ಬಾಲಿವುಡ್ನ ಬಹು ನಿರೀಕ್ಷಿತ 'ಪಠಾಣ್'ನ ಬೇಶರಂ ರಂಗ್ ವಿವಾದದ ನಡುವೆ ಸೂಪರ್ ಸ್ಟಾರ್ ಶಾರುಖ್ ಖಾನ್ 2022ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು.
ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿರುವ ಕಿಂಗ್ ಖಾನ್ ತಮ್ಮ ವಿನಯವಂತಿಕೆಯಿಂದಲೂ ಜನರ ಮನ ಗೆಲ್ಲುವ ಅವಕಾಶ ತಪ್ಪಿಸಿಕೊಳ್ಳಲ್ಲ. ಶಾರುಖ್ ಖಾನ್ ಅವರು ಸೂಪರ್ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಅವರ ಪಾದಗಳನ್ನು ಸ್ಪರ್ಶಿಸಿ ಸ್ವಾಗತಿಸಿದರು. ಬಳಿಕ ಅಮಿತಾಭ್ ಅವರನ್ನು ಅಪ್ಪಿಕೊಂಡು ತಮ್ಮ ಗೌರವ, ಪ್ರೀತಿ ವ್ಯಕ್ತಪಡಿಸಿದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಶಾರುಖ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
2022ರ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶಾರುಖ್ ಖಾನ್, ಅಮಿತಾಭ್, ಜಯಾ ಬಚ್ಚನ್ ಅಲ್ಲದೇ ರಾಣಿ ಮುಖರ್ಜಿ ಕೂಡ ಭಾಗಿಯಾಗಿದ್ದರು. ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ನಟರ ಐಕಾನಿಕ್ ಚಿತ್ರ 'ಕಭಿ ಖುಷಿ ಕಭಿ ಗಮ್' ನೆನಪಿಸಿಕೊಂಡರು. 2001ರಲ್ಲಿ ಬಿಡುಗಡೆ ಆದ 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಶಾರುಖ್, ಜಯಾ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಅವರ ಮಗನ ಪಾತ್ರ ನಿರ್ವಹಿಸಿದ್ದರು. ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ಕಾಜೋಲ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.