ಕರ್ನಾಟಕ

karnataka

ETV Bharat / entertainment

Jawan Cinema: ಜೋಶ್​ನಿಂದ 'ಜವಾನ್' ಸಿನಿಮಾ ನೋಡಿ.. ಅಭಿಮಾನಿಗಳಿಗೆ ಶಾರುಖ್ ಕರೆ - Jawan movie updates

ಜವಾನ್ ಸಿನಿಮಾದ ಟೀಸರ್​ ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

Shah Rukh Khan starrer Jawan
ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ

By

Published : Jun 29, 2023, 4:58 PM IST

ಬಾಲಿವುಡ್​​ ಕಿಂಗ್​​ ಶಾರುಖ್ ಖಾನ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಕಂಪ್ಲೀಟ್​ ಆ್ಯಕ್ಷನ್​ ಥ್ರಿಲ್ಲರ್​​ ಜವಾನ್ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾ ಬಿಡುಗಡೆಗೆ ಎರಡು ತಿಂಗಳಿದ್ದು, ಶಾರುಖ್ ಖಾನ್ ಆಗಲಿ, ಚಿತ್ರತಂಡದವರಾಗಲಿ ಈವರೆಗೆ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಇತ್ತೀಚೆಗೆ ಖುದ್ದು ಸೂಪರ್​ ಸ್ಟಾರ್​ ಶಾರುಖ್ ಖಾನ್​ ಅವರೇ ಚಿತ್ರದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದರು. ಹೀಗಾಗಿ ಸಿನಿಮಾ ಮೇಲಿನ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ತಮ್ಮ ಅಭಿಮಾನಿಗಳೊಂದಿಗೆ ಆಗಾಗ್ಗೆ ಟ್ವಿಟರ್​ನಲ್ಲಿ #AskSRK ಎಂಬ ಪ್ರಶ್ನೋತ್ತರ ಸೆಷನ್ ನಡೆಸುತ್ತಾರೆ. ಶಾರುಖ್ ಖಾನ್ ಚಿತ್ರರಂಗಕ್ಕೆ ಕಾಲಿಟ್ಟು 31 ವರ್ಷಗಳಾಗಿವೆ. ಈ ಸಂಭ್ರಮವನ್ನು ಅವರು ಅಭಿಮಾನಿಗಳೊಂದಿಗೆ ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆಚರಿಸಿಕೊಂಡಿದ್ದರು.

ಈ 31 ವರ್ಷಗಳಲ್ಲಿ ನೀವು ನಿರಂತರವಾಗಿ ಪಾಲಿಸುತ್ತಿರುವ ಒಂದು ವಿಷಯ ಏನು ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಖಾನ್, 'ಒಂದು ಚಿತ್ರವನ್ನು ಒಪ್ಪಿಕೊಂಡ ನಂತರ ನನ್ನ ಪಾತ್ರದ ಹಿಂದಿನ ಕಥೆ ಮತ್ತು ಸಿದ್ಧಾಂತಗಳನ್ನು ಅಂದಾಜು ಮಾಡಿ ಬರೆದಿಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಅದನ್ನು ನಿರ್ದೇಶಕರ ಜೊತೆಗೆ ಹಂಚಿಕೊಳ್ಳುತ್ತೇನೆ. ಅದು ಕಥೆಯ ರೂಪದಲ್ಲಿರಬಹುದು ಅಥವಾ ಕಾವ್ಯದ ರೂಪದಲ್ಲೂ ಇರಬಹುದು. ಕೆಲವೊಮ್ಮೆ ಯಾರಿಗೂ ತೋರಿಸದೇ ಎತ್ತಿಟ್ಟುಕೊಂಡಿದ್ದೂ ಇದೆ' ಎಂದು ಹೇಳಿದ್ದಾರೆ ಶಾರುಖ್ ಖಾನ್.

ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರ

ತಮ್ಮ ಗಂಡು ಮಕ್ಕಳಿಗೆ 'ಪಠಾಣ್' ಮತ್ತು 'ಜವಾನ್' ಎಂಬ ಹೆಸರಿಡಬೇಕೆಂದುಕೊಂಡಿದ್ದೇನೆ ಎಂದು ಅಭಿಮಾನಿಯೊಬ್ಬರ ತಮಾಷೆಯ ಪ್ರಶ್ನೆಗೆ, 'ಹೆಸರು ಅದ್ಭುತವಾಗಿದೆ. ಆದರೆ, ಅದಕ್ಕೂ ಮಿಗಿಲಾದ ಇನ್ನೂ ಒಳ್ಳೆಯ ಹೆಸರನ್ನು ಇಡಿ' ಎಂದು ಕಿಂಗ್ ಖಾನ್ ಸಲಹೆ ನೀಡಿದ್ದಾರೆ.

ಜವಾನ್ ಚಿತ್ರ ನೋಡಲು ಜೋಶ್​ನಲ್ಲಿ ಚಿತ್ರಮಂದಿರಕ್ಕೆ ಹೋಗಿ ಎಂದು ಕರೆ ನೀಡಿದ ಶಾರುಖ್ ಖಾನ್, ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ಚೆನ್ನಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಜವಾನ್ ಟೀಸರ್ ಅನಾವರಗೊಳಿಸಲು ಚಿತ್ರತಂಡದ ಬಳಿ ಎರಡು ದಿನಾಂಕಗಳಿವೆ. ಜುಲೈ 7 ಅಥವಾ 15ರಂದು ಜವಾನ್ ಟೀಸರ್‌ನ ಗ್ರ್ಯಾಂಡ್ ಲಾಂಚ್​ಗಾಗಿ ಸಿದ್ಧತೆಗಳು ನಡೆಯುತ್ತಿವೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯನ್ನು ಆಹ್ವಾನಿಸಲಿದ್ದು, ಅವರ ಸಮಯ ಮತ್ತು ಚಿತ್ರತಂಡದ ಯೋಜನೆ ಗಮನದಲ್ಲಿಟ್ಟುಕೊಂಡು ದಿನಾಂಕ ಅಂತಿಮಗೊಳಿಸಲಾಗುವುದು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ನಡುವೆ ಜವಾನ್ ಟೀಸರ್ ಅನಾವರಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ:Parineeti Chopra: 'ಪರಿ'ಯ ಸೌಂದರ್ಯ ಹೆಚ್ಚಿಸಿದ ಸರಳತೆ - ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳ ಮೆಚ್ಚುಗೆ

ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜವಾನ್ ಚಿತ್ರವನ್ನು ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್​ಟೈನ್​ಮೆಂಟ್​​ ಸಂಸ್ಥೆ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲೀ ನಿರ್ದೇಶನ ಮಾಡಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ. ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಈ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:ರಾಜಮೌಳಿ ಸ್ಟೈಲಿಶ್​ ಲುಕ್: ಜಕ್ಕಣ್ಣ ಇಲ್ಲದ ಜಾಗವಿಲ್ಲ, ಜಾಹೀರಾತೊಂದರಲ್ಲಿ ಆರ್​ಆರ್​ಆರ್​ ಡೈರೆಕ್ಟರ್​ ಮಿಂಚು!​​

ABOUT THE AUTHOR

...view details