ಮುಂಬೈ (ಮಹಾರಾಷ್ಟ್ರ):ರಣಬೀರ್ ಕಪೂರ್ ಅಭಿನಯದ ಆ್ಯಕ್ಷನ್ ಚಿತ್ರ ಶಂಶೇರಾ ಮೊದಲ ದಿನ 10.25 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಬೃಹತ್ ಬಜೆಟ್ನಲ್ಲಿ ಕರಣ್ ಮಲ್ಹೋತ್ರಾ ನಿರ್ದೇಶಿಸಿ, ಯಶ್ ರಾಜ್ ಫಿಲ್ಮ್ಸ್ (YRF) ಪ್ರಸ್ತುತ ಪಡಿಸಿದೆ. ರಣಬೀರ್ ಕಪೂರ್ ಅವರ 2018 ಸಂಜು ಚಿತ್ರದ ನಂತರ ಸುಮಾರು ನಾಲ್ಕು ವರ್ಷದ ಅಂತರದಲ್ಲಿ ಈ ಸಿನಿಮಾ ತೆರೆಗೆ ಬಂದಿದೆ.
Shamshera ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ವೀಕ್ಷಕರನ್ನು ಸೆಳೆಯುವ ಸಾಧ್ಯತೆ ಇದೆ. 1800 ದಶಕದ ಬ್ರಿಟಿಷ್ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬುಡಕಟ್ಟಿನ ಜನರ ಕತೆಯನ್ನು ಸಿನಿಮಾ ಹೇಳುತ್ತದೆ. ನಟ ಸಂಜಯ್ ದತ್ ಅವರು ಬ್ರಿಟಿಷ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಶಂಶೇರಾದಲ್ಲಿ ವಾಣಿ ಕಪೂರ್, ಸೌರಭ್ ಶುಕ್ಲಾ ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ.
ವಿಶ್ಲೇಷಕರ ಪ್ರಕಾರ, ಶಂಶೇರಾ ಚಿತ್ರ ಕಲೆಕ್ಷನ್ ಈ ವರ್ಷದ ಬಿಡುಗಡೆಯಾದ ಐದು ಸಾಲಿಗೆ ಸೇರುತ್ತದೆ. ರಣಬೀರ್‌ನ ಶಂಶೇರಾ ಮೊದಲ ದಿನದಲ್ಲಿ ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿಗಿಂತ ಕಡಿಮೆ ಕಲೆಕ್ಷನ್ ಮಾಡಿದೆ. 2022 ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳನ್ನು ನೋಡುವುದಾದರೆ.
1. ಭೂಲ್ ಭುಲೈಯಾ2: ₹ 14.11 ಕೋಟಿ