ಬಾಲಿವುಡ್ ಕಿಂಗ್ ಖ್ಯಾತಿಯ ಶಾರುಖ್ ಖಾನ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಡಂಕಿ''. ಈಗಾಗಲೇ 2023ರಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಎಸ್ಆರ್ಕೆ ತಮ್ಮ ಮೂರನೇ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ಜನಪ್ರಿಯ ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್ನ ಚೊಚ್ಚಲ ಚಿತ್ರ 'ಡಂಕಿ' ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಡಂಕಿ ಟ್ರೇಲರ್:ಈಗಾಗಲೇ ಸಿನಿಮಾದ ಟೀಸರ್, ಹಾಡುಗಳು ಅನಾವರಣಗೊಳಿಸಿ ಚಿತ್ರತಂಡ ಪ್ರೇಕ್ಷಕರ ಉತ್ಸಾಹ ಹೆಚ್ಚಿಸಿದೆ. ಟ್ರೇಲರ್ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಫೈನಲಿ ಚಿತ್ರತಂಡ ಇಂದು ಕಾಮಿಡಿ ಡ್ರಾಮಾದ ಟ್ರೇಲರ್ ಅನಾವರಣಗೊಳಿಸಿ ಸಿನಿಪ್ರಿಯರ ಉತ್ಸಾಹ ಹೆಚ್ಚಿಸಿದೆ.
ಟೀಸರ್, ಲುಟ್ ಪುಟ್ ಗಯಾ ಮತ್ತು ನಿಕ್ಲೆ ತೆ ಕಭಿ ಹಮ್ ಘರ್ ಸೇ ಹಾಡುಗಳ ನಂತರ ಟ್ರೇಲರ್ ಅನಾವರಣಗೊಂಡಿದೆ. ಇದನ್ನು ಡಂಕಿ ಡ್ರಾಪ್ 4 ಎಂದು ಹೆಸರಿಸಲಾಗುತ್ತಿದೆ. ಬಹು ನಿರೀಕ್ಷಿತ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ನೆಟಿಜನ್‌ಗಳು ಎಕ್ಸ್ (ಟ್ವಿಟರ್) ಸೇರಿದಂತೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.
ಆ್ಯಕ್ಷನ್ನಿಂದ ಹಾಸ್ಯಕ್ಕೆ; ವಿದೇಶಕ್ಕೆ ಹೋಗಲು ಇಚ್ಛಿಸುವವರ, ಭಾಷಾ ಸಮಸ್ಯೆ ಎದುರಿಸುವವರ, ಅಲ್ಲಿ ಸಿಲುಕಿಕೊಳ್ಳುವವರ ಸುತ್ತ ಸಿನಿಮಾ ಕಥೆ ಸುತ್ತುತ್ತದೆ. ಪಠಾಣ್ ಮತ್ತು ಜವಾನ್ ಮೂಲಕ ಆ್ಯಕ್ಷನ್ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ಶಾರುಖ್ ಖಾನ್ ಈ ಚಿತ್ರದಲ್ಲಿ ನಿಮ್ಮ ಹೊಟ್ಟೆ ಹುಣ್ಣಾಗಿಸುವಷ್ಟು ನಗುವಿನ ಮನರಂಜನೆ ಕೊಡಲಿದ್ದಾರೆ. ಯುವ ಮತ್ತು ವಯಸ್ಸಾದ ಪಾತ್ರದಲ್ಲಿ ಎಸ್ಆರ್ಕೆ ಕಾಣಿಸಿಕೊಳ್ಳಲಿದ್ದಾರೆ.
ನೆಟ್ಟಿಗರ ರಿಯಾಕ್ಷನ್ಸ್:ಡಂಕಿ ಡ್ರಾಪ್ 4ರಲ್ಲಿ ಸಿನಿಮಾದ ಕಥಾವಸ್ತುವಿನ ಒಂದು ನೋಟ ಸಿಕ್ಕಂತಾಗಿದೆ. ಸಂಜು, ಪಿಕೆ, 3 ಈಡಿಯಟ್ಸ್ ಮತ್ತು ಮುನ್ನಾ ಭಾಯ್ ಅಂತಹ ಹಿಟ್ ಸಿನಿಮಾಗಳ ನಿರ್ದೇಶಕರು ಇದೇ ಮೊದಲ ಬಾರಿಗೆ ಎಸ್ಆರ್ಕೆ ಜೊತೆ ಕೈ ಜೋಡಿಸಿರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ನಿರೀಕ್ಷೆಗೆ ತಕ್ಕಂತೆ ಟ್ರೇಲರ್ ಮೂಡಿಬಂದಿದ್ದು, ಸಿನಿಪ್ರಿಯರು ಸಂಪೂರ್ಣ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಬಾಲಿವುಡ್ನ ಐಕಾನ್ಗಳು ಸೇರಿ ಸಿನಿಮಾ ಮಾಡಿರುವ ಹಿನ್ನೆಲೆ ಸಿನಿಪ್ರಿಯರು ಹಬ್ಬಾಚರಿಸುತ್ತಿದ್ದಾರೆ. ಟ್ರೇಲರ್ ವಿಕ್ಷಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯೆ ಕೊಡುತ್ತಿದ್ದಾರೆ. "ರಾಜ್‌ಕುಮಾರ್ ಹಿರಾನಿ ನಿಮ್ಮನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ಕಿಂಗ್ ಆಫ್ ಕಂಟೆಂಟ್ ಮೀಟ್ಸ್ ಬಾಲಿವುಡ್ ಕಿಂಗ್, ಡಂಕಿ ಟ್ರೇಲರ್" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.