ಕರ್ನಾಟಕ

karnataka

ETV Bharat / entertainment

'ದೀಪಾವಳಿಗೂ ಮುನ್ನ ಕೊಲೆ ಮಾಡುತ್ತೇನೆ' - ನಟಿ ಶೆಹನಾಜ್ ಗಿಲ್ ತಂದೆಗೆ ಬೆದರಿಕೆ - Santokh Singh Sukh

ಬಿಗ್ ಬಾಸ್ ಖ್ಯಾತಿಯ ನಟಿ ಶೆಹನಾಜ್ ಗಿಲ್ ಅವರ ತಂದೆ ಸಂತೋಖ್ ಸಿಂಗ್ ಸುಖ್ ಅವರಿಗೆ ಕೊಲೆ ಬೆದರಿಕೆ ಬಂದಿದೆ.

Shehnaaz Gill father Santokh Singh Sukh receives death threat
ಶೆಹನಾಜ್ ಗಿಲ್ ತಂದೆಗೆ ಕೊಲೆ ಬೆದರಿಕೆ

By

Published : Oct 8, 2022, 12:19 PM IST

ಬಿಗ್ ಬಾಸ್ ಖ್ಯಾತಿಯ ನಟಿ ಶೆಹನಾಜ್ ಗಿಲ್ ಅವರ ತಂದೆ ಸಂತೋಖ್ ಸಿಂಗ್ ಸುಖ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಮೂಲಕ ಕೊಲೆ ಬೆದರಿಕೆ ಬಂದಿದೆ. ಸಂಭಾಷಣೆ ಪ್ರಕಾರ, ಶೆಹನಾಜ್ ತಂದೆಗೆ ದೀಪಾವಳಿಗೂ ಮುನ್ನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ಪಂಜಾಬ್‌ನ ಬಿಯಾಸ್‌ನಿಂದ ತರಂತನ್‌ಗೆ ಹೋಗುತ್ತಿದ್ದ ವೇಳೆ ಶೆಹನಾಜ್ ಗಿಲ್ ಅವರ ತಂದೆಗೆ ಈ ಕರೆ ಬಂದಿದೆ. ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿ ಮೊದಲು ಸಂತೋಖ್​ ಅವರನ್ನು ನಿಂದಿಸಿದನು. ನಂತರ ದೀಪಾವಳಿಯ ಮೊದಲು ಮನೆಗೆ ನುಗ್ಗಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಘಟನೆಯ ನಂತರ ಸಂತೋಖ್ ಸ್ಥಳೀಯ​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2021ರಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ರಾಜಕಾರಣಿಯಾಗಿದ್ದ ಸಂತೋಖ್ ಸಿಂಗ್ ಸುಖ್ ಅವರನ್ನು ಕೊಲ್ಲಲು ಯತ್ನಿಸಲಾಗಿತ್ತು. ಡಿಸೆಂಬರ್ 25ರಂದು, ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದ್ದರು. ಇಬ್ಬರು ಆರೋಪಿಗಳು ಸಂತೋಖ್​ ಮೇಲೆ ಗುಂಡು ಹಾರಿಸಿದ್ದರು. ಅಂದು ನಾಲ್ಕು ಗುಂಡುಗಳು ಸಂತೋಖ್​​ ಅವರ ಕಾರಿಗೆ ತಗುಲಿದ್ದವು ಎಂದು ವರದಿಯಾಗಿದೆ ಮತ್ತು ಬಾಡಿಗಾರ್ಡ್​ಗಳು ಸಂತೋಖ್​ ಅವರನ್ನು ರಕ್ಷಿಸಲು ಧಾವಿಸಿದ ಕೂಡಲೇ ದಾಳಿಕೋರರು ಸ್ಥಳದಿಂದ ಓಡಿಹೋಗಿದ್ದರು.

ಇದನ್ನೂ ಓದಿ:ಹೊಸ ವೆಬ್ ಸಿರೀಸ್​​​ಗಾಗಿ ವಿಶೇಷ ತರಬೇತಿ ಪಡೆಯುತ್ತಿರುವ ಸಮಂತಾ

ABOUT THE AUTHOR

...view details