡ್ ಬ್ಯೂಟಿ. ಮಾದಕ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ಬೆಡಗಿ. ಕೆಲ ಸಮಯದ ಹಿಂದೆ ಬಾಲಿವುಡ್ನ ದಂತದ ಗೊಂಬೆ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಗಳ ಮಳೆಯನ್ನೇ ಹರಿಸಿ ಸುದ್ದಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಬೆರಗುಗೊಳಿಸುವ ನೋಟ ಬೀರುವ ಮೂಲಕ ಆನ್ಲೈನ್ನ ಬಿಸಿ ಏರಿಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದುವೆಯಾಗೋ ಇಂಗಿತ ವ್ಯಕ್ತಪಡಿಸಿ ಹೆಡ್ಲೈನ್ ಆಗಿದ್ದಾರೆ. ಮದುಯಾಗೋಕೆ ಕಂಡೀಶನ್ಸ್ ಕೂಡ ಹಾಕಿದ್ದಾರೆ.
ಬಾಲಿವುಡ್ ಬೋಲ್ಡ್ ಬ್ಯೂಟಿ.. ಸೋಷಿಯಲ್ ಮೀಡಿಯಾದಲ್ಲಿ ಶೆರ್ಲಿನ್ ಚೋಪ್ರಾ ಅವರ ಮಾದಕ ಫೋಟೋ, ವಿಡಿಯೋಗಳು ಸದ್ದು ಮಾಡುತ್ತಿರುತ್ತವೆ. ಪಾಪರಾಜಿಗಲು ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ನಟಿ ಹೋದಲ್ಲಿ, ಬಂದಲ್ಲಿ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಾರೆ. ಬೋಲ್ಡ್ ಲುಕ್ ಆನ್ಲೈನ್ನಲ್ಲಿ ಸದ್ದು ಮಾಡುತ್ತವೆ. ಇದೀಗ ನಟಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಷರತ್ತುಗಳನ್ನೂ ಹಾಕಿ ಹೆಚ್ಚಿನವರ ಗಮನ ಸೆಳೆದಿದ್ದಾರೆ.
ಶೆರ್ಲಿನ್ ಚೋಪ್ರಾ ವಿಡಿಯೋ ವೈರಲ್: ರಾಹುಲ್ ಗಾಂಧಿ ಅವರ ಕುರಿತ ಬೋಲ್ಡ್ ಬ್ಯೂಟಿ ಶೆರ್ಲಿನ್ ಚೋಪ್ರಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. 2024ರ ಸಾರ್ವತ್ರಿಕ ಚುನಾವನೆ ಹಿನ್ನೆಲೆ 24x7 ಶ್ರಮಿಸುತ್ತಿರುವ ರಾಹುಲ್ ಗಾಂಧಿ ಬಗ್ಗೆ ನಟಿ ಕೊಟ್ಟ ಹೇಳಿಕೆಗಳು ಸಖತ್ ಸದ್ದು ಮಾಡುತ್ತಿವೆ.