ಕರ್ನಾಟಕ

karnataka

ETV Bharat / entertainment

ಫೈಟರ್ ಬಿಡುಗಡೆಗೆ ದಿನಗಣನೆ: 'ಶೇರ್ ಖುಲ್ ಗಯೇ' ಮೇಕಿಂಗ್​ ವಿಡಿಯೋ ನೋಡಿ - Deepika Padukone

ಬಹುನಿರೀಕ್ಷಿತ 'ಫೈಟರ್' ಸಿನಿಮಾದ 'ಶೇರ್ ಖುಲ್ ಗಯೇ' ಹಾಡಿನ ಮೇಕಿಂಗ್​ ವಿಡಿಯೋ ಅನಾವರಣಗೊಂಡಿದೆ.

Sher Khul Gaye Making
ಶೇರ್ ಖುಲ್ ಗಯೇ ಮೇಕಿಂಗ್

By ETV Bharat Karnataka Team

Published : Dec 19, 2023, 12:17 PM IST

ಇದೇ ಮೊದಲ ಬಾರಿಗೆ ಬಾಲಿವುಡ್​ ಬಹುಬೇಡಿಕೆ ತಾರೆಯರಾದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಸ್ಕ್ರೀನ್​ ಶೇರ್ ಮಾಡಿರುವ 'ಫೈಟರ್' ಸಿನಿಮಾ ಮುಂದಿನ ಗಣರಾಜ್ಯೋತ್ಸವ ಸಂದರ್ಭ ತೆರೆಕಾಣಲು ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರ ನಿರ್ಮಾಪಕರು 'ಶೇರ್ ಖುಲ್ ಗಯೇ' ಎಂಬ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದರು. ಈ ಪಾರ್ಟಿ ಸಾಂಗ್​ಗೆ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದಾರೆ. ಇದೀಗ ಈ ಹಾಡಿನ ಚಿತ್ರೀಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ.

'ಫೈಟರ್' ಸಿನಿಮಾದ ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್ ಅವರು ಹೃತಿಕ್ ರೋಷನ್ ಮತ್ತು ತಂಡದೊಂದಿಗೆ ಸೆರೆಹಿಡಿದ ಕೆಲ ಕ್ಷಣಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ಪಾರ್ಟಿ ಸಾಂಗ್​ನ ಶೂಟಿಂಗ್​​​ ಸಂದರ್ಭದ್ದಾಗಿದೆ. 'ಹೃತಿಕ್ ರೋಷನ್ ಮತ್ತು ನನ್ನ ತಂಡದ ಸದಸ್ಯರಾದ ಸಿದ್ಧಾರ್ಥ್ ಆನಂದ್, ಸಚಿತ್ ಪೌಲೋಸ್, ರಜತ್ ಪೊಡ್ಡಾರ್ ಅವರೊಂದಿಗೆ 'ಶೇರ್ ಖುಲ್ ಗಯೇ'ನ ಕ್ಷಣವನ್ನು ಸೆರೆಹಿಡಿಯಲಾಗಿದೆ' ಎಂದು ಕ್ಯಾಪ್ಶನ್​​ ಕೊಟ್ಟಿದ್ದಾರೆ. ಚಿತ್ರೀಕರಣದ ವಿಡಿಯೋದಲ್ಲಿ ಹೃತಿಕ್ ರೋಷನ್​ ಅವರು ಸಾಂಗ್​ ಬೀಟ್‌ಗೆ ಅದ್ಭುತವಾಗಿ ಮೈ ಕುಣಿಸುತ್ತಿರೋದನ್ನು ಕಾಣಬಹುದು. ನೃತ್ಯ ಸಂಯೋಜಕರು ಸ್ಟಾರ್ ನಟ ಹೃತಿಕ್​ ರೋಷನ್​​ ಜೊತೆಗೆ ಇಡೀ ತಂಡವನ್ನು ಹಾಡಿ ಹೊಗಳಿದ್ದಾರೆ.

ಚಿತ್ರದ ಪ್ರಮುಖ ಕಲಾವಿದರಾದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನೃತ್ಯ ಸಂಯೋಜಕ ಬಾಸ್ಕೊ ಮಾರ್ಟಿಸ್ ಅವರೊಂದಿಗೆ 'ಶೇರ್ ಖುಲ್ ಗಯೇ' ಸೆಟ್‌ನಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ನೃತ್ಯ ನಿರ್ದೇಶಕರು 'ಟೀಮ್ ಫೈಟರ್' ಎಂದು ಬರೆದಿರುವ ಚಿಕ್ಕ ಬೋರ್ಡ್​​ ಒಂದನ್ನು ತಮ್ಮ ಕೈಯಲ್ಲಿ ಹಿಡಿದಿರೋದನ್ನು ಈ ಫೋಟೋದಲ್ಲಿ ಕಾಣಬಹುದು. ಮೂವರೂ ನಗುತ್ತಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ:Salaar vs Dunki: ಅಡ್ವಾನ್ಸ್​ ಟಿಕೆಟ್​ನಲ್ಲಿ ಶಾರುಖ್​​ ಸಿನಿಮಾ ಮುಂದು, ಪ್ರಭಾಸ್​​ ಚಿತ್ರದಿಂದಲೂ ಪೈಪೋಟಿ

ಚಿತ್ರ ತಯಾರಕರು ಇತ್ತೀಚೆಗಷ್ಟೇ ಅಂದರೆ ಡಿಸೆಂಬರ್ 15 ರಂದು ಫೈಟರ್‌ನ ಈ 'ಶೇರ್ ಖುಲ್ ಗಯೇ' ಶೀರ್ಷಿಕೆಯ ಪಾರ್ಟಿ ಸಾಂಗ್​ ಅನ್ನು ಬಿಡುಗಡೆ ಮಾಡಿದ್ದರು. ಹಾಡಿನಲ್ಲಿ, ಹೃತಿಕ್ ಮತ್ತು ದೀಪಿಕಾ ಅದ್ಭುತವಾಗಿ ಡ್ಯಾನ್ಸ್​ ಮಾಡಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವವರೂ ಕೂಡ ಈ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. 'ಶೇರ್ ಖುಲ್ ಗಯೇ' ಕೇಳುತ್ತಿದ್ದರೆ ಎದ್ದು ಕುಣಿಯಬೇಕೆಂದು ಅನಿಸುತ್ತದೆ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಹಾಡನ್ನು ಕುಮಾರ್ ಬರೆದಿದ್ದು, ವಿಶಾಲ್ ದದ್ಲಾನಿ, ಬೆನ್ನಿ ದಯಾಳ್, ಶೇಖರ್ ಮತ್ತು ಶಿಲ್ಪಾ ರಾವ್ ಸಂಯೋಜಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ 2024ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಎಂಬಿಬಿಎಸ್ ಪರೀಕ್ಷೆಗೆ ತಯಾರಿ: ಸಿನಿಮಾಗಳಿಂದ ನಟಿ ಶ್ರೀಲೀಲಾ ತಾತ್ಕಾಲಿಕ ಬ್ರೇಕ್​?

ABOUT THE AUTHOR

...view details