ಕರ್ನಾಟಕ

karnataka

ETV Bharat / entertainment

ಜವಾನ್​ ಬಿಡುಗಡೆಗೆ ದಿನಗಣನೆ: ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ! - Vaishno Devi

Shah Rukh Khan visits Vaishno Devi shrine: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ.

Shah Rukh Khan visits Vaishno Devi temple
ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ

By ETV Bharat Karnataka Team

Published : Aug 30, 2023, 3:20 PM IST

Updated : Aug 30, 2023, 4:14 PM IST

ದೇಶ ಮಾತ್ರದಲ್ಲದೇ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಶಾರುಖ್​ ಖಾನ್​​ ಮುಖ್ಯಭೂಮಿಕೆಯ ಜವಾನ್​​ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇನ್ನೇನು ಒಂದು ವಾರದಲ್ಲಿ ಬರುನಿರೀಕ್ಷಿತ ಸಿನಿಮಾ ತೆರೆಗಪ್ಪಳಿಸಲಿದೆ. ಜವಾನ್​ ಬಿಡುಗಡೆಗೂ ಮುನ್ನ ದೇವರ ದರ್ಶನ ಪಡೆದಿದ್ದಾರೆ ಬಾಲಿವುಡ್​ ಕಿಂಗ್​ ಖಾನ್​​.

ವೈಷ್ಣೋದೇವಿ ಸನ್ನಿಧಿಗೆ ಎಸ್​ಆರ್​ಕೆ ಭೇಟಿ: ಪ್ರಸಿದ್ಧ ನಟ ಎಸ್​ಆರ್​ಕೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಜವಾನ್​ ಬಿಡುಗಡೆಗೂ ಮುನ್ನ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಧಿಕಾರಿಯೊಬ್ಬರ ಪ್ರಕಾರ 58ರ ಹರೆಯದ ನಟ ಮಂಗಳವಾರ ತಡರಾತ್ರಿ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಶಾರುಖ್​​ ಖಾನ್​ ಭೇಟಿಯ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಮಂಗಳವಾರ ತಡರಾತ್ರಿ ದೇಗುಲಕ್ಕೆ ಭೇಟಿ: ''ಮಂಗಳವಾರ ಸಂಜೆ ಸೂಪರ್​ ಸ್ಟಾರ್​ ಶಾರುಖ್​ ಖಾನ್​​ ಬೇಸ್​ ಕ್ಯಾಂಪ್​ ಕತ್ರಾಗೆ ತಲುಪಿದರು. ತಡರಾತ್ರಿ 11:40 ರ ಸುಮಾರಿಗೆ ದೇವಸ್ಥಾನ ತಲುಪುವ ಸಲುವಾಗಿ ಹೊಸ ತಾರಾಕೋಟೆ ಮಾರ್ಗ ಬಳಸಿದರು. ಸನ್ನಿಧಿಗೆ ಭೇಟಿ ಕೊಟ್ಟ ನಟ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಆ ಕೂಡಲೇ ತೆರಳಿದರು'' - ಅಧಿಕಾರಿಯೋರ್ವರ ಮಾಹಿತಿ.

ವೈರಲ್ ವಿಡಿಯೋಗೆ ಪ್ರತಿಕ್ರಿಯೆ: ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಭೇಟಿ ವಿಚಾರದ ವಿಡಿಯೋವೊಂದು ಸಖತ್​ ಸದ್ದು ಮಾಡುತ್ತಿದೆ. ಕೆಲವೇ ಸೆಕೆಂಡುಗಳುಳ್ಳ ವೈರಲ್​​ ವಿಡಿಯೋದಲ್ಲಿ, ನಟ ವೈಟ್​ ಟೀ ಶರ್ಟ್, ಜೀನ್ಸ್​,​ ನೀಲಿ ಬಣ್ಣದ ಜಾಕೆಟ್​ ಧರಿಸಿರುವುದನ್ನು ಕಾಣಬಹುದು. ಮಾಸ್ಕ್​​ನಿಂದ ಮುಖವನ್ನು ಸಂಪೂರ್ಣ ಮುಚ್ಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕಳೆದ 9 ತಿಂಗಳಲ್ಲಿ 2ನೇ ಭೇಟಿ:ವೈರಲ್​ ವಿಡಿಯೋದಲ್ಲಿ, ಬಹುಬೇಡಿಕೆ ನಟನ ಸುತ್ತ ಬಿಗಿ ಭದ್ರತೆ ಕಾಣಬಹುದು. ವೈಷ್ಣೋದೇವಿ ದೇವಸ್ಥಾನದ ಆಡಳಿತ ಮಂಡಳಿ, ಪೊಲೀಸರು, ಶಾರುಖ್​ ಖಾನ್​ ಅವರ ವೈಯಕ್ತಿಕ ಸಿಬ್ಬಂದಿ ನಟನನ್ನು ಸುತ್ತುವರೆದಿದ್ದರು. ಕಳೆದ ಒಂಭತ್ತು ತಿಂಗಳಲ್ಲಿ ವೈಷ್ಣೋದೇವಿ ಸನ್ನಿಧಿಗೆ ಶಾರುಖ್​​ ಖಾನ್​ ಅವರ ಎರಡನೇ ಭೇಟಿ ಇದು. ಈ ಹಿಂದೆ ಬ್ಲಾಕ್​ಬಸ್ಟರ್ ಪಠಾಣ್​ ಬಿಡುಗಡೆಗೂ ಮುನ್ನ, 2022 ರ ಡಿಸೆಂಬರ್​ನಲ್ಲಿ ವೈಷ್ಣೋದೇವಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ಇದೀಗ ಬಹುನಿರೀಕ್ಷಿತ ಜವಾನ್​ ಬಿಡುಗಡೆ ಹೊಸ್ತಿಲಲ್ಲಿದ್ದು, ಸಿನಿಮಾ ಯಶಸ್ಸಿಗೆ ನಟ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:Raksha Bandhan: ಮನಮೋಹಕವಾಗಿ ರೆಡಿಯಾಗಬೇಕೆ? ಈ ನಟಿಮಣಿಯರ ಸ್ಟೈಲ್ ಟ್ರೈ ಮಾಡಿ ನೋಡಿ

ಇಂದು ತಮಿಳುನಾಡಿನಲ್ಲಿ ಜವಾನ್​​ ಪ್ರಿ ರಿಲೀಸ್​ ಈವೆಂಟ್​ ನಡೆಯಲಿದೆ.ಚೆನ್ನೈನ ಕಾಲೇಜೊಂದರಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಟ ಭಾಗಿಯಾಗಲಿದ್ದಾರೆ. ಸೌತ್​ ಸ್ಟಾರ್ ನಿರ್ದೇಶಕ ಅಟ್ಲೀ ಸಹ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇನ್ನು ದಕ್ಷಿಣದ ಸ್ಟಾರ್ ಡೈರೆಕ್ಟರ್​ ಅಟ್ಲೀ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್​ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: Jawan: ಎಸ್​ಆರ್​ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್​ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್​ ಪ್ರದರ್ಶನ!

Last Updated : Aug 30, 2023, 4:14 PM IST

ABOUT THE AUTHOR

...view details