ಕರ್ನಾಟಕ

karnataka

ETV Bharat / entertainment

ಬಾಲಿವುಡ್​ ಬಹುನಿರೀಕ್ಷಿತ ಚಿತ್ರ 'ಶಂಶೇರಾ'ದ ಟ್ರೈಲರ್​ ರಿಲೀಸ್ - ಸಂಜಯ್ ದತ್ ಶಂಶೇರಾ

ಬಾಲಿವುಡ್​ನ ಬಹುನಿರಿಕ್ಷಿತ ಚಿತ್ರ 'ಶಂಶೇರಾ'ದ ಟ್ರೈಲರ್​ ಇಂದು ರಿಲೀಸ್ ಆಗಿದೆ.

Shamshera trailer
ಶಂಶೇರಾ ಟ್ರೈಲರ್​ ರಿಲೀಸ್

By

Published : Jun 24, 2022, 2:02 PM IST

ಸಂಜು ಸಿನಿಮಾ ನಂತರ ರಣಬೀರ್ ಕಪೂರ್ ಶಂಶೇರಾ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳಲು ಸಿದ್ಧರಾಗಿದ್ದಾರೆ. ಬಾಲಿವುಡ್​ನ ಬಹುನಿರಿಕ್ಷಿತ ಚಿತ್ರ 'ಶಂಶೇರಾ'ದ ಟ್ರೈಲರ್​ ಇಂದು ರಿಲೀಸ್ ಆಗಿದೆ.

ಕುತೂಹಲಕಾರಿ ಕಥೆಯಲ್ಲಿ ರಣಬೀರ್ ಉಗ್ರರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ರಣ್​ಬೀರ್​ ಕಪೂರ್​​ ಯಶಸ್ಸನ್ನು ಪುನರಾವರ್ತಿಸುವ ಬಗ್ಗೆ ಶಂಶೇರಾ ಟ್ರೈಲರ್ ಸುಳಿವು ನೀಡಿದೆ.. ಓರ್ವ ವ್ಯಕ್ತಿ ಗುಲಾಮನಾದ, ನಂತರ ನಾಯಕನಾದ, ಬಳಿಕ ಬುಡಕಟ್ಟಿನ ದಂತಕಥೆಯಾದ ಕಥೆ ಇದು. ಬುಡಕಟ್ಟಿನ ಸ್ವಾತಂತ್ರ್ಯ ಮತ್ತು ಘನತೆಗಾಗಿ ಹೋರಾಡಿದವನೇ ಶಂಶೇರಾ. ಈ ಹೋರಾಟದ ಕಥೆಯನ್ನು 'ಶಂಶೇರಾ' ಚಿತ್ರ ಎತ್ತಿ ಹಿಡಿದಿದೆ.

ಇದನ್ನೂ ಓದಿ:ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ.. ಕಾತರಕ್ಕೆ ಕೊನೆಗೂ ತೆರೆ

ಆದಿತ್ಯ ಚೋಪ್ರಾ ನಿರ್ಮಿಸಿರುವ ಈ ಆ್ಯಕ್ಷನ್​ ಚಿತ್ರದಲ್ಲಿ ಸಂಜಯ್​ ದತ್, ರಣ್​ಬೀರ್​ ಕಪೂರ್​ನ ಶತ್ರುವಾಗಿ ಕಾಣಿಸಿಕೊಂಡಿದ್ದಾರೆ. ವಾಣಿ ಕಪೂರ್ ರಣ್​ಬೀರ್​​ಗೆ ಜೋಡಿಯಾಗಿದ್ದಾರೆ. ಅಶುತೋಷ್ ರಾಣಾ, ಸೌರಭ್ ಶುಕ್ಲಾ, ರೋನಿತ್ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಂಸ್‌ನ ಶಂಶೇರಾ ಜುಲೈ 22 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details