ಕರ್ನಾಟಕ

karnataka

ETV Bharat / entertainment

ಉತ್ತಮ ಪ್ರದರ್ಶನ ಕಾಣುತ್ತಿರುವ 'ಡಂಕಿ': ಕಲೆಕ್ಷನ್​ ಮಾಹಿತಿ ಹೀಗಿದೆ - ಎಸ್​​ಆರ್​ಕೆ

ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಐದು ದಿನಗಳಲ್ಲಿ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 128.13 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Dunki collection
ಡಂಕಿ ಕಲೆಕ್ಷನ್​​

By ETV Bharat Karnataka Team

Published : Dec 26, 2023, 11:21 AM IST

ಬಾಲಿವುಡ್​ ಕಿಂಗ್​​​ ಶಾರುಖ್ ಖಾನ್ ಮತ್ತು ಸ್ಟಾರ್​ ಡೈರೆಕ್ಟರ್​​ ರಾಜ್​ಕುಮಾರ್​ ಹಿರಾನಿ ಕಾಂಬಿನೇಶನ್​ನ ಡಂಕಿ ಸಿನಿಮಾ ಕಳೆದ ಗುರುವಾರ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ವಿಮರ್ಶಕರು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಬಾಕ್ಸ್ ಆಫೀಸ್​ ಪ್ರಯಾಣ ಉತ್ತಮವಾಗಿದೆಯಾದರೂ, ಹಿಂದಿನ ಪಠಾಣ್​ ಮತ್ತು ಜವಾನ್​ ಚಿತ್ರಗಲಿಗೆ ಹೋಲಿಸಿದರೆ ಕೊಂಚ ಹಿಂದಿದೆ ಅಂತಲೇ ಹೇಳಬಹುದು. ಮತ್ತೊಂದೆಡೆ ಡಂಕಿ ಜೊತೆಗೆ ತೆರೆಕಂಡಿರುವ ಸಲಾರ್​ ಗಳಿಕೆ ಅದ್ಭುತವಾಗಿದೆ.

2023ರಲ್ಲಿ ಪಠಾಣ್​ ಮತ್ತು ಜವಾನ್​ ಎಂಬ ಎರಡು ಬ್ಲಾಕ್​​ ಬಸ್ಟರ್ ಹಿಟ್​ ಸಿನಿಮಾ ಕೊಟ್ಟ ಶಾರುಖ್​ ಖಾನ್​ ಅವರ ಮೂರನೇ ಬಿಗ್​ ಪ್ರಾಜೆಕ್ಟ್​​ 'ಡಂಕಿ'. ಮೊದಲ ವಾರಾಂತ್ಯ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿರುವ ಮೂರನೇ ಚಿತ್ರವಿದು. ಕ್ರಿಸ್ಮಸ್ ರಜೆ ಹಿನ್ನೆಲೆ ಸೋಮವಾರದಂದು ಕಾಮಿಡಿ ಡ್ರಾಮಾ ಉತ್ತಮ ಪ್ರದರ್ಶನ ಕಂಡಿದೆ. 'ಪಿ.ಕೆ' ಸಿನಿಮಾ ಖ್ಯಾತಿಯ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:'ಸಲಾರ್​​' ಸ್ಪೀಡ್​​ಗಿಲ್ಲ ಬ್ರೇಕ್​: ​ಕಲೆಕ್ಷನ್​​ ಕಂಡು ಹುಬ್ಬೇರಿಸಿದ ಪ್ರೇಕ್ಷಕರು!

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸೋಮವಾರದ ವೇಳೆಗೆ ಈ ಚಿತ್ರ ಭಾರತದಲ್ಲಿ 125 ಕೋಟಿ ರೂ. ಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಲಾರ್​ಗೂ ಒಂದು ದಿನ ಮೊದಲು ತೆರೆಕಂಡ 'ಡಂಕಿ' ಮೊದಲ ದಿನ 29.2 ಕೋಟಿ ರೂ., ಎರಡನೇ ದಿನ 20.12 ಕೋಟಿ ರೂ., ಮೂರನೇ ದಿನ 25.61 ಕೋಟಿ ರೂ., ನಾಲ್ಕನೇ ದಿನ 30.7 ಕೋಟಿ ಗಳಿಸಿದ್ದು, ಐದನೇ ದಿನ ಅಂದರೆ ಸೋಮವಾರ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 22.50 ಕೋಟಿ ರೂ. ಗಳಿಸಿದೆ. ಭಾರತದಲ್ಲಿ ಸಿನಿಮಾದ ಒಟ್ಟು ಗಳಿಕೆ 128.13 ಕೋಟಿ ರೂ. ಆಗಿದೆ.

ಇದನ್ನೂ ಓದಿ:ಶುರಾ ಖಾನ್ ಜೊತೆಗೆ ನಿಖಾ ಮಾಡಿಕೊಂಡ ಫೋಟೋಗಳನ್ನು ಹಂಚಿಕೊಂಡ ನಟ ಅರ್ಬಾಜ್ ಖಾನ್

ಬ್ಯಾಕ್ - ಟು - ಬ್ಯಾಕ್ ಆ್ಯಕ್ಷನ್ ಸಿನಿಮಾಗಳ ಮೂಲಕ ಬ್ಲಾಕ್​ಬಸ್ಟರ್ ಹಿಟ್​ ಕೊಟ್ಟ ಶಾರುಖ್​​ ಖಾನ್​​ 2023ರಲ್ಲೇ ತಮ್ಮ ಮತ್ತೊಂದು ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡರು. ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಿರ್ಮಾಣದ ಡಂಕಿ ಡಿಸೆಂಬರ್ 21ರಂದು ತೆರೆಗಪ್ಪಳಿಸಿತು. ಪ್ರಭಾಸ್ ಅವರ ಸಲಾರ್ ಡಿ. 22ರಂದು ಬಿಡುಗಡೆ ಆಯಿತು. ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಸಲಾರ್‌ನೊಂದಿಗೆ ಸ್ಪರ್ಧಿಸುತ್ತಿದೆ. ಸಲಾರ್​ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಈಗಾಗಲೇ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ.

ABOUT THE AUTHOR

...view details