ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜವಾನ್'. ಸೆಪ್ಟಂಬರ್ 7ರಂದು ತೆರೆಗಪ್ಪಳಿಸಲು ಸಿದ್ಧವಾಗಿದೆ. ಈ ಆಕ್ಷನ್ ಡ್ರಾಮಾ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ಈಗಾಗಲೇ ಪ್ರೀ-ಟಿಕೆಟ್ ಬುಕ್ಕಿಂಗ್ ಪ್ರೊಸೆಸ್ ಓಪನ್ ಆಗಿದ್ದು, ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ. ಜೊತೆಗೆ 'ಜವಾನ್' ಬಿಡುಗಡೆಗೂ ಮುನ್ನವೇ ಈವರೆಗಿನ ಅನೇಕ ದಾಖಲೆಗಳನ್ನು ಮುರಿದಿದ್ದು, ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಮೊದಲ ದಿನದ ಕಲೆಕ್ಷನ್ ಹೀಗಿರಲಿದೆ..ಶಾರುಖ್ ಖಾನ್ ಅವರ 'ಜವಾನ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮತ್ತೊಮ್ಮೆ ಸುನಾಮಿ ಎಬ್ಬಿಸಲಿದೆ. ಚಿತ್ರದ ಮುಂಗಡ ಬುಕ್ಕಿಂಗ್ಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನವೇ ಭರ್ಜರಿ ಓಪನಿಂಗ್ ಹೊಂದುವ ನಿರೀಕ್ಷೆ ಇದೆ. ಫಸ್ಟ್ ಡೇ 70 ರಿಂದ 75 ಕೋಟಿ ರೂಪಾಯಿ ವ್ಯವಹಾರವನ್ನು 'ಜವಾನ್' ಮಾಡಲಿದೆ. ಈ ಮೂಲಕ ಬಾಹುಬಲಿ 2 (58 ಕೋಟಿ ರೂ.), ಕೆಜಿಎಫ್ 2 (61 ಕೋಟಿ ರೂ.) ಮತ್ತು ಪಠಾಣ್ (55 ಕೋಟಿ ರೂ.) ದಾಖಲೆಗಳನ್ನು ಉಡೀಸ್ ಮಾಡಲಿದೆ.
ವಿಶೇಷ ದಾಖಲೆ ಬರೆಯಲಿರುವ ಶಾರುಖ್: ಶಾರುಖ್ ಖಾನ್ ಅವರು 'ಜವಾನ್' ಮೂಲಕ ವಿಶೇಷ ಸಾಧನೆಯನ್ನು ಮಾಡಲಿದ್ದಾರೆ. ಈ ವರ್ಷ ತೆರೆಕಂಡ 'ಪಠಾಣ್' ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಇದೀಗ 'ಜವಾನ್' ಚಿತ್ರ ಕೂಡ ಫಸ್ಟ್ ಡೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ. ಈ ಮೂಲಕ ಒಂದೇ ವರ್ಷದಲ್ಲಿ ಶಾರುಖ್ ಖಾನ್ ಅವರ ಎರಡೂ ಚಿತ್ರಗಳು 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಲಿದ್ದು, ಈ ವಿಶೇಷ ದಾಖಲೆಯನ್ನು ಸೃಷ್ಟಿಸಿದ ಹಿಂದಿ ಚಿತ್ರರಂಗದ ಮೊದಲ ಸ್ಟಾರ್ ಬಾದ್ ಶಾ ಆಗಲಿದ್ದಾರೆ.
ಎರಡನೇ 100 ಕೋಟಿ ಚಿತ್ರ: 'ಜವಾನ್' ಸಿನಿಮಾ ಹಿಂದಿ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಸೃಷ್ಟಿಸಲು ಹೊರಟಿದೆ. ಶಾರುಖ್ ಖಾನ್ ಮತ್ತೊಮ್ಮೆ ತಮ್ಮ ಎರಡನೇ ಚಿತ್ರವನ್ನು ಮೊದಲ ದಿನವೇ ವಿಶ್ವದಾದ್ಯಂತ 100 ಕೋಟಿ ಗಡಿ ದಾಟಿಸಲಿದ್ದಾರೆ. ಈ ಹಿಂದೆ ಪಠಾಣ್ ಚಿತ್ರವು ಮೊದಲ ದಿನದಂದು ವಿಶ್ವದಾದ್ಯಂತ 106 ಕೋಟಿ ರೂ. ದಾಟಿತ್ತು. ಭಾರತೀಯ ಚಿತ್ರರಂಗದಲ್ಲಿ ನಟರೊಬ್ಬರು ಇಂತಹ ಸಾಧನೆ ಮಾಡುತ್ತಿರುವುದು ಇದೇ ಮೊದಲು.