ಕರ್ನಾಟಕ

karnataka

ETV Bharat / entertainment

'ನವಾಜುದ್ದೀನ್ ಸಿದ್ದಿಕಿ ಸ್ವಾರ್ಥಿ': ಪತ್ನಿ ಬಳಿಕ ಸಹೋದರನಿಂದ ಆರೋಪಗಳ ಮಳೆ! - ನವಾಜುದ್ದೀನ್ ಸಿದ್ದಿಕಿ ಲೇಟೆಸ್ಟ್ ನ್ಯೂಸ್

ಪತ್ನಿ ಆಲಿಯಾ ಸಿದ್ದಿಕಿ ಬಳಿಕ ಸಹೋದರ ಶಮ್ಸ್ ಸಿದ್ದಿಕಿ ನಟ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

Nawazuddin Siddiqui
ನವಾಜುದ್ದೀನ್ ಸಿದ್ದಿಕಿ

By

Published : Mar 1, 2023, 8:02 PM IST

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin siddiqui) ಕೌಟುಂಬಿಕ ಕಲಹ ಮುನ್ನಲೆಗೆ ಬಂದಿದೆ. ದಂಪತಿ ನಡುವಿನ ಭಿನ್ನಾಭಿಪ್ರಾಯ, ವೈಮನಸ್ಸು, ಆರೋಪ - ಪ್ರತ್ಯಾರೋಪಗಳು ದಿನೇ ದಿನೆ ಹೆಚ್ಚುತ್ತಿದೆ. ಈ ಹಿಂದೆ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಅವರು ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಸದ್ಯ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೀಗ ನಟನ ಸಹೋದರ ಕೂಡ ನವಾಜುದ್ದೀನ್ ಸಿದ್ದಿಕಿ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.

ಶಮ್ಸ್ ಸಿದ್ದಿಕಿ (Shams Siddiqui) ಸಹೋದರನ ವ್ಯಕ್ತಿತ್ವದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಕಳೆದ ತಿಂಗಳು ನಟ ನವಾಜುದ್ದೀನ್ ಸಿದ್ದಿಕಿ ಅವರನ್ನು ಸಮರ್ಥಿಸಿಕೊಂಡು ನಟಿ ಕಂಗನಾ ರಣಾವತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದ್ರೆ ಶಮ್ಸ್ ಸಿದ್ದಿಕಿ ಹೇಳಿಕೆಗೂ, ಕಂಗನಾ ಅಭಿಪ್ರಾಯಕ್ಕೂ ಭಾರಿ ವ್ಯತ್ಯಾಸವಿದೆ. ಚಲನಚಿತ್ರ ನಿರ್ಮಾಪಕರೂ ಆಗಿರುವ ಶಮ್ಸ್ ಸಿದ್ದಿಕಿ ಸಹೋದರನ ವ್ಯಕ್ತಿತ್ವದ ಬಗ್ಗೆ ಹೇಳುವಾಗ, ನವಾಜುದ್ದೀನ್ ಸಿದ್ದಿಕಿ ಅವರ ಕುಟುಂಬವನ್ನು ನೋಡಿಕೊಳ್ಳುತ್ತಾರೆ ಎಂಬುದನ್ನು ಹೇಳಲು ನಿರಾಕರಿಸಲಿಲ್ಲ.

ಸಹೋದರ ತಮ್ಮ ಕುಟುಂಬಕ್ಕಾಗಿ ಆಸ್ತಿಗಳನ್ನು ಖರೀದಿಸುತ್ತಾರೆ. ಆದರೆ, ನನ್ನ ವೃತ್ತಿಜೀವನವನ್ನು ಸ್ಥಾಪಿಸಲು ಅವರ ಶಕ್ತಿಯನ್ನು ಬಳಸಲಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತೆ ನಿಜ ಜೀವನದಲ್ಲಿ ಅವರಿಲ್ಲ. ಜನರನ್ನು ತೊರೆಯುವ ಮನಸ್ಥಿತಿ ಉಳ್ಳವರು. ಇದಕ್ಕೆ ಆಲಿಯಾ (ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ) ಮತ್ತು ನಾನು ಸ್ಪಷ್ಟ ಉದಾಹರಣೆ ಎಂದು ಶಮ್ಸ್ ಸಿದ್ದಿಕಿ ಹೇಳಿದ್ದಾರೆ.

'ನವಾಜುದ್ದೀನ್ ಸಿದ್ದಿಕಿ ಸ್ವಾರ್ಥಿ': ಆಲಿಯಾ ಸಿದ್ದಿಕಿ ಮತ್ತು ನವಾಜುದ್ದೀನ್ ಸಿದ್ದಿಕಿ ದಂಪತಿಯ ಸಂಬಂಧದ ಕುರಿತು ಮಾತನಾಡಿದ ಶಮ್ಸ್ ಸಿದ್ದಿಕಿ, ಪ್ರಾರಂಭದಿಂದಲೂ ತೊಂದರೆಗಳಿದ್ದ ಕಾರಣ ಅವರ ದಾಂಪತ್ಯದಲ್ಲಿ ಸ್ಥಿರತೆಯ ಕೊರತೆ ಇದೆ. ಆಲಿಯಾ ಅವರ ಸಹಿಷ್ಣುತೆಯ ಮಟ್ಟವು ಕ್ಷೀಣಿಸಿದೆ. ಈ ಹಿನ್ನೆಲೆ ಅವರ ನಡುವಿನ ಸಮಸ್ಯೆ ಬಯಲಿಗೆ ಬರುತ್ತಿದೆ. ನವಾಜುದ್ದೀನ್ ಜೊತೆಗಿನ ಸಂಬಂಧದಲ್ಲಿ ಆಲಿಯಾ ಸಾಕಷ್ಟು ಸಹಿಸಿಕೊಂಡಿದ್ದಾರೆ ಎಂದು ಶಮ್ಸ್ ಹೇಳಿದ್ದಾರೆ. ಅಲ್ಲದೇ ತಮ್ಮ ಸಹೋದರನಿಗೆ 'ಸ್ವಾರ್ಥಿ' ಮತ್ತು 'ದುರಾಸೆಯುಳ್ಳ ವ್ಯಕ್ತಿ' ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿಯಿಂದಲೇ ರೇಪ್​ ಕೇಸ್: ಮಕ್ಕಳಿಗಾಗಿ ಕೋರ್ಟ್ ಮೆಟ್ಟಿಲೇರಿದ ನಟ!

ಆಲಿಯಾ ಸಿದ್ದಿಕಿ ಆರೋಪಗಳೇನು?ನವಾಜುದ್ದೀನ್‌ ಸಿದ್ದಿಕಿ ಅವರನ್ನು ತನ್ನ ಪತಿ ಎಂದು ಪರಿಗಣಿಸಿದ್ದೇನೆ. ನನ್ನ ಕರ್ತವ್ಯಗಳನ್ನು ನಿರ್ವಹಿಸಿದ್ದೇನೆ. ಆದರೆ, ಅವರು ನನ್ನನ್ನು ಎಂದಿಗೂ ಪತ್ನಿಯಾಗಿ ಸ್ವೀಕರಿಸಲಿಲ್ಲ. ಸದ್ಯ ಹಣಕಾಸು ಸಮಸ್ಯೆ ಎದುರಿಸುತ್ತಿದ್ದೇನೆ, ಅವರು ನನ್ನನ್ನು ಎಲ್ಲ ಕಡೆಯಿಂದ ದುರ್ಬಲಗೊಳಿಸಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈ ಹಿಂದೆ, ಪತಿ ಮತ್ತು ಅತ್ತೆ ತನಗೆ ಆಹಾರ ಸೇರಿದಂತೆ ಮೂಲ ಅವಶ್ಯಕತೆಗಳನ್ನು ಪೂರೈಸಲಿಲ್ಲ. ಮನೆಯ ಕೋಣೆಯೊಂದರಲ್ಲಿ ತನ್ನನ್ನು ಮತ್ತು ಮಕ್ಕಳನ್ನು ಇರಿಸಲಾಗಿತ್ತು ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಫೋಟೋ ಬ್ಲ್ಯಾಕ್​ & ವೈಟ್ - ಸಲ್ಮಾನ್​ ನೋಟ ಮಾತ್ರ ಕಲರ್​​ಫುಲ್​: 'ಬಿಲ್ಲಿ ಬಿಲ್ಲಿ' ಟೀಸರ್ ರಿಲೀಸ್

ತೃತೀಯಲಿಂಗಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ:ಇನ್ನೂ ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನವಾಜುದ್ದೀನ್ ಸಿದ್ದಿಕಿ ಸದ್ಯ ಹಡ್ಡಿ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಡ್ಡಿ ಚಿತ್ರದಲ್ಲಿ ನಟ ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದು, ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ 'ಹಡ್ಡಿ'ಯ ಮೋಷನ್ ಪೋಸ್ಟರ್‌, ನಟನ ಕೆಲ ಚಿತ್ರಗಳು ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

ABOUT THE AUTHOR

...view details