ರಾಕೇಶ್ ಬಾಪಟ್ ಪ್ರೀತಿಯಿಂದ ಬೇರ್ಪಟ್ಟ ನಂತರ ಬಾಲಿವುಡ್ ನಟಿ ಶಮಿತಾ ಶೆಟ್ಟಿ ಅವರ ಪ್ರೇಮ ಜೀವನ ಕುರಿತಾಗಿ ಮತ್ತೆ ಸುದ್ದಿಯಾಗುತ್ತಿದೆ. ಶಮಿತಾ ಶೆಟ್ಟಿ ಮತ್ತೆ ಪ್ರೀತಿಯನ್ನು ಕಂಡು ಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಮೀರ್ ಅಲಿ ಅವರು ಶಮಿತಾ ಅವರ ಕೆನ್ನೆಗೆ ಮುತ್ತಿಟ್ಟಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿರುವುದಾಗಿ ಊಹಾಪೋಹಗಳು ಎದ್ದಿವೆ. ಇದೀಗ ಸ್ವತಃ ನಟಿ ಶಮಿತಾ ಶೆಟ್ಟಿ ಅವರು ಈ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನಿಡಿದ್ದು, ವದಂತಿಗಳಿಗೆ ಫುಲ್ ಸ್ಟಾಪ್ ಇಡುವ ಕೆಲಸ ಮಾಡಿದ್ದಾರೆ.
ಸಿಂಗಲ್ & ಹ್ಯಾಪಿ: ಊಹಾಪೋಹಗಳಿಗೆ ಬ್ರೇಕ್ ಹಾಕಲು ನಟಿ ಶಮಿತಾ ಶೆಟ್ಟಿ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಶಮಿತಾ ಅವರು "ಸಿಂಗಲ್ ಮತ್ತು ಹ್ಯಾಪಿ" ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ನಾನು ಸಮಾಜದಿಂದ ದಿಗ್ಭ್ರಮೆಗೊಂಡಿದ್ದೇನೆ ಮತ್ತು ಇಂತಹ ಮನಸ್ಥಿತಿಗಳು ಎಲ್ಲೆಡೆ ಇವೆ" ಎಂದು ತಿಳಿಸಿದ್ದಾರೆ.
ಶಮಿತಾ ಶೆಟ್ಟಿ ಸೋಷಿಯಲ್ ಮೀಡಿಯಾ ಪೋಸ್ಟ್: ಸಂತ್ಯಾಂಶದ ಅರಿವಿಲ್ಲದೇ ಕ್ರಿಯೆ ಅಥವಾ ಯಾವುದಾದರು ವಿಷಯದ ತೀರ್ಪು ಕೊಡುವುದು ಏಕೆ?. ನೆಟಿಜನ್ಗಳ ಸಂಕುಚಿತ ಮನಸ್ಸಿನ ಊಹೆಗಳು ಮಿತಿ ಮೀರಿದ ಸಾಧ್ಯತೆ ಇದೆ. ನಾವು ಅದಕ್ಕೆ ನಮ್ಮ ಮನಸ್ಸನ್ನು ತೆರೆಯಲು ಇದು ಉತ್ತಮ ಸಮಯವಾಗಿದೆ. ಏಕಾಂಗಿಯಾಗಿದ್ದೇನೆ, ಸಂತೋಷವಾಗಿದ್ದೇನೆ. ಈ ದೇಶದಲ್ಲಿನ ಹೆಚ್ಚು ಪ್ರಮುಖ ವಿಷಯಗಳತ್ತ ಗಮನ ಹರಿಸೋಣ ಎಂದು ಬರೆದುಕೊಂಡಿದ್ದಾರೆ.
ಶಮಿತಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟ ಆಮೀರ್ ಅಲಿ: ಆಮೀರ್ ಅಲಿ ಮತ್ತು ಶಮಿತಾ ಶೆಟ್ಟಿ ಅವರು ಪ್ರೀತಿಸುತ್ತಿರುವುದಾಗಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಇಬ್ಬರೂ ಇತ್ತೀಚೆಗೆ ಮುಂಬೈನಲ್ಲಿ ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡ ನಂತರ ಆಮೀರ್ ಜೊತೆ ಶಮಿತಾ ಡೇಟಿಂಗ್ ವದಂತಿಗಳು ಪ್ರಾರಂಭ ಆಯಿತು. ಪಾಪರಾಜಿಗಳ ವಿಡಿಯೋ ಒಂದರಲ್ಲಿ ಆಮೀರ್ ಶಮಿತಾರನ್ನು ಕಾರಿಗೆ ಕೂರಿಸುವ ವೇಳೆ ಅವರ ಕೆನ್ನೆಗೆ ಮುತ್ತಿಟ್ಟು ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದ ಸಿಕ್ಕಾಪಟ್ಟೆ ವೈರಲ್ ಅಗಿದೆ.
ಇದನ್ನೂ ಓದಿ:ಮತ್ತೆ ಕಾಫಿಡೇ ಅಲ್ಲಿ ಕೆಲಸ ಆರಂಭಿಸಿ, ಗ್ರಾಹಕರನ್ನು ಖುಷಿ ಪಡಿಸುತ್ತೇನೆ: ಆಸ್ಕರ್ ನಾಮ ನಿರ್ದೇಶಿತ ನಟ
ರಾಕೇಶ್ ಬಾಪಟ್ ಜೊತೆ ಡೇಟಿಂಗ್:ಈ ಮೊದಲು ಬಾಲಿವುಡ್ ಬಹುಬೇಡಿಕೆ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿಯಾಗಿರುವ ನಟಿ ಶಮಿತಾ ಶೆಟ್ಟಿ (43) ಬಿಗ್ ಬಾಸ್ ಒಟಿಟಿ ಶೋನಲ್ಲಿ ಪರಿಚಯವಾಗಿದ್ದ ರಾಕೇಶ್ ಬಾಪಟ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. ಬಿಗ್ಬಾಸ್ ಮನೆಯಲ್ಲಿರುವ ವೇಳೆ ಇಬ್ಬರ ನಡುವೆ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಶೋನಿಂದ ಹೊರಬಂದ ಮೇಲೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ಅವರ ಕೆನ್ನೆಗೆ ರಾಕೇಶ್ ಬಾಪಟ್ ಮುತ್ತಿಟ್ಟ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿ ಮಾಡಿತ್ತು. ಆದರೆ, ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಇಬ್ಬರೂ ತಮ್ಮ ಪ್ರೀತಿಯ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.
ಇದನ್ನೂ ಓದಿ:'ದೀಪಿಕಾ ಅಮರ್, ಜಾನ್ ಅಬ್ರಾಹಂ ಅಕ್ಬರ್, ನಾನು ಅಂಥೋನಿ': ಪಠಾಣ್ ಬಗ್ಗೆ ಶಾರುಖ್ ಒಗ್ಗಟ್ಟಿನ ವ್ಯಾಖ್ಯಾನ