ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಜವಾನ್ನ ಮೊದಲ ಹಾಡಿನ ಪೋಸ್ಟರ್ ಇಂದು ಅನಾವರಣಗೊಂಡಿದೆ. ಪೋಸ್ಟರ್ ಅನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಎಸ್ಆರ್ಕೆ, "ದಿ ಸೌಂಡ್ ಆಫ್ ಜವಾನ್! ಹಾಡು ಇಂದು ಮಧ್ಯಾಹ್ನ 12.50ಕ್ಕೆ ಬಿಡುಗಡೆಯಾಗಲಿದೆ. ಜಿಂದಾ ಬಂದಾ (ಹಿಂದಿ), ವಂದಾ ಎಡಮ್ (ತಮಿಳು), ದುಮ್ಮೆ ಧೂಲಿಪೆಲಾ (ತೆಲುಗು). ಜವಾನ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸೆಪ್ಟೆಂಬರ್ 7, 2023ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ" ಎಂದು ಕ್ಯಾಪ್ಶನ್ ನೀಡಿದ್ದಾರೆ.
ಪೋಸ್ಟರ್ನಲ್ಲಿ ಶಾರುಖ್ ಡಾಪರ್ ಲುಕ್ನೊಂದಿಗೆ ಪೋಸ್ ನೀಡಿರುವುದನ್ನು ಕಾಣಬಹುದು. ಕಪ್ಪು ಶರ್ಟ್ ಧರಿಸಿ, ಕೂಲಿಂಗ್ ಗ್ಲಾಸ್ನೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದಾರೆ. 'ಜವಾನ್ನ ಸದ್ದಿಗೆ ಸಿದ್ಧರಾಗಿ' ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಜುಲೈ 31 (ಇಂದು) ರಂದು ಈ ಹಾಡು ಹಿಂದಿ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಾಡಿನ ಹಿಂದಿ ಆವೃತ್ತಿಗೆ ಜಿಂದಾ ಬಂದಾ (Zinda Banda) ಎಂದು ಹೆಸರಿಡಲಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಶಾರುಖ್ ಖಾನ್ ಜಿಂದಾ ಬಂದಾ ಹಾಡಿನಲ್ಲಿ ಸಾವಿರಾರು ಹುಡುಗಿಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಮಧುರೈ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳ 1,000ಕ್ಕೂ ಹೆಚ್ಚು ನೃತ್ಯಗಾರರಿಂದ ಐದು ದಿನಗಳ ಕಾಲ ಚೆನ್ನೈನಲ್ಲಿ ಈ ಸಾಂಗ್ ಶೂಟ್ ಮಾಡಲಾಗಿದೆ. 15 ಕೋಟಿ ರೂಪಾಯಿಗಳ ಬಿಗ್ ಬಜೆಟ್‌ನಲ್ಲಿ ಈ ಸಾಂಗ್ ನಿರ್ಮಿಸಲಾಗಿದೆ. ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದು, ಶೋಬಿ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ.