ವಿಶ್ವಾದ್ಯಂತ ಜನಪ್ರಿಯತೆ ಗಳಿಸಿರುವ ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ 2023ನೇ ವರ್ಷ ಬಹಳ ಮಹತ್ವ ಹೊಂದಿದೆ. ಏಕೆಂದರೆ ಒಂದೇ ವರ್ಷದಲ್ಲಿ ತೆರೆಕಂಡ ಅವರ ಮೂರೂ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಸಾವಿರ ಕೊಟಿ ರೂ. ಸಂಪಾದಿಸಿದ ಎರಡು ಬ್ಲಾಕ್ಬಸ್ಟರ್ ಮತ್ತು ಒಂದು ಸೂಪರ್ ಹಿಟ್ ಚಿತ್ರ ಹೊಂದಿರುವ ಭಾರತದ ಏಕೈಕ ನಟ ಇವರು.
2018ರ ಕೊನೆಯಲ್ಲಿ ತೆರೆ ಕಂಡ 'ಝೀರೋ' ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ. ನಾಲ್ಕು ವರ್ಷಗಳ ಬಿಡುವಿನ ಬಳಿಕ 'ಪಠಾಣ್'ನೊಂದಿಗೆ ಶಾರುಖ್ ಬಿಗ್ ಸ್ಕ್ರೀನ್ಗೆ ಮರಳಿದರು. ಬಹುನಿರೀಕ್ಷಿತ ಚಿತ್ರಕ್ಕೆ ಆರಂಭದಲ್ಲಿ ಅನೇಕ ಸವಾಲುಗಳು ಎದುರಾಯಿತಾದರೂ ಸಿನಿಮಾ ಭಾರಿ ಯಶಸ್ಸು ಕಂಡಿತು. ನಂತರ ಬಂದ ಜವಾನ್ ಕೂಡ ಒಂದು ಸಾವಿರ ಕೋಟಿ ರೂ. ಕ್ಲಬ್ ಸೇರುವಲ್ಲಿ ಯಶಸ್ವಿಯಾಯಿತು. ಇತ್ತೀಚಿನ ಡಂಕಿ ಸಿನಿಮಾ ಸಹ ಉತ್ತಮ ಪ್ರದರ್ಶನ ಕಂಡು ಸೂಪರ್ ಹಿಟ್ ಆಗಿದೆ.
ಈ ಮೂಲಕ ಎಸ್ಆರ್ಕೆ ತನ್ನ ಸಿನಿ ಕೆರಿಯರ್ನಲ್ಲಿ '2023' ಪ್ರಜ್ವಲಿಸಿತು. ಸಿದ್ಧಾರ್ಥ್ ಆನಂದ್ ಅವರ ಪಠಾಣ್, ಅಟ್ಲೀ ಕುಮಾರ್ ಅವರ ಜವಾನ್ ಮತ್ತು ರಾಜ್‌ಕುಮಾರ್ ಹಿರಾನಿಯವರ ಡಂಕಿ ಮೂಲಕ ಬಾಕ್ಸ್ ಆಫೀಸ್ನಲ್ಲಿ ಶಾರುಖ್ ಧೂಳೆಬ್ಬಿಸಿದರು. ಈ ಹಿನ್ನೆಲೆಯಲ್ಲಿ ನಟನ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆ, ಕುತೂಹಲ ಹೆಚ್ಚಾಗಿದೆ. ಈ ಜನವರಿ ಕೊನೆಗೆ/ಅತಿ ಶೀಘ್ರದಲ್ಲೇ ಮುಂದಿನ ಸಿನಿಮಾ ಘೋಷಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ತಮ್ಮ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗಮನಾರ್ಹ ಪರಿಣಾಮ ಬೀರಿರುವುದರ ಹಿನ್ನೆಲೆಯಲ್ಲಿ ಶಾರುಖ್ ಸಂತೋಷಗೊಂಡಿದ್ದಾರೆ. ಹೊಸ ವರ್ಷವನ್ನು ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಆಚರಿಸಿದ್ದರು. ಮುಂದಿನ ಸಿನಿಮಾ ಘೋಷಿಸಲು ಕಾತರರಾಗಿರುವ ಅಭಿಮಾನಿಗಳಿಗೆ ಎಸ್ಆರ್ಕೆ ಸ್ವೀಟ್ ಸಪ್ರೈಸ್ ನೀಡಲಿದ್ದಾರೆ. 58ರ ಹರೆಯದ ನಟ ಈ ತಿಂಗಳು ಮೂರು ಹೊಸ ಪ್ರೊಜೆಕ್ಟ್ಸ್ ಘೋಷಿಸುವ ನಿರೀಕ್ಷೆ ಇದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.