ಕರ್ನಾಟಕ

karnataka

ETV Bharat / entertainment

ಕಿಂಗ್‌ ಆಫ್‌ ರೊಮ್ಯಾನ್ಸ್‌ ಶಾರುಖ್‌ ಖಾನ್‌ ಹುಟ್ಟುಹಬ್ಬ: ಪಠಾಣ್‌ ಟೀಸರ್‌ ಬಿಡುಗಡೆ - ಶಾರುಖ್‌ ಖಾನ್‌ ನಟನೆಯ ಮುಂಬರುವ ಚಿತ್ರಗಳು

ಬಾಲಿವುಡ್ ನಟ ಶಾರುಖ್ ಖಾನ್ ಹುಟ್ಟುಹಬ್ಬದಂದು ಪಠಾಣ್​ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಬಹು ದಿನಗಳ ಬಳಿಕ ಪರದೆ ಕಾಣಿಸಿಕೊಳ್ಳುತ್ತಿರುವ ನಚ್ಚಿನ ನಟನ ಮಾಸ್​​ ಡೈಲಾಗ್​ ಕಂಡು ಅಭಿಮಾನಿಗಳು ಪುಳಕಿತರಾಗುತ್ತಿದ್ದಾರೆ.

Shah Rukh Khan unveils Pathaan teaser on his 57th birthday
Shah Rukh Khan unveils Pathaan teaser on his 57th birthday

By

Published : Nov 2, 2022, 2:03 PM IST

ಬಾಲಿವುಡ್​ನ ಕಿಂಗ್‌ ಆಫ್‌ ರೊಮ್ಯಾನ್ಸ್‌ ಶಾರುಖ್‌ ಖಾನ್‌ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ಮಧ್ಯೆ ಅವರ ನಟನೆಯ ಬಹುನಿರೀಕ್ಷಿತ 'ಪಠಾಣ್‌' ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. 57ನೇ ವಸಂತಕ್ಕೆ ಕಾಲಿಟ್ಟ ನಟನಿಗೆ ಟೀಸರ್ ರಿಲೀಸ್​ ಮಾಡುವ​ ಮೂಲಕ ಚಿತ್ರತಂಡ ಗಿಫ್ಟ್​ ನೀಡಿದೆ.

ಸದ್ಯ ಟೀಸರ್ ಅನ್ನು ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು​ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಪಠಾಣ್​ ಟೀಸರ್ ಈಗ ಬಿಡುಗಡೆಯಾಗಿದೆ. 25ನೇ ಜನವರಿ 2023 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ. ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರವನ್ನು ಹಬ್ಬದಂತೆ ಆಚರಿಸಿ ಎಂದು ಅವರು ಬರೆದುಕೊಂಡಿದ್ದಾರೆ.

ಬಂಧಿತನಾಗಿ ಶಾರುಖ್‌ ಅವರನ್ನು ಒಂದು ಗುಪ್ತ ಜಾಗಕ್ಕೆ ಕರೆದುಕೊಂಡು ಹೋಗುತ್ತಾರೆ. ಮಾಹಿತಿಗಾಗಿ ಅಲ್ಲಿ ಅವರಿಗೆ ಹಿಂಸೆ ಕೊಡುತ್ತಿರುವುದನ್ನು ಟೀಸರ್​​ನಲ್ಲಿ ತೋರಿಸಲಾಗಿದೆ. ಆ ಬಳಿಕ ಅಲ್ಲಿಂದ ಶಾರುಖ್‌ ಹೇಗೆ ಫೈಟ್‌ ಮಾಡಿ ಪಾರಾಗುತ್ತಾರೆ ಎನ್ನುವುದನ್ನು ಆ್ಯಕ್ಷನ್‌ ಪ್ರಿಯರಿಗೆ ಇಷ್ಟವಾಗುವಂತೆ ಸೆರೆಹಿಡಿಯಲಾಗಿದೆ.

1 ನಿಮಿಷ 25 ಸೆಕೆಂಡ್​ನ ಈ ಟೀಸರ್​ನಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಜಾನ್ ಅಬ್ರಹಾಂ ಅವರನ್ನು ಹೈಲೆಟ್​ ಮಾಡಲಾಗಿದೆ. ನೆಟಿಜನ್ಸ್​ ಫಿದಾ ಆಗಿದ್ದು ಬಹು ದಿನಗಳ ಬಳಿಕ ಪರದೆ ಕಾಣಿಸಿಕೊಳ್ಳುತ್ತಿರುವ ನಚ್ಚಿನ ನಟನ ಮಾಸ್​​ ಡೈಲಾಗ್​ ಕಂಡು ಪುಳಕಿತರಾಗುತ್ತಿದ್ದಾರೆ. ಪೋಸ್ಟರ್​​ಗಳಿಂದಲೇ ಸಾಕಷ್ಟು ಕ್ರೇಜ್​ ಹುಟ್ಟುಹಾಕಿದ್ದ 'ಪಠಾಣ್‌' ಟೀಸರ್‌ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಅಭಿಮಾನಿಗಳಿಂದ ಶುಭಾಶಯಗಳೂ ಸಹ ಹರಿದುಬರುತ್ತಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಜನವರಿ 25, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ. ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಚೆನ್ನೈ ಎಕ್ಸ್‌ಪ್ರೆಸ್ ನಂತರ ದೀಪಿಕಾ ಮತ್ತು ಶಾರುಖ್ ಖಾನ್ ಅವರ ನಾಲ್ಕನೇ ಚಿತ್ರ ಇದಾಗಿದೆ.

ಪಠಾಣ್‌ನ ಹೊರತಾಗಿ ಅಟ್ಲೀ ನಿರ್ದೇಶನದ ಜವಾನ್‌ ಚಿತ್ರದಲ್ಲಿಯೂ ನಟಿಸಿದ್ದಾರೆ. ಶಾರುಖ್​ ಖಾನ್​ ಜೊತೆ ತಾಪ್ಸಿ ಪನ್ನು ಮತ್ತು ನಯನತಾರಾ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಹಿರಾನಿ ನಿರ್ಮಾಣ ಮಾಡುತ್ತಿದ್ದು ಜೂನ್ 2, 2023 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ:ಬಾಲಿವುಡ್ ಬಾದಷಾ ಶಾರುಖ್​ ಖಾನ್​ ಹುಟ್ಟುಹಬ್ಬ: ಮರು ಬಿಡುಗಡೆಗೆ ಸಜ್ಜಾದ ಡಿಡಿಎಲ್​ಜೆ ಸಿನಿಮಾ

ABOUT THE AUTHOR

...view details