ಕರ್ನಾಟಕ

karnataka

ETV Bharat / entertainment

ಪತ್ನಿ ಪೂನಂ ಸಿನ್ಹಾರೊಂದಿಗಿನ ತಮ್ಮ ಪ್ರೇಮಕಥೆ ಬಿಚ್ಚಿಟ್ಟ ಶತ್ರುಘ್ನ ಸಿನ್ಹಾ - ಶತ್ರುಘ್ನ ಸಿನ್ಹಾ ಮದುವೆ

'ದಿ ಇನ್ವಿನ್ಸಿಬಲ್ಸ್' ಟಾಕ್ ಶೋನಲ್ಲಿ ರಾಜಕಾರಣಿ, ನಟ ಶತ್ರುಘ್ನ ಸಿನ್ಹಾ ಭಾಗಿಯಾಗಿದ್ದು, ತಮ್ಮ ಲವ್​ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

Shatrughan Sinha
ಶತ್ರುಘ್ನ ಸಿನ್ಹಾ

By

Published : Mar 4, 2023, 2:23 PM IST

ಶತ್ರುಘ್ನ ಸಿನ್ಹಾ (Shatrughan Sinha) ಅವರು ಭಾರತೀಯ ಸಿನಿರಂಗ ಮತ್ತು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ನಟರಾಗಿರುವ ಶತ್ರುಘ್ನ ಸಿನ್ಹಾ ಅವರು ಅರ್ಬಾಜ್ ಖಾನ್ (Arbaaz Khan) ನಡೆಸಿಕೊಡುವ 'ದಿ ಇನ್ವಿನ್ಸಿಬಲ್ಸ್' (The Invincibles) ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡಿದ್ದಾರೆ.

ರೈಲಿನಲ್ಲಿ ಭೇಟಿ, 14 ವರ್ಷಗಳ ಬಳಿಕ ವಿವಾಹ: ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ತಮ್ಮ ಪತ್ನಿ ಪೂನಂ ಸಿನ್ಹಾ (Poonam Sinha) ಅವರ ಜೊತೆಗಿನ ತಮ್ಮ ಜೀವನ, ಪ್ರೇಮಕಥೆ, ಮತ್ತು ವೃತ್ತಿ ಜೀವನದ ಬಗ್ಗೆ ಮಾತನಾದ್ದಾರೆ. ಪೂನಂ ಸಿನ್ಹಾ ಅವರನ್ನು ಮೊದಲು ರೈಲಿನಲ್ಲಿ ಭೇಟಿ ಆಗಿ, 14 ವರ್ಷಗಳ ನಂತರ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. ಅದಕ್ಕೂ ಮುನ್ನ ಪೂನಂ ಸಿನ್ಹಾ ಅವರ ಜೊತೆಗಿನ ಪ್ರಯಾಣವು ಸುಗಮವಾಗಿರಲಿಲ್ಲ. ಒಂದು ಹಂತದಲ್ಲಿ ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿದ್ದೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

''ರೈಲಿನಲ್ಲಿ ಓರ್ವ ಚೆಲುವೆ ಕಣ್ಣೀರು ಸುರಿಸುತ್ತಿರುವುದನ್ನು ಕಂಡೆ, ಕೆಲ ಕಾರಣಗಳಿಂದ ಆಕೆಯ ಕಣ್ಣು ಒದ್ದೆಯಾಗಿತ್ತು, ಆ ಸನ್ನಿವೇಶ ದೇವರೇ ಸೃಷ್ಟಿ ಮಾಡಿದ್ದ ಹಾಗಿತ್ತು, ನಮಗಾಗಿ ಏನು ಕಾಯುತ್ತಿದೆ ಎಂಬುದು ನಮಗೆ ತಿಳಿದಿರುವುದಿಲ್ಲ, ನಾನು ನಟನೆ ನಟನೆ ಕಲಿಯುತ್ತೇನೆ, ಸ್ಟಾರ್​ ಆಗುತ್ತೇನೆಂದು ಅಂದುಕೊಂಡಿರಲಿಲ್ಲ'' ಎಂದು ನಟ ಶತ್ರುಘ್ನ ಸಿನ್ಹಾ ತಿಳಿಸಿದರು.

'ಅವರೊಂದಿಗಿನ ಸಂಪರ್ಕ ಕಡಿತಗೊಳಿಸಬೇಕೆಂದುಕೊಂಡಿದ್ದೆ':ಮದುವೆಗೂ ಮುನ್ನ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಸಂಪರ್ಕದಲ್ಲಿರಲಿಲ್ಲ. ಮೂರು ವರ್ಷಗಳ ಕಾಲ ಯಾವುದೇ ಸಂಪರ್ಕವನ್ನು ಹೊಂದಿರದ ಬಗ್ಗೆ ನಿರೂಪಕ ಅರ್ಬಾಜ್ ಖಾನ್ ಕೇಳಿದಾಗ, ''ನಾನು ಅವರೊಂದಿಗಿನ ಎಲ್ಲಾ ಸಂಪರ್ಕವನ್ನು ನಿಲ್ಲಿಸಲು ನಿರ್ಧರಿಸಿದ್ದೆ, ಅದು ತಪ್ಪು ಎಂದು ತಿಳಿದಿತ್ತು, ಆದರೂ ನಾನು ಅವರೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಲು ಬಯಸಿದ್ದೆ, ಅವರು ಬಹಳ ಒಳ್ಳೆಯವರು, ನಾನು ಅವರೊಂದಿಗೆ ಇರಲು ಸಾಧ್ಯವಿಲ್ಲ ಎನಿಸಿತ್ತು, ಆದರೆ ಅವರು ನನ್ನ ಬಗ್ಗೆ ಬಹಳ ಕಾಳಜಿ ವಹಿಸಿದ್ದರು, ನನ್ನ ಸಿಬ್ಬಂದಿ ಬಳಿ ನನ್ನ ಕೇರ್ ತೆಗೆದುಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದರು '' ಎಂದು ಶತ್ರುಘ್ನ ಸಿನ್ಹಾ ಪ್ರತಿಕ್ರಿಯಿಸಿದರು.

ಶತ್ರುಘ್ನ ಸಿನ್ಹಾ ಸಿನಿಮಾಗಳು:ಪರಾಸ್, ತನ್ಹಾಯಿ, ದೋಸ್ತ್​, ಕಾಲಾ ಪತ್ತರ್​, ದೋಸ್ತಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ಇದನ್ನೂ ಓದಿ:ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್​ಕುಮಾರ್​: ಅಪ್ಪು ಕಾರ್​ ನಂಬರ್​ ಯುವ ಸಿನಿಮಾದಲ್ಲಿ ಬಳಕೆ

ಶತ್ರುಘ್ನ ಸಿನ್ಹಾ ಗೆದ್ದ ಪ್ರಶಸ್ತಿಗಳು:ಅತ್ತಯುತ್ತಮ ಸಹನಟ, ಸ್ಟಾರ್​ ಡಸ್ಟ್ ಅವಾರ್ಡ್ಸ್, ಝೀ ಸಿನಿ ಅವಾರ್ಡ್ಸ್, ಐಫಾ ಅವಾರ್ಡ್ಸ್, ಫಿಲ್ಮ್​​ ಫೇರ್ ಅವಾರ್ಡ್ಸ್ ಸೇರಿದಂತೆ ಹಲವರು ಪ್ರಸಸ್ತಿಗಳನ್ನು ಪಡೆದಿದ್ದಾರೆ. ಸದ್ಯ ತೃಣಮೂಲ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಟಿಯಾಗಿ ಗುರುತಿಸಿಕೊಂಡಿದ್ದ ಪೂನಂ ಸಿನ್ಹಾ ಸದ್ಯ ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೋರ್ವ ಪ್ರತಿಭೆ ಎಂಟ್ರಿ: ಯುವ ರಾಜ್​ಕುಮಾರ್​ ಚೊಚ್ಚಲ ಚಿತ್ರದ ಟೈಟಲ್​ ಅನಾವರಣ

ABOUT THE AUTHOR

...view details