'ಜವಾನ್' ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್ ಅವರ ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. 'ಜವಾನ್' ಅಧಿಕೃತ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಜೂನ್ 2ರಂದು ತೆರೆಕಾಣಬೇಕಿದ್ದ ಚಿತ್ರ, ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಹೌದು, ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜವಾನ್ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
ಶಾರುಖ್ ಖಾನ್ ತಮ್ಮ ಚಲನಚಿತ್ರವನ್ನು ಹೇಗೆ ಪ್ರಚಾರ ಮಾಡುವುದು ಮತ್ತು ಅಭಿಮಾನಿಗಳಲ್ಲಿ ಹೇಗೆ ಸಂಪರ್ಕ ಸಾಧಿಸಬೇಕೆಂಬುದರ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿದ್ದಾರೆ. ಅವರ ಬಹುನಿರೀಕ್ಷಿತ ಜವಾನ್‌ನ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಂತರ, ನಟ ತಮ್ಮ ಸೆಲ್ಫಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋದಲ್ಲಿ ಶಾರುಖ್ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೋಸ್ಟ್ ಶೇರ್ ಮಾಡಿ ಮನವಿಯಿಟ್ಟ ಶಾರುಖ್: ''ಎಲ್ಲರಿಗೂ ಧನ್ಯವಾದಗಳು. ಕೆಲವರು ಜವಾನ್ ಪೋಸ್ಟರ್‌ನಲ್ಲಿ ನನ್ನ ಮುಖ ಕಾಣಿಸುತ್ತಿಲ್ಲ ಎಂದು ಹೇಳಿದರು. ಹಾಗಾಗಿ ನನ್ನ ಮುಖವನ್ನು (ಫೋಟೋ) ಇಲ್ಲಿ ಹಾಕುತ್ತಿದ್ದೇನೆ. ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಹೇಳಬೇಡಿ (ಮನವಿ). ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಸೆಪ್ಟೆಂಬರ್ 7ರಂದು ಥಿಯೇಟರ್‌ಗಳಲ್ಲಿ ನಿಮ್ಮನ್ನು ಭೇಟಿಯಾಗುವ ಭರವಸೆ ಇದೆ. ಲವ್ ಯು, ಬೈ" ಎಂದು ಕಿಂಗ್ ಖಾನ್ ಬರೆದುಕೊಂಡಿದ್ದಾರೆ.
ಸೆಲೆಬ್ರಿಟಿ, ಅಭಿಮಾನಿಗಳ ರಿಯಾಕ್ಷನ್:ನಟ ಶಾರುಖ್ ಖಾನ್ ಅವರ ಈ ಪೋಸ್ಟ್ ಸೆಲೆಬ್ರಿಟಿ ಮತ್ತು ಅಭಿಮಾನಿಗಳ ಪ್ರತಿಕ್ರಿಯೆ ಗಳಿಸಿದೆ. ಸಾನ್ಯಾ ಮಲ್ಹೋತ್ರಾ ಫೈಯರ್ ಎಮೋಜಿಗಳನ್ನು ಪೋಸ್ಟ್ಗೆ ಹಾಕಿದ್ದರೆ, ಫಾತಿಮಾ ಸನಾ ಶೇಖ್ ಅವರು ಹಾರ್ಟ್ ಎಮೋಜಿ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬರು "ನೀವು ಅತ್ಯುತ್ತಮ" ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೋರ್ವ ಅಭಿಮಾನಿ "ಯಾವಾಗಲೂ ಜವಾನ್ ಶಾ" ಎಂದು ಬರೆದಿದ್ದಾರೆ.